ಜೈಪುರ: ರಾಜಸ್ಥಾನ ರಾಯಲ್ಸ್ (Rajasthan Royals) ಸ್ಫೋಟಕ ಬ್ಯಾಟರ್ 15 ವರ್ಷದ ವೈಭವ್ ಸೂರ್ಯವಂಶಿ(Vaibhav Sooryavanshi) ಭಾರತದ ಪರ ವಿಶಿಷ್ಟ ದಾಖಲೆ ಬರೆದಿದ್ದಾರೆ. ಒಂದು ಐಪಿಎಲ್ ಟೂರ್ನಿಯಲ್ಲಿ 50 ಸಿಕ್ಸ್ ಹೊಡದ ಮೊದಲ ಭಾರತೀಯ (Indian) ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಲಕ್ನೋ ವಿರುದ್ಧದ ಪಂದ್ಯದಲ್ಲಿ 10 ಸಿಕ್ಸ್ (Six) ಸಿಡಿಸುವ ಮೂಲಕ ಈ ಟೂರ್ನಿಯಲ್ಲಿ ಒಟ್ಟು 53 ಸಿಕ್ಸ್ ಸಿಡಿಸಿದ್ದಾರೆ. ಈ ಹಿಂದೆ ಅಭಿಷೇಕ್ ಶರ್ಮಾ ಹೆಸರಿನಲ್ಲಿ ಈ ದಾಖಲೆ ಇತ್ತು.
ಸನ್ ರೈಸರ್ಸ್ ಹೈದರಾಬಾದ್‌ನ ಅಭಿಷೇಕ್ ಶರ್ಮಾ 2024ರ ಆವೃತ್ತಿಯಲ್ಲಿ 42 ಸಿಕ್ಸ್ ಸಿಡಿಸಿದ್ದರೆ 2025 ರಲ್ಲಿ ಪಂಜಾಬ್ ಕಿಂಗ್ಸ್‌ನ ಶ್ರೇಯಸ್ ಅಯ್ಯರ್ 39 ಸಿಕ್ಸ್ ಹೊಡೆದಿದ್ದರು.
𝗦𝘁𝗼𝗿𝗺 𝗼𝗳 𝗦𝗶𝘅𝗲𝘀 🚀
Vaibhav Sooryavanshi lit up #RR‘s chase with a thunderous 93(38) 🎇
Updates ▶️ https://t.co/LvQzM3tl06 #TATAIPL | #KhelBindaas | #RRvLSG | @rajasthanroyals pic.twitter.com/qe6TfmGnTx
— IndianPremierLeague (@IPL) May 19, 2026
ಭಾರತದ ಪರ ಅತಿ ಹೆಚ್ಚು ಸಿಕ್ಸ್ ಹೊಡೆದರೂ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸ್ ಹೊಡೆದ ಬ್ಯಾಟರ್ ಪಟ್ಟಿಯಲ್ಲಿ ಕ್ರಿಸ್ ಗೇಲ್ ಇದ್ದಾರೆ. 2012 ರಲ್ಲಿ ಗೇಲ್ 59 ಸಿಕ್ಸ್ ಹೊಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: `ವೈಭವʼದ ಆಟಕ್ಕೆ ಲಕ್ನೋ ಅಪ್ಪಚ್ಚಿ – ರನ್ ಮಳೆಯಲ್ಲಿ ಗೆದ್ದ ರಾಜಸ್ಥಾನ
The showstopper is here to enthrall 🕺
🎥 Vaibhav Sooryavanshi is taking the run chase by storm 👊
Updates ▶️ https://t.co/LvQzM3tl06 #TATAIPL | #KhelBindaas | #RRvLSG | @rajasthanroyals pic.twitter.com/MEoTfJR8w9
— IndianPremierLeague (@IPL) May 19, 2026
ಈ ಐಪಿಎಲ್‌ನ 13 ಇನ್ನಿಂಗ್ಸ್‌ಗಳಲ್ಲಿ ಒಟ್ಟು 579 ರನ್ ಹೊಡೆಯುವ ಮೂಲಕ ಸೂರ್ಯವಂಶಿ ಆರೇಂಜ್ ಕ್ಯಾಪ್ ಧರಿಸಿದ್ದಾರೆ. ಒಂದು ಶತಕ(103), 3 ಅರ್ಧಶತಕ, 50 ಬೌಂಡರಿ ಹೊಡೆದಿದ್ದಾರೆ.

