BelgaumDistrictsKarnatakaLatestMain Post

ಗುಡ್ಡ ಕುಸಿತ- ಕರ್ನಾಟಕ, ಗೋವಾ ಸಂಪರ್ಕಿಸುವ ರಸ್ತೆ 5 ಗಂಟೆ ಬಂದ್

Advertisements

ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರಕ್ಕೆ ಗೋವಾ ಸಮೀಪದ ಮಾಲಶೇಜ್ ಘಾಟ್‍ನಲ್ಲಿ ಗುಡ್ಡ ಕುಸಿದು, ಕರ್ನಾಟಕ ಸಂಪರ್ಕಿಸುವ ರಸ್ತೆ 5 ಘಂಟೆಗಳ ಕಾಲ ಬಂದ್ ಆಗಿತ್ತು. ಬಳಿಕ ಗೋವಾದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ 5 ಗಂಟೆಗಳ ಕಾರ್ಯಾಚರಣೆ ನಡೆಸಿ ರಸ್ತೆ ಸುಗಮಗೊಳಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ ಮಾಲಶೇಜ್ ಘಾಟ್ ಗೋವಾ ಸಮೀಪದಲ್ಲಿದೆ. ಪಶ್ಚಿಮ ಘಟ್ಟದಲ್ಲಿ ಮಳೆಯ ಆರ್ಭಟಕ್ಕೆ ಮಾಲಶೇಜ್ ಘಾಟ್‍ನಲ್ಲಿ ಗುಡ್ಡ ಕುಸಿತವಾಗಿತ್ತು. ಗುಡ್ಡ ಕುಸಿತದಿಂದ ಕರ್ನಾಟಕ-ಗೋವಾ ಸಂಪರ್ಕಿಸುವ ರಸ್ತೆಯಲ್ಲೂ ಸಂಚಾರ ಸಮಸ್ಯೆ ಉಂಟಾಗಿದ್ದು, ಅನ್ಮೋಡ್ ಘಾಟ್‍ನಲ್ಲಿ ಟ್ರಾಫಿಕ್ ಜಾಮ್ ಆಗಿ ಪ್ರಯಾಣಿಕರು ಪರದಾಡುವಂತಾಯಿತು.

ಗುಡ್ಡ ಕುಸಿತದ ಪರಿಣಾಮ ಮಣ್ಣು ಕಲ್ಲುಗಳು ಹೆದ್ದಾರಿಯನ್ನೇ ಆವರಿಸಿದ್ದು, ಸ್ಥಳಕ್ಕೆ ಗೋವಾದ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಆಗಮಿಸಿ ರಸ್ತೆ ಮೇಲೆ ಬಿದ್ದಿದ್ದ ಮಣ್ಣು-ಕಲ್ಲು ತೆರವು ಮಾಡಲು ಅಗ್ನಿಶಾಮಕ ಸಿಬ್ಬಂದಿ ಹೈರಾಣದರು. ಇದನ್ನೂ ಓದಿ: ಮಂತ್ರಾಲಯಕ್ಕೆ ಭೇಟಿ ನೀಡಿದ ಬಿ.ಸಿ.ನಾಗೇಶ್ ದಂಪತಿ

ಸತತ 5 ಗಂಟೆಗಳ ಕಾರ್ಯಾಚರಣೆ ಮೂಲಕ ಕರ್ನಾಟಕ ಸಂಪರ್ಕಿಸುವ ರಸ್ತೆಯಲ್ಲಿ ಬಂದ್ ಆಗಿದ್ದ ಸಂಚಾರವನ್ನು ಸುಗಮಗೊಳಿಸಿದ್ದಾರೆ. ಇತ್ತ ಗುಡ್ಡ ಕುಸಿತದಿಂದ ಯಾವುದೇ ಪ್ರಾಣಹಾನಿ ಆಗಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ರಸ್ತೆ ಮೇಲೇಯೇ ಗುಡ್ಡ ಕುಸಿದಿರುವ ದೃಶ್ಯವನ್ನು ಜನರು ಮೊಬೈನಲ್ಲಿ ಸೆರೆಹಿಡಿದಿದ್ದಾರೆ. ಇದನ್ನೂ ಓದಿ: ಭಾರೀ ಮಳೆ- ಉತ್ತರ ಕನ್ನಡ, ಉಡುಪಿ ಶಾಲಾ, ಕಾಲೇಜುಗಳಿಗೆ ರಜೆ

Live Tv

Leave a Reply

Your email address will not be published.

Back to top button