– ಹಿಂದೂ ಮಹಿಳೆ ಕರೆತಂದು ನೆರವು ಕೇಳಿದ್ದ ಮುಸ್ಲಿಂ ಮಹಿಳೆಯರು – ಫೋಟೊ ಹಿಂದಿನ ಅಸಲಿ ಸತ್ಯ ಬಯಲು
– ಸೌಹಾರ್ದತೆಯ ಪಾಠ ನಿಮ್ಮಿಂದ ಕಲಿಯಬೇಕಿಲ್ಲ ಅಂತ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಟಾಂಗ್
ಉಡುಪಿ: ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಮುಂದೆ ಹಿಂದೂ ಮಹಿಳೆ ಕರೆತಂದು ನೆರವು ಕೇಳಿದ್ದ ಮುಸ್ಲಿಂ ಮಹಿಳೆಯರ ಫೋಟೊ ಹಿಂದಿನ ಅಸಲಿ ಸತ್ಯ ಬಯಲಾಗಿದೆ. ಹಿಂದೂ ಮಹಿಳೆ ಮತ್ತು ಮನವಿ ಮಾಡಿದ್ದವರು ಅಮ್ಮ-ಮಗಳು ಅಂತ ಬಿಜೆಪಿ ಸ್ಪಷ್ಟಪಡಿಸಿದೆ.
ಇಬ್ಬರು ಬುರ್ಖಾಧಾರಿ ಮುಸ್ಲಿಂ ಮಹಿಳೆಯರು ಹಿಂದೂ ಮಹಿಳೆಯನ್ನು ಕರೆತಂದು ನೆರವು ಕೇಳಿದ್ದರು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ವೇಳೆ ಈ ಪ್ರಸಂಗ ಸೌರ್ಹಾದತೆಗೆ ಸಾಕ್ಷಿ ಎಂಬಂತೆ ಬಿಂಬಿತವಾಗಿತ್ತು. ಇದನ್ನೂ ಓದಿ: ಬಡ ಹಿಂದೂ ಮಹಿಳೆ ಪರ ನೆರವು ಕೇಳಿದ ಮುಸ್ಲಿಂ ಮಹಿಳೆಯರು – ಉಡುಪಿಯಲ್ಲಿ ಅಪರೂಪದ ಘಟನೆ
ಐದು ಸೆಂಟ್ಸ್ ಭೂಮಿಯ ದಾಖಲೆ ಸಮಸ್ಯೆಯಿಂದಾಗಿ ಮನೆ ಕಟ್ಟಲು ಸಾಧ್ಯವಾಗದ ಪ್ರಕರಣದಲ್ಲಿ ಹಿಂದೂ ಮಹಿಳೆಗಾಗಿ ಮುಸ್ಲಿಂ ಹೆಣ್ಣುಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ ನೋಡಿ. ಉಡುಪಿ ಬಿಜೆಪಿಯವರು ಇದನ್ನು ನೋಡಿ ಸೌಹಾರ್ದತೆ ಕಲಿಯಬೇಕು ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಚಾಟಿ ಬೀಸಿದ್ದರು. ಇದೀಗ ಕಣ್ಣೀರು ಹಾಕಿದ ಮಹಿಳೆಯರ ಸತ್ಯ ಬಯಲಾಗಿದೆ ಅಂತ ಹೆಬ್ಬಾಳ್ಕರ್‌ಗೆ ಬಿಜೆಪಿ ತಿರುಗೇಟು ಕೊಟ್ಟಿದೆ.
ಅಸಹಾಯಕ ವೃದ್ಧ ಮಹಿಳೆ ಹಾಗೂ ಮನವಿ ಮಾಡಿದ ಮುಸ್ಲಿಂ ಮಹಿಳೆ ಇಬ್ಬರೂ ತಾಯಿ-ಮಗಳು. ಗಿರಿಜಾ ಶೆಟ್ಟಿಗಾರ್ ಎಂಬ ವೃದ್ಧ ಮಹಿಳೆಯ ಮಗಳು ಈ ಹಿಂದೆಯೇ ಮತಾಂತರಗೊಂಡಿದ್ದರು. ಸುಮಾರು 25 ವರ್ಷಗಳ ಹಿಂದೆ ಮತಾಂತರಗೊಂಡಿದ್ದರು. ಸ್ವಂತ ಪುತ್ರಿ ತಾಯಿಯನ್ನು ಕರೆತಂದು ಸಹಾಯಕ್ಕಾಗಿ ಕೇಳಿಕೊಂಡಿದ್ದರು. ಸೌಹಾರ್ದತೆಯ ಪಾಠವನ್ನು ನಿಮ್ಮಿಂದ ಕಲಿಯಬೇಕಾಗಿಲ್ಲ ಎಂದ ಬಿಜೆಪಿ ಮಹಿಳಾ ಮೋರ್ಚಾ ಟಾಂಗ್ ಕೊಟ್ಟಿದೆ. ಇದನ್ನೂ ಓದಿ: ರಾಜ್ಯಸಭೆಗೆ ದೇವೇಗೌಡ ಮರು ಆಯ್ಕೆ ಬಿಜೆಪಿ ಹೈಕಮಾಂಡ್‌ಗೆ ಬಿಟ್ಟಿದ್ದು: ನಿಖಿಲ್ ಕುಮಾರಸ್ವಾಮಿ
ಸ್ವಂತ ಮಗಳಾಗಿದ್ದರೂ ನೆರೆಮನೆಯವರು ಎಂದು ಗುರುತಿಸಿಕೊಂಡಿದ್ದು ಎಷ್ಟು ಸರಿ? ಜಿಲ್ಲೆಗೆ ಅತಿಥಿಯಾಗಿ ಬರುವ ತಮಗೆ ಬಿಟ್ಟಿ ಪ್ರಚಾರದ ಹಪಾಹಪಿ ಎಂದು ಬಿಜೆಪಿ ಮಹಿಳಾ ಮೋರ್ಚ ವಾಗ್ದಾಳಿ ನಡೆಸಿದೆ.

