ಬೆಳಗಾವಿ: ಯುವಕನೊಬ್ಬ ತನ್ನ ಮದುವೆ ವೇಳೆ ಮಾವನ ಬಳಿ ಟ್ಯಾಂಕರ್ ಬೇಡಿಕೆ ಇಟ್ಟು ಪಾಲಿಕೆ ವಿರುದ್ಧ ವಿಭಿನ್ನ ಪ್ರತಿಭಟನೆ ನಡೆಸಿದ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನೀರಿನ ಬವಣೆ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ವಿಶಾಲ್ ಎಂಬಾತ ತನ್ನ ಮದುವೆ ವೇಳೆ ಪಾಲಿಕೆ ವಿರುದ್ಧ ವಿಭಿನ್ನ ಪ್ರತಿಭಟನೆ ನಡೆಸಿದ್ದಾನೆ. ಹೆಣ್ಣು ಕೊಟ್ಟ ಮಾವನಿಂದ ವಿಶಾಲ್ ಟ್ಯಾಂಕರ್ ಕೊಡಿಸಿಕೊಂಡಿದ್ದಾನೆ. ಅದರ ಮೇಲೆ ನೀರಿನ ಸಮಸ್ಯೆ ಬಗೆಹರಿಯುವವರೆಗೂ ಹನಿಮೂನ್‍ಗೆ ಹೋಗಲ್ಲ ಎಂದು ಬರೆದಿದ್ದಾನೆ. ನಂತರ ಅದೇ ಟ್ಯಾಂಕರ್ ಮೇಲೆ ಕುಳಿತು ನೂತನ ದಂಪತಿ ಕೊಲ್ಲಾಪುರದಲ್ಲಿ ಮೆರವಣಿಗೆ ಹೋಗಿದ್ದಾರೆ. ಈ ಘಟನೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: BBMP ಯಮ ಸ್ವರೂಪಿ ಕಸದ ಲಾರಿಗೆ ಮತ್ತೊಂದು ಬಲಿ – ಅಪಘಾತದಲ್ಲಿ ಮಹಿಳೆ ಸಾವು
Advertisement
Advertisement
ಕೊಲ್ಲಾಪುರದ ಮಂಗಳವಾರ ಪೇಟೆಯಲ್ಲಿ ಕಳೆದ 6 ತಿಂಗಳಿಂದ ನೀರಿನ ಸಮಸ್ಯೆ ಇದೆ. ಸಮರ್ಪಕ ನೀರು ಪೂರೈಕೆಗೆ ನವದಂಪತಿ ವಿಶಾಲ್ ಹಾಗೂ ಅಪರ್ಣಾ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾವನಿಗೆ ಮದುವೆ ಸಂದರ್ಭದಲ್ಲಿ ನೀರಿನ ಟ್ಯಾಂಕರ್ ಕೊಡಿ ಎಂದು ವಿಶಾಲ್ ಬೇಡಿಕೆ ಇಟ್ಟಿದ್ದ. ಅಳಿಯನ ಬೇಡಿಕೆಯಂತೆ ನೀರಿನ ಟ್ಯಾಂಕರ್ ಗಿಫ್ಟ್ ನೀಡಿದ್ದಾರೆ. ಟ್ಯಾಂಕರ್ ಮೇಲೆ ಕುಳಿತು ನವ ದಂಪತಿ ಅದ್ಧೂರಿ ಮೆರವಣಿಗೆ ನಡೆಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಪ್ರಧಾನಿ ಮನೆಗೆ ಬೆಂಕಿ ಇಟ್ಟ ಪ್ರತಿಭಟನಾಕಾರರು