ಬೆಂಗಳೂರು: ಒಂದೇ ಕುಟುಂಬದ 7 ಜನರ ಹತ್ಯೆ ಪ್ರಕರಣ ಸಂಬಂಧ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮತ್ತಿಬ್ಬರ ಶವ ಪತ್ತೆಯಾಗಿದ್ದು, ಈ ನಡುವೆ ಹಂತಕ ಕೊಲೆಗೂ ಮುನ್ನ ಕ್ರೈಂ ಥ್ರಿಲ್ಲರ್ ಸಿನಿಮಾ (Crime Thriller Cinema) ನೋಡಿ ಕೃತ್ಯ ಎಸಗಿದ್ದ ಎಂಬ ವಿಷಯ ತನಿಖೆಯಲ್ಲಿ (Bengaluru Horror) ಬಯಲಾಗಿದೆ.
ಒಂದೇ ಕುಟುಂಬದ ಏಳು ಮಂದಿಯ ಭೀಕರ ಹತ್ಯೆ ಪ್ರಕರಣದಲ್ಲಿ ಹಂತಕ ಇಂದುಶೇಖರ್ ಹೇಳಿಕೆಯಂತೆ ಚಾಮುಂಡಿ ತಪ್ಪಲಿನಲ್ಲಿ ಶಿವಕುಮಾರ್ ಮತ್ತು ದಿವ್ಯಾ ದಂಪತಿಯ ಮೃತದೇಹಗಳು ಪತ್ತೆಯಾಗಿದ್ದು, ಕುಟುಂಬಸ್ಥರ ಸಮ್ಮುಖದಲ್ಲಿ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಮುಂದುವರಿದಿದೆ. ಮೈಸೂರಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಿದ್ದು, ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ.
ಹಂತಕ ಇಂದುಶೇಖರ್ನ ಪ್ಲ್ಯಾನ್ ನೋಡಿ ಪೊಲೀಸರೇ ದಂಗಾಗಿದ್ದು, ಹತ್ಯೆಗೆ ಮುನ್ನ ಹಲವು ಇಂಗ್ಲಿಷ್ ಸಸ್ಪೆನ್ಸ್, ಕ್ರೈ ಥ್ರಿಲ್ಲರ್ ಸಿನಿಮಾಗಳನ್ನು ನೋಡಿದ್ದಾನೆ ಎನ್ನಲಾಗಿದೆ. ಬಾಡಿ ಹೇಗೆ ಡಿಸ್ಪೋಸ್ ಮಾಡಬೇಕು..? ಹೇಗೆ ಪ್ಯಾಕ್ ಮಾಡಬೇಕು ಅಂತಾ ಇಂಟರ್ನೆಟ್ ಜಾಲಾಡಿದ್ದನೆ.ಇದನ್ನೂ ಓದಿ: 7 ಕೊಲೆಗಳ ಹಂತಕನಿಗೆ ಅಣ್ಣನೇ ರೋಲ್ ಮಾಡೆಲ್ – 15 ಕೋಟಿ ಆಸ್ತಿಗಾಗಿ ಇಬ್ಬರ ಕೊಲೆ, ಹೆಂಡ್ತಿಯನ್ನೂ ಸುಟ್ಟಿದ್ದ ರೌಡಿಶೀಟರ್ ಅಣ್ಣ!
ಹಂತಕನ ಫ್ಲ್ಯಾನ್
ಹಾಲ್ನಲ್ಲಿ ತಲೆಗೆ ಹೊಡೆದ ತಕ್ಷಣವೇ ಬಾತ್ರೂಮ್ಗೆ ದೇಹ ಎಳೆದೊಯ್ಯುತ್ತಿದ್ದ ಇಂದುಶೇಖರ್, ದೇಹದಲ್ಲಿರುವ ರಕ್ತ ಪೂರ್ತಿಯಾಗಿ ಹರಿದು ಹೋಗುವವರೆಗೆ ಮೃತದೇಹ ಬಾತ್ ರೂಮಲ್ಲಿ ಬಿಡುತ್ತಿದ್ದ. ಸ್ವಲ್ಪ ಉಸಿರಾಡುತ್ತಿದ್ದರೂ ಸಹ ರುಬ್ಬುವ ಕಲ್ಲಿನಿಂದ ಮತ್ತೆ ಮತ್ತೆ ತಲೆಗೆ ಹೊಡೆದು ಜೀವ ತೆಗೆಯುತ್ತಿದ್ದನಂತೆ. ದೇಹದಲ್ಲಿರುವ ಪೂರ್ತಿ ರಕ್ತ ಹೊರಬಂದ ಬಳಿಕ ಅಪ್ಪ ಮಗಳು ಮೃತದೇಹ ಪ್ಯಾಕ್ ಮಾಡುತ್ತಿದ್ದರು. ದೇಹದ ರಕ್ತ ಕಂಪ್ಲೀಟ್ ಆಗಿ ಹೊರ ಹೋದರೆ ಮೃತದೇಹ ಹೆಚ್ಚು ವಾಸನೆ ಬರುವುದಿಲ್ಲ ಅಂತಾ ಮೊದಲೇ ಈ ಬಗ್ಗೆ ತಿಳಿದುಕೊಂಡು ಪಕ್ಕಾ ಪ್ಲ್ಯಾನ್ ಮಾಡಿ ಕೊಲೆ ಮಾಡಿದ್ದ.ಇದನ್ನೂ ಓದಿ: Bengaluru Murder Horror | ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಲ್ಲಿ ಮತ್ತೆರಡು ಮೃತದೇಹ ಪತ್ತೆ
