Bengaluru CityCinemaKarnatakaLatestMain PostSandalwood

ಬ್ರೀಜರ್ ಮೇಲೆ ಆಣೆಗೂ ರಾಕೇಶ್‌ನನ್ನು ಟೆಂಪ್ರವರಿ ಥರ ನೋಡಿಲ್ಲ: ಸೋನು ಗೌಡ ಕಣ್ಣೀರು

ಬಿಗ್ ಬಾಸ್ ಮನೆಯಲ್ಲಿ ಈಗ ಒಂದಷ್ಟು ಗುಂಪು ಕ್ರಿಯೇಟ್‌ ಆಗಿದೆ. ಇಡೀ ದಿನ ಮನೆಯಲ್ಲಿಯೇ ಇರಬೇಕಾದ ಕಾರಣ ತಮ್ಮ ತಮ್ಮ ಯೋಚನೆಗೆ ತಕ್ಕಂತೆ ಮ್ಯಾಚ್ ಆಗುವವರನ್ನು ಫ್ರೆಂಡ್ಸ್ ಮಾಡಿಕೊಂಡಿದ್ದಾರೆ. ಅದರಂತೆ ರಾಕೇಶ್ ಅಡಿಗ ಜೊತೆ ಸೋನು ಶ್ರೀನಿವಾಸ್ ಗೌಡ ಫ್ರೆಂಡ್‌ಶಿಪ್ ಮನೆಯ ಹೈಲೈಟ್‌ ಆಗಿದೆ. ಹೀಗೀರುವಾಗ ರಾಕೇಶ್‌ನ ನೆನೆದು ಸೋನು ಗಳಗಳನೆ ಅತ್ತು ಕಣ್ಣೀರು ಸುರಿಸಿದ್ದಾರೆ. ಇತ್ತ ರಾಕಿ ಮೇಲೆ ಸೋನುಗೆ ಲವ್ ಆಗಿದ್ಯಾ ಎಂಬ ಪ್ರಶ್ನೆ ಕೆಲವರನ್ನ ಕಾಡುತ್ತಿದೆ.

ದೊಡ್ಮನೆ ಬಿಗ್ ಬಾಸ್‌ನಲ್ಲಿ ನಿನ್ನೆ ರಾತ್ರಿ ರಾಕೇಶ್ ಇದ್ದಕ್ಕಿದ್ದ ಹಾಗೇ ಸೋನುಳನ್ನು ಹರ್ಟ್ ಮಾಡಿದ್ದಾನೆ. ಅದು ಈಗ ಬಯಲಾದಂತೆ ಕಾಣುತ್ತಿದೆ. ರಾಕೇಶ್ ಹೇಳಿದ ಆ ಒಂದು ಮಾತು ಸೋನುಳನ್ನು ಅಳುವಂತೆ ಮಾಡಿದೆ. ಅಕ್ಷತಾ ಮಲಗುವುದಕ್ಕೆ ಎಂದು ಬಂದು ಬೆಡ್ ರೂಮಿನಲ್ಲಿ ಬಂದು ಕುಳಿತಿದ್ದಳು. ಅಲ್ಲಿಗೆ ಬಂದ ಸೋನು, ಎಲ್ಲವನ್ನು ಹೇಳಿಕೊಂಡಿದ್ದಾಳೆ. ಅವ್ನು ನನ್ನ ಬೇಬಿಮಾ ಅಂದುಕೊಂಡಿದ್ದಾನೆ ಏನನ್ನು ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ ಎಂದುಕೊಂಡಿದ್ದಾನೆ. ನಮ್ಮ ಮೇಲೆ ಆಣೆಗೂ, ಬ್ರೀಜರ್ ಮೇಲೆ ಆಣೆಗೂ ನಾನು ಅವನನ್ನು ಟೆಂಪ್ರವರಿ ಥರ ನೋಡಿಲ್ಲ ಎಂದು ಸೋನು ಹೇಳಿಕೊಂಡಿದ್ದಾರೆ.

ನಾವೂ ಒಬ್ಬರಿಗೆ ಪ್ರೀತಿ ಕೊಟ್ಟಾಗ ಮತ್ತೆ ಆ ಪ್ರೀತಿ ಸಿಗದೆ ಹೋದರೆ ಎಷ್ಟು ಹರ್ಟ್ ಆಗುತ್ತೆ ಗೊತ್ತಾ. ನೀನು ನನ್ನನ್ನ ನೋಡಿದ್ದೀಯಾ. ಇಲ್ಲಿ ಎಷ್ಟು ಜನ ಹುಡುಗರಿದ್ದಾರೆ. ಆದರೆ ನಾನು ಯಾರ ಜೊತೆಗೂ ಹಗ್ ಮಾಡಲ್ಲ, ಅವನ ಜೊತೆ ಇದ್ದಷ್ಟು ಕ್ಲೋಸ್ ಬೇರೆ ಯಾರ ಜೊತೆಗೂ ಇಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಇದೇ ಸಮಯಕ್ಕೆ ರಾಕಿ ಕೂಡ ಬಂದಿದ್ದಾನೆ. ಅಕ್ಷತಾ ಸಮಾಧಾನ ಮಾಡುತ್ತಿದ್ದಾಳೆ. ಆಯ್ತು ನಾನು ಎಲ್ಲವನ್ನು ಅರ್ಥ ಮಾಡಿಸುತ್ತೀನಿ ಎಂದಾಗ ಸೋನು ಇನ್ನು ಯಾವಾಗ ಅರ್ಥ ಮಾಡಿಸುತ್ತೀಯಾ, ಅರ್ಥ ಮಾಡಿಸುವುದು, ಅರ್ಥ ಮಾಡಿಸುವವರು ಬೇಡ. ಅರ್ಥ ಮಾಡಿಕೊಳ್ಳುವವರು ಬೇಕು ಎಂದಿದ್ದಾಳೆ. ಅದಕ್ಕೆ ಅಕ್ಷತಾ ಆಯ್ತು ನೀನೆ ಅರ್ಥ ಮಾಡಿಸು ಎಂದು ಸೋನು ಗಳಗಳನೆ ಅತ್ತಿದ್ದಾರೆ. ಇದನ್ನೂ ಓದಿ:ಸಾನ್ಯ-ಜಶ್ವಂತ್ ಬಗ್ಗೆ ಕೆಟ್ಟದಾಗಿ ಮಾತನಾಡಿ, ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಉದಯ್ ಸೂರ್ಯ

ಇತ್ತೀಚಿನ ದಿನಗಳಲ್ಲಿ ಸೋನುಗೆ ಲವ್ವಾಗಿದೆ ಎಂಬುದು ಅಕ್ಷತಾಗೆ ಗೊತ್ತಾಗಿದೆ. ಇದನ್ನೇ ಸೋನುಗೂ ಹೇಳುತ್ತಿದ್ದಾಳೆ. ನಿಂಗೆ ಅವನ ಮೇಲೆ ಲವ್ವಾಗಿದೆ ಅಂತ. ಇದೇ ಸಮಯಕ್ಕೆ ಬಂದ ರಾಕೇಶ್ ಏನು ಅಕ್ಷತಾ ಬಳಿ ಅಳುತ್ತಾ ಇದ್ದಾಳಾ ಅಂದಿದ್ದಾನೆ ಸೋನು ಇಲ್ಲಪ್ಪ ಯಾಕೆ ಅಳಬೇಕು ಎನ್ನುತ್ತಲೇ ಮತ್ತೆ ಕಣ್ಣೀರು ಹಾಕಿದ್ದಾಳೆ. ರಾಕೇಶ್ ಕೂಡ ಸಮಾಧಾನ ಮಾಡುವುದಕ್ಕೆ ಯತ್ನಿಸಿದ್ದಾನೆ. ಹೇ ಸೋನಾಕ್ಷಿ ಅಳಬೇಡ ಎಂದಿದ್ದಾನೆ. ಅದರ ಜೊತೆಗೆ ಸೋನು ಅವರ ನಿಜವಾದ ಹೆಸರನ್ನು ಹೇಳಿದ್ದಾರೆ. ಶಾಂಭವಿ ಅದು ಹೇಗೆ ಅಳುತ್ತೀಯ ತೋರಿಸು ಎಂದು ರಾಕೇಶ್ ತಮಾಷೆ ಮಾಡಿದ್ದಾರೆ. ಒಟ್ನಲ್ಲಿ ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಮತ್ತು ಸೋನು ಶ್ರೀನಿವಾಸ್ ಗೌಡ ನಡುವೆ ಫ್ರೆಂಡ್‌ಶಿಪ್‌ಗೂ ಮೀರಿದ ಸ್ನೇಹ ಇದ್ಯಾ ಎಂಬುದನ್ನು ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

Live Tv

Leave a Reply

Your email address will not be published. Required fields are marked *

Back to top button