Bengaluru CityCinemaKarnatakaLatestMain PostSandalwood

ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಲವ್ವಿ-ಡವ್ವಿ: ರೂಪೇಶ್‌ಗೆ ಟೆನ್ಷನ್ ಶುರು

ಬಿಗ್ ಬಾಸ್ ಓಟಿಟಿ (Bigg Boss Ott) ಇದೀಗ ಕಡೆಯ ಹಂತದಲ್ಲಿದೆ. ಓಟಿಟಿ ಸೀಸನ್ ಮುಗಿಯಲು ಒಂದೇ ವಾರ ಬಾಕಿಯಿದೆ. ದೊಡ್ಮನೆಯಲ್ಲಿ ಸಾಕಷ್ಟು ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರವಾಗಿ ಹೈಲೈಟ್ ಆಗಿದ್ದಾರೆ. ಇನ್ನು ನಂದಿನಿ ಮತ್ತು ಜಶ್ವಂತ್ ರಿಯಲ್ ಪ್ರೇಮಿಗಳಾಗಿ ಅಪಾರ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಆದರೆ ಈಗ ಬಿಗ್ ಬಾಸ್ ಮನೆಯಿಂದ ನಂದಿನಿ ಎಲಿಮಿನೇಟ್ ಆಗಿದ್ದಾರೆ. ಗರ್ಲ್‌ಫ್ರೆಂಡ್ ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಕ್ಲೋಸ್ ಆಗಿದ್ದಾರೆ.

ರಿಯಲ್ ಲೈಫ್‌ನಲ್ಲೂ ಪ್ರೇಮಿಗಳಾಗಿದ್ದ ನಂದಿನಿ (Nandini) ಮತ್ತು ಜಶ್ವಂತ್ (jashwanth) ದೊಡ್ಮನೆಗೆ ಕಾಲಿಟ್ಟಿದ್ದರು. ಒಂದು ವಾರದ ನಂತರ ಬಿಗ್ ಬಾಸ್ ಆದೇಶದಂತೆ ಪ್ರತ್ಯೇಕ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದರು. ಮನೆಯಲ್ಲಿ ನಂದು ಮತ್ತು ಜಶ್ ಹಾಗೂ ಸಾನ್ಯ ಮತ್ತು ರೂಪೇಶ್ ಒಂದು ಟೀಮ್ ಆಗಿ ಹೈಲೈಟ್ ಆಗಿದ್ದರು. ಇನ್ನೂ ಸಾನ್ಯ ಜತೆಗಿನ ಜಶ್ವಂತ್ ಒಡನಾಟ ನಂದಿನಿಯ ಮುನಿಸಿಗೆ ಕಾರಣವಾಗಿತ್ತು. ಇವರಿಬ್ಬರ ಮಧ್ಯೆ ಮನಸ್ತಾಪ ಕೂಡ ಜಾಸ್ತಿಯಾಗಿತ್ತು. ‌

ನಂದಿನಿ ಎಲಿಮಿನೇಷನ್ ಬಳಿಕ ಜಶ್ವಂತ್, ಸಾನ್ಯ ಜೊತೆ ಸಲುಗೆಯಿಂದ ಇರುವುದು ಮನೆಯ ಮಂದಿಯ ಗಮನಕ್ಕೆ ಬಂದಿದೆ. ನಂದುನ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಮಾತಿನಲ್ಲಿ ಹೇಳಿದ್ದರು ಕೂಡ ನಡೆಯಲ್ಲಿ ಬೇರೆಯದ್ದೇ ವಿಚಾರ ಮನೆಯವರ ಗಮನಕ್ಕೂ ಬಂದಿದೆ. ಜಶ್ ಮತ್ತು ಸಾನ್ಯ ಹತ್ತಿರವಾಗುತ್ತಿದ್ದಂತೆ ರೂಪೇಶ್ ಅವರು ಟೆನ್ಷನ್ ಆಗಿದ್ದಾರೆ. ಈ ಕುರಿತು ವೀಕೆಂಡ್ ಪಂಚಾಯಿತಿಯಲ್ಲಿ ಮಾತುಕಥೆ ಆಗಿದೆ. ಇದನ್ನೂ ಓದಿ:ಬ್ಯೂಟಿಫುಲ್ ಹುಡುಗಿಯರ ನಡುವೆ ‘ಶಿವಾಜಿ ಸುರತ್ಕಲ್ 2’ ಸಿನಿಮಾ ಒಲವಿನ ಟೀಸರ್

ದಿನ ಕಳೆದಂತೆ ಸಾನ್ಯ ಜೊತೆಗಿನ ಜಶ್ವಂತ್ ಸಲುಗೆ ನಂದಿನಿಗೆ ಬೇಸರ ತಂದಿತ್ತು. ಈ ವಿಚಾರವಾಗಿ ಸಾಕಷ್ಟು ಬಾರಿ ನಂದು ಬೇಸರ ಮಾಡಿಕೊಂಡಿದ್ದಾರೆ. ಜಶ್ ನನಗೆ ಸಮಯ ನೀಡುತ್ತಿಲ್ಲ ಎಂದು ಮುನಿಸಿಕೊಂಡಿದ್ದು ಇದೆ. ಇದಾದ ನಂತರ ನಂದಿನಿ, ಜಶ್ ವಿಚಾರದಲ್ಲಿ ಎಷ್ಟರ ಮಟ್ಟಿಗೆ ಪೊಸೆಸಿವ್ ಎಂಬುದು ಎಲ್ಲರಿಗೂ ತಿಳಿಯಿತು. ಹೀಗಿರುವಾಗ ನಂದಿನ ಎಲಿಮಿನೇಷನ್ ನಂತರ ಸಾನ್ಯ ಜೊತೆ ಜಶ್ ಕ್ಲೋಸ್ ಆಗಿರುವುದು ಎಲ್ಲರ ಗಮನಕ್ಕೆ ಬಂದಿದೆ.

ನಂದು ಇದ್ದಾಗ ಸಾನ್ಯ, ರೂಪೇಶ್ ಜೊತೆ ಇರುತ್ತಿದ್ದರು. ಆದರೆ ಈಗ ಇವರಿಬ್ಬರ ಮಧ್ಯೆ ಜಶ್ವಂತ್ ಎಂಟ್ರಿ ಕೊಟ್ಟಿದ್ದಾರೆ. ಜಶ್ವಂತ್ ಈ ನಡೆಯಿಂದ ರೂಪೇಶ್ ಟೆನ್ಷನ್ ಮಾಡಿಕೊಂಡಿದ್ದಾರೆ. ಇನ್ನೂ ಬಿಗ್ ಬಾಸ್ ಓಟಿಟಿ ಗೆಲುವಿನ ಪಟ್ಟವನ್ನ ಗಿಟ್ಟಿಸಿಕೊಳ್ಳಲು ಒಂದೇ ವಾರ ಬಾಕಿಯಿದೆ. ಯಾರಿಗೆ ಟ್ರೋಫಿ ಸಿಗಲಿದೆ ಎಂಬುದನ್ನ ಕಾದು ನೋಡಬೇಕಿದೆ.

Live Tv

Leave a Reply

Your email address will not be published.

Back to top button