ಮಂಡ್ಯ: ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ (Bengaluru Mysuru Expressway) ಚಲಿಸುತ್ತಿದ್ದ ಕಾರು ನಡುರಸ್ತೆಯಲ್ಲೇ ಹೊತ್ತಿ ಉರಿದಿರುವ ಘಟನೆ ಮಂಡ್ಯ ಹೊರವಲಯದ ಇಂಡುವಾಳು ಬಳಿ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೈಸೂರಿನಲ್ಲಿ (Mysuru) ನೆಲೆಸಿರುವ ಸ್ಕನದ್ ಎಂಬುವವರಿಗೆ ಸೇರಿದ KA05 ME 7634 ಸಂಖ್ಯೆಯ ಕಾರು ಎಕ್ಸ್ಪ್ರೆಸ್ವೇನಲ್ಲಿ ಹೊತ್ತಿ ಉರಿದಿದೆ.

ಅನಾಹುತ ಹೇಗಾಯ್ತು?
ಘಟನೆ ನಡೆದ ಸಂದರ್ಭದಲ್ಲಿ ಸ್ಕನದ್ ಜೊತೆಗೆ ಮತ್ತೊಬ್ಬರು ಕಾರಿನಲ್ಲಿದ್ದರು. ಬಟ್ಟೆ ವ್ಯಾಪಾರ ಮುಗಿಸಿಕೊಂಡು ಮನೆಗೆ ತೆರಳುತ್ತಿರಬೇಕಾದ್ರೆ, ಕಾರಿನಲ್ಲಿ ಏಕಾಏಕಿ ಬೆಂಕಿ (Car Fire) ಕಾಣಿಸಿಕೊಂಡಿದೆ. ತಕ್ಷಣವೇ ಇಬ್ಬರು ಕಾರಿನಿಂದ ಕೆಳಗಿಳಿದಿದ್ದಾರೆ. ಕ್ಷಣಾರ್ಧದಲ್ಲಿ ಅಗ್ನಿಜ್ವಾಲೆ ಹಬ್ಬಿದ್ದು, ಇಡೀ ಕಾರು ಹೊತ್ತಿಉರಿದಿದೆ.
ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ, ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ರು. ಅಷ್ಟರಲ್ಲಿ ಇಡೀ ಕಾರು ಸುಟ್ಟು ಕರಕಲಾಗಿತ್ತು.
