– ಎದೆ, ತೊಡೆ ಬ್ಲೇಡ್‌ನಿಂದ ಕೊಯ್ದ ಚಿತ್ರಹಿಂಸೆ
ಪಾಟ್ನಾ: ಬಿಹಾರದ (Bihar) ಬೇಗುಸರಾಯ್‌ನಲ್ಲಿ ಮನೆಯೊಂದಕ್ಕೆ ಐವರು ಕಾಮುಕರು ನುಗ್ಗಿ, ಮನೆ ಮಾಲೀಕನನ್ನು ಬಂಧಿಸಿ, ಅವರ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಜೂನ್ 11 ರಂದು ಚಾಕಿಯಾ ಪೊಲೀಸ್ ಠಾಣೆ ಬಳಿ ಈ ಘಟನೆ ನಡೆದಿದೆ. ರಾತ್ರಿ 11:30ರ ಸುಮಾರಿಗೆ ಮಹಿಳೆ (Woman) ಶೌಚಾಲಯಕ್ಕೆ ಹೋಗಿದ್ದರು. ಈ ವೇಳೆ ದುಷ್ಕರ್ಮಿಗಳು ಮನೆಗೆ ನುಗ್ಗಿ ಆಕೆಯ ಗಂಡನನ್ನು ರೂಮ್‌ನಲ್ಲಿ ಬಂಧಿಸಿದ್ದಾರೆ. ಆಕೆ ಶೌಚಾಲಯದಿಂದ ಹೊರಬಂದ ಬಳಿಕ ಬಾಯಿಯನ್ನು ಬಟ್ಟೆಯಿಂದ ಕಟ್ಟಿಹಾಕಿದ್ದಾರೆ. ಬಳಿಕ ಮನೆಯ ಹೊರಗಿನ ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾರೆ. ಮಹಿಳೆ ಕೂಗಲು ಪ್ರಯತ್ನಿಸಿದಾಗ, ದುಷ್ಕರ್ಮಿಗಳು ಅವರ ಎದೆ ಮತ್ತು ತೊಡೆಯನ್ನು ಬ್ಲೇಡ್‌ನಿಂದ ಕೊಯ್ದಿದ್ದಾರೆ. ಇದನ್ನೂ ಓದಿ: ಪತಿಯೊಂದಿಗೆ ಜಗಳವಾಡಿ ತವರಿಗೆ ತೆರಳುತ್ತಿದ್ದ ಮಹಿಳೆ ಮೇಲೆ ಗ್ಯಾಂಗ್ ರೇಪ್ – ವೀಡಿಯೋ ಹರಿಬಿಟ್ಟು ವಿಕೃತಿ
ಈ ಬಗ್ಗೆ ಮಾಹಿತಿ ನೀಡಿರುವ ಸಂತ್ರಸ್ತೆ, ನನ್ನ ಅತ್ತಿಗೆಗೆ ಕರೆ ಮಾಡಿ ತಿಳಿಸಿದೆ. ಅವರು ಬಂದು ರೂಮ್ ಬಾಗಿಲು ತೆಗೆದು ನನ್ನ ಗಂಡನನ್ನು ಬಿಡುಗಡೆಗೊಳಿಸಿದರು. ಬಳಿಕ ಪೊಲೀಸರಿಗೆ ಕರೆ ಮಾಡಿದರು. ನಮಗೆ ಆಸ್ಪತ್ರೆಗೆ ಹೋಗಲು ಪೊಲೀಸರು ತಿಳಿಸಿದರು. ಬಳಿಕ ನಾವು ಬರೌನಿ ಆಸ್ಪತ್ರೆಗೆ ಹೋದೆವು, ಬರೌನಿಯಿಂದ ನಮ್ಮನ್ನು ಸದರ್ ಆಸ್ಪತ್ರೆಗೆ ಕಳುಹಿಸಿದರು. ಅಲ್ಲಿ ನನಗೆ ಚಿಕಿತ್ಸೆ ನೀಡಲಾಯಿತು.
ಚಿಕಿತ್ಸೆ ಬಳಿಕವೂ ನನ್ನ ಖಾಸಗಿ ಭಾಗಗಳಲ್ಲಿ ನಿರಂತರ ನೋವು ಇತ್ತು. ಅತ್ಯಾಚಾರದ ಸಮಯದಲ್ಲಿ ಉಂಟಾದ ಗಾಯಗಳಿಂದಾಗಿ ನೋವು ಉಂಟಾಗಿದೆ ಎಂದು ವೈದ್ಯರು ಹೇಳಿದರು. ನಂತರ ನಾವು ಮನೆಗೆ ಬಂದೆವು. ಇಷ್ಟಾದರೂ ನನಗೆ ತುಂಬಾ ನೋವು ಇತ್ತು. ಆದ್ದರಿಂದ ನಾವು ಮತ್ತೆ ಸದರ್ ಆಸ್ಪತ್ರೆಗೆ ಬಂದೆವು. ಆಗ ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ, ಗುಂಡು, ಕಲ್ಲು ಮತ್ತು ಮರದ ತುಂಡನ್ನು ತೆಗೆದರು. ನನಗೆ ಇನ್ನೂ ನೋವು ಇದೆ. ಅತ್ಯಾಚಾರದ ಸಮಯದಲ್ಲಿ ಪ್ರಜ್ಞೆ ಕಳೆದುಕೊಂಡಿದ್ದರಿಂದ ವಸ್ತುಗಳ ಬಗ್ಗೆ ನನಗೆ ತಿಳಿದಿರಲಿಲ್ಲ ಎಂದು ಸಂತ್ರಸ್ತೆ ಮಾಹಿತಿ ನೀಡಿದ್ದಾರೆ.
ತಿಂಗಳ ಹಿಂದೆ ಮನೆಗೆ ನುಗ್ಗಿದ್ದ ಮೂರು ಪುರುಷರು
ಮೂರು ತಿಂಗಳ ಹಿಂದೆ ಮೂವರು ದುಷ್ಕರ್ಮಿಗಳು ಸಂತ್ರಸ್ತೆಯ ಮನೆಗೆ ನುಗ್ಗಿ ಆಕೆಯನ್ನು ಥಳಿಸಿದ್ದರು. ಈ ವೇಳೆ ಹಣ ಮತ್ತು ಆಭರಣ ದೋಚಿ ಪರಾರಿಯಾಗಿದ್ದರು. ಆಗಲೂ ಲೈಂಗಿಕ ದೌರ್ಜನ್ಯ ನಡೆಸಲು ಪ್ರಯತ್ನಿಸಿದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಮಹಿಳೆ ಹೇಳಿದ್ದಾರೆ.
ಈ ಆಘಾತಕಾರಿ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಡಿಎಸ್ಪಿ ಆನಂದ್ ಕುಮಾರ್ ಪಾಂಡೆ, ಪ್ರಕರಣದ ತನಿಖೆ ನಡೆಯುತ್ತಿದೆ. ಕೃತ್ಯ ಎಸಗಿದವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಅಲ್ಲದೇ ಪೊಲೀಸರ ನಿರ್ಲಕ್ಷ್ಯತನ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇನ್‌ಸ್ಟಾದಲ್ಲಿ ಶುರುವಾದ ಲವ್ – ಲಿವ್ ಇನ್ ಗೆಳತಿಯ ಕತ್ತು ಹಿಸುಕಿ ಕೊಂದ ಪ್ರಿಯಕರ!
