– ಟಿಎಂಸಿ ಪಕ್ಷಕ್ಕೂ ಗುಡ್‌ಬೈ – ದೀದಿಗೆ ಶಾಕ್ ಮೇಲೆ ಶಾಕ್
ಕೋಲ್ಕತ್ತಾ: ಕಾಂಗ್ರೆಸ್ ಪಕ್ಷದ ಜೊತೆಗೆ ಟಿಎಂಸಿ ವಿಲೀನ ವದಂತಿ ನಡುವೆ ಮಾಜಿ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಅವರ ಪಕ್ಷದಲ್ಲಿ ರಾಜೀನಾಮೆ ಪರ್ವ ಮುಂದುವರಿದಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಪ್ರಕಾಶ್ ಚಿಕ್ ಬರೈಕ್ (Prakash Chik Baraik) ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
TMC MP Prakash Chik Baraik resigns from Rajya Sabha. pic.twitter.com/0o77eKX2la
— Press Trust of India (@PTI_News) June 11, 2026
ಸುಖೇಂದು ಶೇಖರ್ ರಾಯ್ (Sukhendu Sekhar Roy) ಹಾಗೂ ಸುಷ್ಮಿತಾ ದೇವ್ ಅವರ ಬಳಿಕ ರಾಜ್ಯಸಭೆಗೆ ರಾಜೀನಾಮೆ ನೀಡಿದ ಮೂರನೇ ಸಂಸದರಾಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಜೊತೆ ಟಿಎಂಸಿ ವಿಲೀನಕ್ಕೆ ಆಹ್ವಾನ ಕೊಟ್ಟ ಸೋನಿಯಾ ಗಾಂಧಿ – ʻದೀದಿʼಗೆ ಉಪಾಧ್ಯಕ್ಷೆ ಸ್ಥಾನ ಆಫರ್

ಪ್ರಕಾಶ್ ಚಿಕ್ ಬರೈಕ್ ಅವರಿಂದು ಬೆಳಗ್ಗೆ 11 ಗಂಟೆಗೆ ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ (CP Radhakrishnan) ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಬರೈಕ್ ಅವರ ರಾಜೀನಾಮೆ ಬಳಿಕ ಟಿಎಂಸಿ ಸಂಸದರ ಬಲ 10ಕ್ಕೆ ಕುಸಿದಿದೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಮತ್ತೊಂದು ಶಾಕ್ – ಟಿಎಂಸಿ ರಾಜ್ಯಸಭಾ ಸಂಸದೆ ಸುಷ್ಮಿತಾ ದೇವ್ ರಾಜೀನಾಮೆ

ʻನಾನು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ, ಇದನ್ನ ದಯವಿಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಸ್ವೀಕರಿಸಬೇಕು. ರಾಜ್ಯಸಭಾ ಸದಸ್ಯನಾಗಿ ನನ್ನ ಅಧಿಕಾರಾವಧಿಯಲ್ಲಿ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರ ನೀಡಿದ ಗೌರವಾನ್ವಿತ ಉಪರಾಷ್ಟ್ರಪತಿಗಳು, ರಾಜ್ಯಸಭಾ ಸಚಿವಾಲಯದ ಎಲ್ಲಾ ಕಾರ್ಯಕಾರಿಣಿಗಳಿಗೆ ಕೃತಜ್ಞತೆ ಅರ್ಪಿಸುತ್ತೇನೆʼ ಎಂದು ಬರೈಕ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜೀನಾಮೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ನಾನು, ಬಂಗಾಳದ ಜನರ ಅಭಿಪ್ರಾಯ ಗೌರವಿಸಿ, ನನ್ನ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.
