ದೊಡ್ಮನೆಯಲ್ಲಿ ಬಿಗ್ ಬಾಸ್ (Bigg Boss) ಮನೆ ಮಂದಿಗೆ 5 ಲಕ್ಷ ಹಣವನ್ನು ಗಿಫ್ಟ್ ಆಗಿ ನೀಡುವ ಅವಕಾಶವೊಂದನ್ನು ನೀಡಿತ್ತು. ಅದು ಟಾಸ್ಕ್ ಅನ್ನು ಇಂತಿಷ್ಟು ಗಂಟೆಯ ಒಳಗೆ ಗೆದ್ದರೆ ಮಾತ್ರ ಎಂಬ ನಿಯಮವಿದೆ. ಅದರಂತೆ ಈ ವಾರ ಒಂದೊಂದೆ ಟಾಸ್ಕ್ ಅನ್ನು ನೀಡುತ್ತಾ ಹೋಗಿದ್ದಾರೆ. ಒಂದೊಂದು ಟಾಸ್ಕ್ನಲ್ಲೂ ಬಿಗ್ ಬಾಸ್ ನೀಡುತ್ತಿದ್ದ ಹಣ 50 ಸಾವಿರ. ಆದರೆ ಮನೆ ಮಂದಿ ಯಾವ ಆಟವನ್ನು ಅಷ್ಟು ಸರಿಯಾಗಿ ಆಡಲಿಲ್ಲ. ಹೀಗಾಗಿ 5 ಲಕ್ಷ ಹಣದಲ್ಲಿ ಸದಸ್ಯರ ಪಾಲಾಗಿದ್ದು, 2 ಲಕ್ಷದ 86 ಸಾವಿರ ಮಾತ್ರ.
ಎಷ್ಟೇ ಹಣ ಗೆದ್ದರು ಮನೆ ಮಂದಿಗೆಲ್ಲಾ ಸಿಗುತ್ತೆ ಎನ್ನುವ ಹಾಗಿಲ್ಲ. ಈ ಹಣ ಫೈನಲ್ ತಲುಪಿದ ಒಬ್ಬರಿಗೆ ಮಾತ್ರ ಸಿಗಲಿದೆ. ಆದರೆ ಆಗಾಗ ಆದ ಪೌಲ್ ನೆನೆದು ರೂಪೇಶ್ ಬೇಸರ ಮಾಡಿಕೊಂಡಿದ್ದಾರೆ. ಇಲ್ಲಿ ಸರಿಯಾದ ವ್ಯಕ್ತಿಯನ್ನು ಆಟವಾಡುವುದಕ್ಕೆ ಆರಿಸಿಲ್ಲ ಎಂಬ ಮಾತುಗಳು ಬಂದಿದೆ. ಆ ಒಂದು ಕಾರಣಕ್ಕೆ ರೂಪೇಶ್ (Roopesh Shetty) ಎಲ್ಲರಿಗೂ ಅವಕಾಶ ನೀಡಿ, ಸೋತರಾ ಎಂಬ ಪ್ರಶ್ನೆಯೂ ಇದೀಗ ಎಲ್ಲರಿಗೂ ಮೂಡಿದೆ.
ಬಿಗ್ ಬಾಸ್ ಮನೆಯಲ್ಲಿ ಐದನೇ ವಾರ ಸಖತ್ ರೋಚಕ ತಿರುವಿನಿಂದ ಮನೆಯ ರಂಗು ಹೆಚ್ಚಿತ್ತು. ಇನ್ನೂ ಟಾಸ್ಕ್ ಕಡೆಯ ದಿನವಾದ ಕಾರಣ ಬಿಗ್ ಬಾಸ್ ಮೂರು ಟಾಸ್ಕ್ಗಳನ್ನ ನೀಡಿದ್ದರು. ಬೆಳಗ್ಗೆನೆ ಬುಟ್ಟಿ ಮತ್ತು ಬಾಲ್ ಟಾಸ್ಕ್ ಅನ್ನು ನೀಡಿತ್ತು. ಅದರಲ್ಲಿ ಮೂರು ತಂಡಗಳಾಗಿ ಆಡಲಾಯಿತು. ಜಶ್ವಂತ್, ಸೋನು ಆಂಡ್ ಗುರೂಜಿ ಒಂದು ಟೀಂ ಆಗಿದ್ದರು. ಕೋ ಆರ್ಡಿನೇಷನ್ ಮಿಸ್ ಆಗಿ ಅವರು ಸೋತರು. ಮೂರು ಬಾರಿ ಜಶ್ವಂತ್ ಪೌಲ್ ಆದರು. ಇದರಿಂದ ರೂಪೇಶ್ಗೆ ಅದಾಗಲೇ ಕೋಪ ಬಂದಿತ್ತು. ನಿನಗೆ ಗೇಮ್ ಅರ್ಥವಾಗಿಲ್ಲ ಎಂದಾಗ ಒಂದು ಕ್ಷಣ ನಿಂತು ಯೋಚಿಸಿ ಮುಂದುವರೆಯಬೇಕು ಎಂದು ರೂಪೇಶ್ ಸಲಹೆ ನೀಡಿದ್ದರು. ಇದನ್ನೂ ಓದಿ:ಚಪ್ಪಲಿಗೆ ಬಟ್ಟೆ ಸುತ್ತುಕೊಂಡು ಹೊಡಿತ್ತೀನಿ ಎಂದು ಜಯಶ್ರೀ ವಾರ್ನಿಂಗ್ ಕೊಟ್ಟಿದ್ಯಾರಿಗೆ?
ಬಳಿಕ ಕಣ್ಣು ಜೋಡಿಸುವ ಟಾಸ್ಕ್ನಲ್ಲಿ ಬಿಗ್ ಬಾಸ್ ನೀಡಿದ್ದು 50 ಸಾವಿರ. ಈ ಗೇಮ್ನಿಂದಾಗಿ 50 ಸಾವಿರ ಗೆದ್ದೆ ಬಿಟ್ಟರು. ಇದು ಕಡೆಯ ಟಾಸ್ಕ್ ಎಂದುಕೊಳ್ಳುವಾಗಲೇ ರಾತ್ರಿ 11 ಗಂಟೆಯ ಮೇಲೆ ಕೊನೆಯ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿತ್ತು. ಅದುವೆ ಗ್ಲಾಸ್ ಜೋಡಿಸುವ ಟಾಸ್ಕ್ನಲ್ಲಿ ಸೋನು, ಜಶ್ವಂತ್, ಜಯಶ್ರೀ, ಸಾನ್ಯಾಳನ್ನು ಈ ಆಟಕ್ಕೆ ಸೆಲೆಕ್ಟ್ ಮಾಡಲಾಯ್ತು. ಮೊದಲಿಗೆ ಜಶ್ವಂತ್ ಆ ಆಟ ಶುರು ಮಾಡಿದ. ಮೂರು ಲೋಟ ಮೂರು ಪೇಪರ್. ಒಂದರ ಮೇಲೊಂದು ಇಟ್ಟು ಪೇಪರ್ ಎಳೆದಾಗ ಲೋಟಗಳು ಒಂದರ ಮೇಲೆ ಒಂದು ಕೂರಬೇಕು. ಜಶ್ವಂತ್ ಸೂಪರ್ ಆಗಿ, ಫಾಸ್ಟ್ ಆಗಿ ಮಾಡಿದ. ಆದ್ರೆ ಸೋನು ಸಾಕಷ್ಟು ಸಮಯ ತೆಗೆದುಕೊಂಡು ಬಿಟ್ಟರು. ಜಯಶ್ರೀ ಕೂಡ ಚೆನ್ನಾಗಿ ಆಡಿದಳು. ಆದರೆ ಸಾನ್ಯಾ ಮಾಡುವಷ್ಟರಲ್ಲಿ ಸಮಯ ಮುಗಿದಿತ್ತು. ಇದಕ್ಕೆ ಸೋನು ಕ್ಷಮೆ ಕೂಡ ಕೇಳಿದರು. ಮನೆಯವರೆಲ್ಲ ಸಮಾಧಾನ ಕೂಡ ಮಾಡಿದರು. ಆದರೆ ಈ ಆಟವನ್ನು ಸೋತಿದ್ದರು.
ಬಿಗ್ ಬಾಸ್ (Bigg Boss) ಮನೆಯವರು ಗಳಿಸಿದ ಒಟ್ಟು ಹಣ 2 ಲಕ್ಷದ 86 ಸಾವಿರ ಎಂದಾಗ ಎಲ್ಲರೂ ಖುಷಿ ಪಟ್ಟರು. ಇಲ್ಲಿಗೆ ಈ ವಾರದ ಟಾಸ್ಕ್ಗಳು ಮುಕ್ತಾಯವಾಗಿದೆ ಎಂದಾಗ ರೂಪೇಶ್ ಮುಖದಲ್ಲಿ ಬೇಸರ ಆವರಿಸಿತ್ತು.
Live Tv
[brid partner=56869869 player=32851 video=960834 autoplay=true]