DistrictsKarnatakaLatestLeading NewsMain PostMysuru

ಮೋದಿ ಹೇಳೋದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ: ಬಿಕೆ ಹರಿಪ್ರಸಾದ್ ಕಿಡಿ

ಮೈಸೂರು: ಮೋದಿ (Narendra Modi) ಹೇಳೋದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ (BK Hariprasad) ಕಿಡಿ ಕಾರಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಅಹಿಂಸೆ ಮತ್ತು ಹಿಂಸೆಯ ನಡುವಿನ ಚುನಾವಣೆ (Karnataka Election 2023). ಅಹಿಂಸೆ ಸಾರಿದ ಗಾಂಧಿ ಬೇಕಾ? ಅಥವಾ ಗಾಂಧಿಯನ್ನು ಕೊಂದ ಗೋಡ್ಸೆ ಬೇಕಾ? ಎಂದು ನಿರ್ಧರಿಸುವ ಚುನಾವಣೆಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಪದೇ ಪದೇ ರಾಜ್ಯಕ್ಕೆ ಬರುವುದರಿಂದ JDS, ಕಾಂಗ್ರೆಸ್‍ಗೆ ಭಯ ಶುರುವಾಗಿದೆ: ಶಂಕರ್ ಪಾಟೀಲ್ ಮುನೇನಕೊಪ್ಪ

ಇದೇ ವೇಳೆ `ಮುಸ್ಲಿಮರ (Muslims) ಜೊತೆ ಭ್ರಾತೃತ್ವ ಇರಲಿ’ ಎಂಬ ಪ್ರಧಾನಿ ಮೋದಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೋದಿ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ. ಚುನಾವಣೆ ಹಿನ್ನೆಲೆಯಲ್ಲಿ ಇದು ಮೋದಿಯವರ ಮೊಸಳೆ ಕಣ್ಣೀರಿನಂತಿದೆ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: 50 ಕೋಟಿ ಮೌಲ್ಯದ ಫ್ಲಾಟ್‌, 2.17 ಕೋಟಿಯ ಕಾರು, 80 ಲಕ್ಷದ ಬೈಕ್ – ರಾಹುಲ್ ದಂಪತಿಗೆ ದುಬಾರಿ ಉಡುಗೊರೆ

ಮೋದಿ ಪದೇ ಪದೇ ರಾಜ್ಯಕ್ಕೆ ಬರುವುದರಿಂದ JDS, ಕಾಂಗ್ರೆಸ್‍ಗೆ ಭಯ ಶುರುವಾಗಿದೆ: ಶಂಕರ್ ಪಾಟೀಲ್ ಮುನೇನಕೊಪ್ಪ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈಗಾಗಲೇ ಹೇಳಿದ್ದಾರೆ. `ಇಂದು ರಸ್ತೆ ಅಭಿವೃದ್ಧಿ ವಿಚಾರ ಬೇಕಿಲ್ಲ, ಏನಿದ್ದರೂ ಲವ್ ಜಿಹಾದ್, ಧರ್ಮದ ವಿಚಾರದ ಬಗ್ಗೆ ಮಾತನಾಡಿ’ ಎಂದು ಹೇಳಿದ್ದಾರೆ. ಈ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ ಎಂದು ಕುಟುಕಿದ್ದಾರೆ.

Live Tv

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Leave a Reply

Your email address will not be published. Required fields are marked *

Back to top button