ಹನೋಯ್: ಡೊಮಿನಿಕನ್ ರಿಪಬ್ಲಿಕ್‌ನ ಜೊಹೆರಿ ಮೊಲಾ (Joheirry Mola) ಅವರು ʻಮಿಸ್ ವರ್ಲ್ಡ್ 2026ʼ (Miss World 2026) ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಸೆಪ್ಟೆಂಬರ್ 5ರಂದು ವಿಯೆಟ್ನಾಂನಲ್ಲಿ (Vietnam) ನಡೆದ ಅದ್ಧೂರಿ ಗ್ರ್ಯಾಂಡ್ ಫಿನಾಲೆಯಲ್ಲಿ ಜೊಹೆರಿ ವಿಶ್ವ ಸುಂದರಿ ಪಟ್ಟ ಅಲಂಕರಿಸಿದ್ದಾರೆ.
View this post on Instagram
ಡೊಮಿನಿಕನ್ ರಿಪಬ್ಲಿಕ್ ಅನ್ನು ಪ್ರತಿನಿಧಿಸಿದ್ದ ಜೊಹೆರಿ ಮೊಲಾ, ಅಂತಿಮ ಸುತ್ತಿನಲ್ಲಿ ಸ್ಪೇನ್‌ನ ಎಲಿಸಬೆತ್ ರೆಯ್ನೆಸ್ ಅವರನ್ನ ಹಿಂದಿಕ್ಕಿ ವಿಜೇತರಾದರು. ಎಲಿಸಬೆತ್ ರೆಯ್ನೆಸ್ ಪ್ರಥಮ ರನ್ನರ್ ಅಪ್, ಮಲೇಷ್ಯಾದ ತಾನುಸಿಯಾ ಚೆಟ್ಟಿ ದ್ವಿತೀಯ ರನ್ನರ್ ಅಪ್ ಸ್ಥಾನ ಪಡೆದರು.
ಜೊಹೆರಿ ಮೊಲಾ ಮಿಸ್ ವರ್ಲ್ಡ್ 2026
ಕಳೆದ ವರ್ಷದ 72ನೇ ಮಿಸ್ ವರ್ಲ್ಡ್ ಪಟ್ಟ ಗೆದ್ದ ಥಾಯ್ಲೆಂಡ್‌ನ ಓಪಲ್ ಸುಚಾತಾ ಚುವಾಂಗ್ಸ್ರಿ ಅವರು ಜೊಹೆರಿ ಮೊಲಾ ಅವರಿಗೆ ಮಿಸ್ ವರ್ಲ್ಡ್ 2026 ಕಿರೀಟ ತೊಡಿಸಿದರು. ಜೊಹೆರಿ ಮೊಲಾ ಅವರ ಗೆಲುವಿಗೆ ಮಿಸ್ ಇಂಡಿಯಾ ಆರ್ಗನೈಸೇಶನ್‌ನ ತಮ್ಮ ಅಧಿಕೃತ ಇನ್‌ಸ್ಟಾ ಖಾತೆಯಲ್ಲಿ ಅಭಿನಂದನೆ ಸಲ್ಲಿಸಿದೆ.
View this post on Instagram
ಟಾಪ್ 6 ಫೈನಲಿಸ್ಟ್‌ಗಳು ಯಾರು?
ಮಿಸ್ ವರ್ಲ್ಡ್ 2026ರ ಟಾಪ್ 6 ಫೈನಲಿಸ್ಟ್‌ಗಳಲ್ಲಿ ಎರಿಟ್ರಿಯಾದ ಸ್ನಿಟ್ ಹಬ್ಟಿಯಾಬ್, ಸ್ಪೇನ್‌ನ ಎಲಿಸಬೆತ್ ರೆಯ್ನೆಸ್, ಮಲೇಷ್ಯಾದ ತಾನುಸಿಯಾ ಚೆಟ್ಟಿ, ವಿಯೆಟ್ನಾಂನ ಲೆ ನ್ಗುಯೆನ್ ಬಾವೊ ನ್ಗೊಕ್, ಡೊಮಿನಿಕನ್ ರಿಪಬ್ಲಿಕ್‌ನ ಜೊಹೆರಿ ಮೊಲಾ ಮತ್ತು ದಕ್ಷಿಣ ಆಫ್ರಿಕಾದ ರೊಮಾಂಡಾ ಹೊಂಬಿರ್ ಸ್ಥಾನ ಪಡೆದಿದ್ದರು.
