ಕ್ರೇಜಿಸ್ಟಾರ್ ರವಿಚಂದ್ರನ್ ಯಾವುದನ್ನೂ ಮುಚ್ಚುಮರೆ ಮಾಡುವುದಿಲ್ಲ. ಇದ್ದದ್ದನ್ನು ಇದ್ದಂತೆಯೇ ಹೇಳಿ ಬಿಡುತ್ತಾರೆ. ಹಾಗಾಗಿಯೇ ಅವರು ಹಲವರಿಗೆ ಇಷ್ಟವಾಗುತ್ತಾರೆ. ರವಿಚಂದ್ರನ್ ಅಂದರೆ, ಅಲ್ಲಿ ನಾಯಕಿಯರಿಗೆ ಕೊರತೆ ಇರುವುದಿಲ್ಲ. ಕನ್ನಡ ಸಿನಿಮಾ ರಂಗಕ್ಕೆ ಬಾಲಿವುಡ್ ನ ಅನೇಕ ನಟಿಯರನ್ನು ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ರವಿಚಂದ್ರನ್ ಅವರು ತಮ್ಮ ಸಿನಿಮಾದಲ್ಲಿ ನಾಯಕಿಯರನ್ನು ಅದ್ಭುತವಾಗಿ ತೋರಿಸುತ್ತಾರೆ ಎನ್ನುವ ಕಾರಣಕ್ಕಾಗಿ ಬಾಲಿವುಡ್ ನಟಿಯರು ಕನ್ನಡ ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಳ್ಳುತ್ತಿದ್ದರಂತೆ.
Advertisement
ರವಿಚಂದ್ರನ್ ತಮ್ಮ ಸಿನಿಮಾಗಳಲ್ಲಿ ನಾಯಕಿಯರನ್ನು ಎಷ್ಟು ಸುಂದರವಾಗಿ ತೋರಿಸುತ್ತಿದ್ದರೋ, ನಾಯಕಿಯ ಜೊತೆಗೆ ಹಣ್ಣುಗಳಿಗೂ ಅಷ್ಟೇ ಮಹತ್ವ ಕೊಡುತ್ತಿದ್ದರು ಎಂದು ಜೋಕ್ ಇದೆ. ರವಿಚಂದ್ರನ್ ಸಿನಿಮಾಗಳಲ್ಲಿ ದ್ರಾಕ್ಷಿ, ನಿಂಬೆಹಣ್ಣು, ಸೇಬು ಹಣ್ಣುಗಳಿಗೂ ನಟಿಸಲು ಅವಕಾಶ ಸಿಗುತ್ತಿತ್ತು. ಅಷ್ಟರ ಮಟ್ಟಿಗೆ ಹಣ್ಣು ಮತ್ತು ಹೆಣ್ಣಿನೊಂದಿಗೆ ರವಿಮಾಮ ಬೆರೆತು ಹೋಗಿದ್ದರು. ಹಾಗಾಗಿಯೇ ರವಿಚಂದ್ರನ್ ಪತ್ನಿ ಒಂದು ಬಾರಿ “ನಿಮಗೆ ಹುಡುಗಿಯರನ್ನು ಮುಟ್ಟದೇ ಸಿನಿಮಾ ಮಾಡುವುದಕ್ಕೆ ಆಗುವುದಿಲ್ಲವಾ?’ ಎಂದು ಪ್ರಶ್ನೆ ಕೇಳಿದ್ದರಂತೆ. ಇದನ್ನೂ ಓದಿ: ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್, ಯಾವ ಭಾಷೆಯಲ್ಲಿ ಯಾರು ರಿಲೀಸ್?
Advertisement
Advertisement
ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ನಟನೆಯ ತ್ರಿವಿಕ್ರಮ್ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ರವಿಚಂದ್ರನ್, ‘ಒಂದು ಸಲ ನನ್ನ ಹೆಂಡತಿ, ನನ್ನ ಮುಂದೆ ನಿಂತು ನಿಮಗೆ ಹುಡುಗಿಯರನ್ನು ಮುಟ್ಟದೇ ಸಿನಿಮಾ ಮಾಡುವುದಕ್ಕೆ ಆಗುವುದಿಲ್ಲವಾ?’ ಎಂದು ಪ್ರಶ್ನೆ ಕೇಳಿ ಬೆಚ್ಚಿಬೀಳಿಸಿದ್ದರು ಎಂದು ಹಾಸ್ಯ ಚಟಾಕಿ ಹಾರಿಸುತ್ತಲೇ ಈ ಗುಟ್ಟನ್ನು ರಟ್ಟು ಮಾಡಿದರು. ವೇದಿಕೆಯ ಮುಂದೆಯೇ ಕುಳಿತಿದ್ದ ರವಿಚಂದ್ರನ್ ಪತ್ನಿ ಈ ಮಾತು ಕೇಳಿಸಿಕೊಂಡು ನಕ್ಕರು.