ಬೆಳಗಾವಿ: ನಾನು ಡ್ಯಾನ್ಸ್ ಕಲಿತಿಲ್ಲ. ಆದರೆ, ಬೇರೆಯವರನ್ನು ಕುಣಿಸೊದನ್ನ ಚೆನ್ನಾಗಿ ಕಲಿತಿದ್ದೇನೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವ್ಯಂಗ್ಯವಾಡಿದರು.
ನಗರದ ಕೆಎಲ್‌ಇ ಸೆಂಟಿನೇರಿ ಜೀರಿಗೆ ಸಭಾಗೃಹದಲ್ಲಿ ರಾಜು ಪವಾರ್ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾಮಿಡಿ ಚಾರಿಟೇಬಲ್ ಶೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ದೇಶದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣಬಹುದು. ಭಾಷೆ-ವೇಷ ಬೇರೆಯಾದರು ನಾವೆಲ್ಲರೂ ಭಾರತೀಯರೇ ಎಂದರು. ಇದನ್ನೂ ಓದಿ: ಗುಡ್ಡ ಕುಸಿತ- ಕರ್ನಾಟಕ, ಗೋವಾ ಸಂಪರ್ಕಿಸುವ ರಸ್ತೆ 5 ಘಂಟೆ ಬಂದ್
ಕೊರೊನಾ ಕಾಲದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಕಾರ್ಯ ಶ್ಲಾಘನೀಯ. ಅವರಿಗೂ ಮನೋರಂಜನೆ ಸಿಗಲೆಂದು ರಾಜು ಪವಾರ್ ಆಯೋಜಿಸಿರುವ ಕಾರ್ಯಕ್ರಮ ಪ್ರಶಂಸನೀಯ. ನನಗೆ ಡ್ಯಾನ್ಸ್ ಮಾಡೋಕೆ ಬರಲ್ಲ. ಆದರೆ ನಾನು ಬೇರೆಯವರನ್ನು ಕುಣಿಸುತ್ತೇನೆ ಎನ್ನುತ್ತಲೇ ವಿರೋಧಿಗಳಿಗೆ ಅವರು ಟಾಂಗ್ ನೀಡಿದರು. ಇದನ್ನೂ ಓದಿ: ಶಾಸಕ ಜಮೀರ್ ಮನೆ ಮೇಲೆ ಎಸಿಬಿ ದಾಳಿ – ಸಿಎಂ ಹೇಳಿದ್ದೇನು?