-ತಪ್ಪಾಗಿ ವಿಡಿಯೋ ಡಿಲೀಟ್ ಆಗಿದೆ ಎಂದು ಕ್ಷಮೆಯಾಚಿಸಿದ್ದ ಮೆಟಾ
ನವದೆಹಲಿ: ಪ್ರಧಾನಿ ಮೋದಿ (PM Modi) ಅವರ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದ ವಿಡಿಯೋವನ್ನ ಸಾರ್ವಜನಿಕ ವೀಕ್ಷಣೆಯಿಂದ ತೆಗೆದುಹಾಕಿದ್ದ ಸಂಬಂಧ ಇದೀಗ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೆಟಾ (META) ಸಂಸ್ಥೆಗೆ ಸಮನ್ಸ್ ಜಾರಿ ಮಾಡಿದೆ.
ಪ್ರಧಾನಿಯವರ ವೀಡಿಯೊವನ್ನು ಫೇಸ್‌ಬುಕ್‌ನಿಂದ (Facebook) ತಾತ್ಕಾಲಿಕವಾಗಿ ನಿರ್ಬಂಧಿಸಲು ಕಾರಣವೇನು ಎಂದು ಕೇಂದ್ರ ಸರ್ಕಾರ ಮೆಟಾ ಸಂಸ್ಥೆಗೆ ಸ್ಪಷ್ಟನೆ ಕೇಳಿದೆ. ಅಲ್ಲದೇ ಇದರ ಬಗ್ಗೆ ಸ್ಪಷ್ಟನೆ ನೀಡಲು ಮೆಟಾದ ಜಾಗತಿಕ ಸಾರ್ವಜನಿಕ ನೀತಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ. ಇದನ್ನೂ ಓದಿ: ಫೇಸ್‌ಬುಕ್‌ನಿಂದ ಪ್ರಧಾನಿ ಮೋದಿ ವಿಡಿಯೋ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್ ದೈತ್ಯ ಮೆಟಾ
ಪ್ರಧಾನಿಗೆ ಕ್ಷಮೆ ಕೇಳಿದ ಮೆಟಾ:
ಈಗಾಗಲೇ ಮೆಟಾ ಪ್ರಧಾನಿ ಮೋದಿ ಅವರಿಗೆ ಕ್ಷಮೆ ಕೇಳಿದೆ. ಈ ಸಮಸ್ಯೆಯು ತಾಂತ್ರಿಕ ದೋಷದ ಪರಿಣಾಮದಿಂದ ಆಗಿದೆ, ಉದ್ದೇಶ ಪೂರ್ವಕವಾಗಿ ತೆಗೆದುಕೊಂಡ ಕ್ರಮವಲ್ಲ ಎಂದು ಮೆಟಾ ಸಂಸ್ಥೆ ಸ್ಪಷ್ಟನೆ ನೀಡಿದೆ. ತಪ್ಪಾಗಿ ವಿಡಿಯೋ ಡಿಲೀಟ್ ಆಗಿದೆ, ಪುನಃ ವಿಡಿಯೋವನ್ನ ಮರುಸ್ಥಾಪಿಸಲಾಗಿದೆ. ತಪ್ಪಿಗೆ ನಾವು ಕ್ಷಮೆಯಾಚಿಸುತ್ತೇವೆ. ಇದು ಯಾವುದೇ ಉದ್ದೇಶಿತ ಕಾರ್ಯವಲ್ಲ ಎಂದು ಮೆಟಾ ವಕ್ತಾರರು ತಿಳಿಸಿದ್ದಾರೆ.
ಮಂಗಳವಾರ (ಜುಲೈ 28) ಮುಂಜಾನೆ ಪ್ರಧಾನಿ ಮೋದಿಯವರ ವೀಡಿಯೊ, ಸಿಜೆಪಿ ನೇತೃತ್ವದ ವಿದ್ಯಾರ್ಥಿ ಪ್ರತಿಭಟನೆಗಳ ನಡುವೆ ಝೆನ್-ಝಿ ಅವರ ಮೊದಲ ನೇರ ಭಾಷಣ, ಫೇಸ್‌ಬುಕ್‌ನಲ್ಲಿ ಲಭ್ಯವಿರಲಿಲ್ಲ, ಭಾರತದಲ್ಲಿ ಮಾತ್ರ ಪೋಸ್ಟ್ ವೀಕ್ಷಣೆಗೆ ಲಭ್ಯವಿರಲಿಲ್ಲ. ಇದು ಬಳಕೆದಾರರ ಗಮನಕ್ಕೆ ಬಂದ ಬಳಿಕ ವಿವಾದ ಹುಟ್ಟಿಕೊಂಡಿತ್ತು. ವೀಡಿಯೊವನ್ನ ಕೆಲವೇ ಗಂಟೆಗಳಲ್ಲಿ ಮರುಸ್ಥಾಪಿಸಲಾಯಿತು. ಅಲ್ಲದೇ ಮೆಟಾ ಸಂಸ್ಥೆ ತಾಂತ್ರಿಕ ದೋಷದಿಂದ ಸಂಭವಿಸಿದೆ ಹೊರತು ಯಾವುದೇ ಸರ್ಕಾರದ ನಿರ್ದೇಶನ ಅಥವಾ ವಿಷಯ ನೀತಿ ಜಾರಿಯಿಂದಾಗಿ ಅಲ್ಲ ಎಂದು ಹೇಳಿ ಕ್ಷಮೆಯಾಚಿಸಿತು.ಇದನ್ನೂ ಓದಿ: ಲೋಕಸಭೆಯಲ್ಲಿ ʻಪೇಪರ್ ಸೋರಿಕೆʼ ಸಮರ – ಇಂದು ರಾಹುಲ್, ಪ್ರಿಯಾಂಕಾ vs ತೇಜಸ್ವಿ, ಬಾನ್ಸುರಿ ಡಿಬೇಟ್
ವಿಡಿಯೋ ಯಾವ ವಿಷಯ ಕುರಿತಾಗಿತ್ತು?
ಪ್ರಧಾನಿ ಮೋದಿ ಅವರು, ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡುವುದಕ್ಕೆ ಮುನ್ನ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಯುವ ಸಮುದಾಯವನ್ನ ಉದ್ದೇಶಿಸಿ ಮಾತನಾಡಿದ್ದರು. ಪರೀಕ್ಷಾ ಪತ್ರಿಕೆ ಸೋರಿಕೆ, ಅದರ ವಿರುದ್ಧ ಸರ್ಕಾರವು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾತನಾಡಿದ್ದರು, ಇದು ಸಾರ್ವಜನಿಕರ ಗಮನ ಸೆಳೆದಿತ್ತು. ಈ ವಿಡಿಯೋ ಸದ್ಯ 300 ಮಿಲಿಯನ್‌ಗೂ ಅಧಿಕ ವೀಕ್ಷಣೆ ದಾಟಿದೆ.ಇದನ್ನೂ ಓದಿ: ಕೆಪಿಎಸ್‌ಸಿ ನಲ್ಲಿ ಹುದ್ದೆಗಾಗಿ ಡೀಲಿಂಗ್ ಪ್ರಕರಣ – 3 FIR ದಾಖಲು, 2 ಕೇಸ್ ಸಿಐಡಿಗೆ ವರ್ಗ
