LatestMain PostNational

ಯಮುನಾ ನದಿ ಸ್ವಚ್ಛಗೊಳಿಸುತ್ತಿದ್ದ ಅಧಿಕಾರಿ ಮೇಲೆ ಬಿಜೆಪಿ ಸಂಸದರ ದರ್ಪ

ನವದೆಹಲಿ: ದೆಹಲಿ ಜಲ ಮಂಡಳಿ (ಡಿಜೆಬಿ) ಅಧಿಕಾರಿಗಳೊಂದಿಗೆ (Delhi Jal Board (DJB) officials) ಅನುಚಿತವಾಗಿ ವರ್ತಿಸಿದ ಬಿಜೆಪಿ ಸಂಸದ ಪರ್ವೇಶ್ ವರ್ಮಾ (BJP MP Parvesh Verma) ವಿರುದ್ಧ ಎಎಪಿ (AAP) ನಾಯಕ ವಾಗ್ದಾಳಿ ನಡೆಸಿದ್ದಾರೆ.

ಪಶ್ಚಿಮ ದೆಹಲಿಯ (Delhi) ಬಿಜೆಪಿ ಸಂಸದ ಪರ್ವೇಶ್ ವರ್ಮಾ ಮತ್ತು ಪಕ್ಷದ ಸಹೋದ್ಯೋಗಿ ತಜಿಂದರ್ ಪಾಲ್ ಸಿಂಗ್ ಬಗ್ಗಾ (Tajinder Pal Singh Bagga) ಅವರು ಯಮುನಾದ (Yamuna) ಕಾಳಿಂದಿ ಕುಂಜ್ ಘಾಟ್‍ಗೆ ಭೇಟಿ ನೀಡಿದ್ದ ವೇಳೆ ಈ ಘಟನೆ ನಡೆದಿದೆ. ಛತ್ (Chhath)ಪೂಜೆಗೂ ಮುನ್ನ ಡಿಜೆಬಿ ಅಧಿಕಾರಿಗಳು ನದಿಗೆ ಡಿಫೋಮರ್ ಕೆಮಿಕಲ್ ಅನ್ನು ಸಿಂಪಡಿಸುತ್ತಿದ್ದರು. ಆಗ ಕೆಲವು ರಾಸಾಯನಿಕಗಳನ್ನು ಬಳಸಿದ್ದರಿಂದ ಯಮುನಾ ನದಿ ಕಲುಷಿತಗೊಂಡಿದೆ. ಇದರಿಂದ ಛತ್ ಪೂಜಾವನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ ಪರ್ವೇಶ್ ವರ್ಮಾ ಅವರು ಜಲ ಮಂಡಳಿ (ಡಿಜೆಬಿ) ಅಧಿಕಾರಿಗೆ ನಿಂದಿಸಿದ್ದರು. ಇದನ್ನೂ ಓದಿ: ಸಿಲಿಂಡರ್ ಸೋರಿಕೆಯಾಗಿ ಬೆಂಕಿ- ನರ್ಸಿಂಗ್ ಓದುತ್ತಿದ್ದ ವಿದ್ಯಾರ್ಥಿ ಸಾವು

ಈ ವಿಚಾರವಾಗಿ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಎಎಪಿಯ ರಾಷ್ಟ್ರೀಯ ವಕ್ತಾರ ಸೌರಭ್ ಭಾರದ್ವಾಜ್ ಅವರು, ದೆಹಲಿ ಸರ್ಕಾರ ಛಠ್ ಪೂಜೆಗೆ ತಯಾರಿ ನಡೆಸುತ್ತಿತ್ತು. ಈ ವೇಳೆ ಬಿಜೆಪಿ ನಾಯಕರು ಮಧ್ಯ ಪ್ರವೇಶಿಸಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೇ ಜಲ ಮಂಡಳಿ (ಡಿಜೆಬಿ) ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಪೂರ್ವಾಂಚಲಿ ಸಹೋದರರು ಕಷ್ಟಪಡಬೇಕು ಮತ್ತು ಹಬ್ಬವನ್ನು ಹಾಳು ಮಾಡಬೇಕೆಂಬುವುದೇ ಬಿಜೆಪಿಯ ಬಯಕೆಯಾಗಿದೆ ಎಂದು ಕಿಡಿಕಾರಿದ್ದಾರೆ.

ಟ್ವೀಟ್ ಜೊತೆಗೆ ಘಟನೆಯ ವೀಡಿಯೋವನ್ನು ಸೌರಭ್ ಭಾರದ್ವಾಜ್ ಅವರು ಹಂಚಿಕೊಂಡಿದ್ದು, ವೀಡಿಯೋದಲ್ಲಿ ಬಿಜೆಪಿ ಪರ್ವೇಶ್ ವರ್ಮಾ ಬ್ಯಾರೆಲ್‍ಗಳ ಸೆಟ್ ಅನ್ನು ತೋರಿಸಿ, “ವಿಷಕಾರಿ” ರಾಸಾಯನಿಕವನ್ನು ಸಿಂಪಡಿಸಿದ್ದಕ್ಕಾಗಿ ಅಧಿಕಾರಿಯ ಮೇಲೆ ಕಿರುಚಾಡಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಅಪ್ಪು `ಗಂಧದಗುಡಿ’ ತೊರೆದು 1 ವರ್ಷ- ನೋವು, ಕಣ್ಣೀರಿನ ಮಧ್ಯೆ ಪುಣ್ಯಸ್ಮರಣೆ

8 ವರ್ಷಗಳ ಬಳಿಕ ಈಗ ಇದನ್ನು ಸ್ವಚ್ಛಗೊಳಿಸಬೇಕು ಎಂದು ನೆನಪಾಗಿದ್ಯಾ? ಇಲ್ಲಿ ನೀವು ಸಾಕಷ್ಟು ಜನರನ್ನು ಕೊಲ್ಲುತ್ತಿದ್ದೀರಾ. ಎಂಟು ವರ್ಷಗಳಿಂದ ಯಮುನಾ ನದಿಯನ್ನು ಸ್ವಚ್ಛಗೊಳಿಸಲು ನಿಮಗೆ ಸಾಧ್ಯವಾಗಲಿಲ್ಲ. ಈಗ ಬಂದು ಇಲ್ಲಿ ಸ್ನಾನ ಮಾಡಿ ಎಂದು ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ಕೂಡ ಅಧಿಕಾರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button