Bengaluru CityCinemaKarnatakaLatestSandalwood

ನನಗೆ ಲವ್ ಅಂದರೆ ಅಸಹ್ಯ ಆದರೆ ಪಾರ್ಟ್ನರ್ ಬೇಕು: ಸೋನು ಶ್ರೀನಿವಾಸ್ ಗೌಡ

ಬಿಗ್ ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಸಾಕಷ್ಟು ವಿಚಾರವಾಗಿ ಹೈಲೈಟ್ ಆಗಿದ್ದಾರೆ. ಸೋನು ಸೂಪರ್ ಆದರೆ ಆಕೆಯ ಬಾಯಿ ಡೇಂಜರ್ ಎಂಬುದನ್ನ ಈಗಾಗಲೇ ಪ್ರೂವ್ ಮಾಡಿದ್ದಾರೆ. ರಾಕೇಶ್ ಅಡಿಗ (Rakesh Adiga) ಜೊತೆಗಿನ ಸೋನು ಫ್ರೆಂಡ್‌ಶಿಪ್ ಅಷ್ಟೇ ಹೈಲೈಟ್ ಆಗಿದೆ. ಇನ್ನೂ ರಾಕೇಶ್ ಜೊತೆ ಮಾತಾಡುವಾಗ ಸೋನು, ಬಿಗ್ ಬಾಸ್‌ಗೆ ವಿಶೇಷ ಮನವಿವೊಂದನ್ನ ಮಾಡಿಕೊಂಡಿದ್ದಾರೆ. ಸಖತ್ ಆಗಿರುವ 24 ವರ್ಷದ ಹುಡುಗನನ್ನು ಕಳುಹಿಸಿ ಬಿಗ್ ಬಾಸ್‌ಗೆ ಸೋನು ಬೇಡಿಕೆ ಇಟ್ಟಿದ್ದಾರೆ.

ಇತ್ತೀಚೆಗೆ ರಾಕೇಶ್, ಸೋನುಗೆ ಗೌರವ ಕೊಟ್ಟು ಮಾತನಾಡುತ್ತಿದ್ದಾರೆ. ಈ ಸಡನ್ ಬದಲಾವಣೆಯನ್ನು ಅಷ್ಟೇ ಕೂಲ್ ಆಗಿ ಸೋನು ಸ್ವೀಕರಿಸಿದ್ದಾರೆ. ಫ್ಲರ್ಟ್ ಯಾಕೆ ಮಾಡಬೇಕು ಹಾಗೆ ಬೇಕೆಂದರೆ ಟೈಂ ಪಾಸ್ ಮಾಡುವ ಹುಡುಗಿಯರೇ ಸಿಕ್ತಾರೆ ಎಂದು ಸೋನು ಹೇಳಿದ್ದಾರೆ. ಅಲ್ಲದೇ ಪ್ರೀತಿ, ಕಾಳಜಿ ವಿಚಾರದಲ್ಲಿ ತಮ್ಮ ನಡೆ ಏನು ಎಂಬುದನ್ನು ಕೂಡ ಅವರು ತಿಳಿಸಿದ್ದಾರೆ. ಇದನ್ನೂ ಓದಿ:ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಲವ್ವಿ-ಡವ್ವಿ: ರೂಪೇಶ್‌ಗೆ ಟೆನ್ಷನ್ ಶುರು

ಅಪ್ಪ ದೇವರೇ ನೀನು ಇರುವುದೇ ನಿಜವಾದರೆ ನನಗೆ ಈಗ 22 ವರ್ಷ, ಸಖತ್ ಆಗಿ ಇರುವ 24 ವರ್ಷದ ಹುಡುಗನನ್ನು ಕಳಿಸಿಕೊಡು ದೇವರೇ ಎಂದು ಸೋನು ಗೌಡ ಅವರು ಬೇಡಿಕೊಂಡರು. ಎದುರಲ್ಲೇ ಇದ್ದಾನಲ್ಲ ಎಂದು ಜಶ್ವಂತ್ ಕಡೆಗೆ ರಾಕೇಶ್ ಕೈ ತೋರಿಸಿದರು. ಅವನು ಬೇಡ, ಅವನು ಯಂಗೇಜ್ ಆಗಿದ್ದಾನೆ ಅಂತ ಸೋನು ಹೇಳಿದರು. ನಾನು ಯಂಗೇಜ್ಡ್ ಅಲ್ಲ, ಕಮಿಟೆಡ್ ಎಂದರು ಜಶ್ವಂತ್ ಉತ್ತರಿಸಿದ್ದಾರೆ.

ನನಗೆ ಲವ್ ಅಂದರೆ ಅಸಹ್ಯ. ಆದರೆ ಪಾರ್ಟ್ನರ್ ಬೇಕು. ಇಬ್ಬರೂ ಪರಸ್ಪರ ಕೇರ್ ಮಾಡುತ್ತೇವೆ. ಲವ್ವಲ್ಲಿ ಏನೂ ಸಿಗಲ್ಲ ಎಂದು ಸೋನು ಹೇಳಿದ್ದಾರೆ.

Live Tv

Leave a Reply

Your email address will not be published.

Back to top button