– ಸಚಿವ ಸ್ಥಾನ ಸಿಗುವ ವಿಶ್ವಾಸ
ರಾಮನಗರ: ರಾಜ್ಯ ಸಂಪುಟ ವಿಸ್ತರಣೆಯ (Cabinet Expansion) ಕುರಿತು ಚರ್ಚೆಗೆ ಸಿಎಂ ದೆಹಲಿಗೆ ಪ್ರವಾಸ ಬೆಳೆಸುತ್ತಿರುವ ಬೆನ್ನಲ್ಲೇ, ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ (HC Balakrishna) ಸಚಿವ ಸ್ಥಾನಕ್ಕಾಗಿ ದೇವರಮೊರೆ ಹೋಗಿದ್ದಾರೆ.
ಈ ಬಾರಿ ತಮಗೆ ಮಂತ್ರಿಗಿರಿ ಸಿಗುವುದು ಖಚಿತ ಎಂಬ ವಿಶ್ವಾಸದೊಂದಿಗೆ ಪತ್ನಿ ಸಮೇತ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಹೆಚ್.ಸಿ. ಬಾಲಕೃಷ್ಣ, ನಂಜನಗೂಡಿನ (Nanjangud) ಶ್ರೀ ನಂಜುಂಡೇಶ್ವರ ಹಾಗೂ ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ (Mysuru Chamundi Hills) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಹೈಕಮಾಂಡ್ ನಾಯಕರಲ್ಲಿ ಕ್ಷಮೆಯಾಚಿಸಿ ಬಿಗ್ ಬಾಂಬ್ ಸಿಡಿಸಿದ ಜಮೀರ್
ನಾನು ಈಗಾಗಲೇ ಐದು ಬಾರಿ ಶಾಸಕನಾಗಿ ಆಯ್ಕೆಯಾಗಿ ಜನಸೇವೆ ಮಾಡಿದ್ದೇನೆ. ನನ್ನ ಹಿರಿತನ ಮತ್ತು ಅನುಭವವನ್ನು ಪರಿಗಣಿಸಿ ಈ ಬಾರಿ ಸಂಪುಟದಲ್ಲಿ ಸಚಿವ ಸ್ಥಾನದ ಅವಕಾಶ ನೀಡಬೇಕು ಎಂದು ಈಗಾಗಲೇ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಬಂದಿರುವ ಶಾಸಕ, ಈಗ ಸಿಎಂ ದೆಹಲಿ ಯಾತ್ರೆ ಕೈಗೊಳ್ಳುತ್ತಿದ್ದಂತೆ ಟೆಂಪಲ್ ರನ್ ಶುರುಮಾಡಿದ್ದಾರೆ. ಇದನ್ನೂ ಓದಿ: ಫೇಸ್‌ಬುಕ್‌ನಿಂದ ಪ್ರಧಾನಿ ಮೋದಿ ವಿಡಿಯೋಗೆ ನಿರ್ಬಂಧ – ಕೇಂದ್ರದಿಂದ ಮೆಟಾಗೆ ಸಮನ್ಸ್
