– ಮಾಯಗಾತಿಯ ರಹಸ್ಯ ಬಯಲಾಗಿದ್ದು ಹೇಗೆ?
ಬೆಂಗಳೂರು: ಲಿವ್ ಇನ್ ಸಂಬಂಧದಲ್ಲಿದ್ದ (Live Relationship) ಜೋಡಿ ಅದು. ಮನೆಗೆ ಬಾ ಅಂತಾ ಕರೆಸಿಕೊಂಡು ವೆಸ್ಟರ್ನ್ ಸ್ಟೈಲ್ ನಲ್ಲಿ ಪ್ರಪೋಸ್ ಮಾಡ್ತೀನಿ ಅಂತಾ ಕೈಕಾಲು ಕಟ್ಟಿ, ಬಟ್ಟೆ ಬಿಚ್ಚಿದ್ದಾಳೆ. ಪ್ರಪೋಸ್ ಮಾಡ್ತಾಳೆ ಅಂತಾ ಅಂದ್ಕೊಂಡಿದ್ದ ಯುವಕನ ಮೇಲೆ ಪ್ರೇಯಸಿಯೇ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದಿದ್ದಾಳೆ….
ಪ್ರೇಯಸಿಯ (Lover) ಕೈಯಲ್ಲೇ ಬೆಂಕಿ ಹಚ್ಚಿಸಿಕೊಂಡು ಧಗ ಧಗನೆ ಉರಿದು ಯುವಕ ಪ್ರಾಣ ಬಿಟ್ಟಿದ್ದಾನೆ. ನನ್ನ ಅವಾಯ್ಡ್ ಮಾಡ್ತಾನೆ ಅಂತಾ ಪ್ರಿಯತಮನ ಮೇಲೆ ಆಕೆಗೆ ಸಿಟ್ಟಿತ್ತು. ಅದೇ ಸಿಟ್ಟಲ್ಲಿ ಪ್ರಿಯತಮನನ್ನ ಬ್ರೂಟಲ್ ಆಗಿ ಮರ್ಡರ್ ಮಾಡಿದ್ದಾಳೆ. ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯ ಅಂಜನಾನಗರದಲ್ಲಿ ಮನೇಲಿ ಯಾರಿಲ್ಲ ಮನೆಗೆ ಬಾ ಅಂತಾ ಯುವಕನನ್ನ ಮನೆಗೆ ಕರೆದಿದ್ದ ಯುವತಿ ಆತನ ಬಟ್ಟೆ ಬಿಚ್ಚಿ ಕೈಕಾಲು ಕಟ್ಟಿ ಕಣ್ಈಗೆ ಬಟ್ಟೆ ಕಟ್ಟಿ, ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದಿದ್ದಾಳೆ.

ಪ್ರೀತಿ ಕೊಂದ ಕೊಲೆಗಾತಿ
ಇವತ್ತು ಮಧ್ಯಾಹ್ನ ಸುಮಾರು 2 ಗಂಟೆ ಸಮಯದಲ್ಲಿ ಪ್ರೀತಿಸಿದ ಯುವತಿಯ ಕೈಯಿಂದಲೇ ಸಜೀವ ದಹನವಾದಾತ ಕಿರಣ್. ವಯಸ್ಸು 27. ರಾಜಾಜಿನಗರದ ವಿಐ ಕಂಪನಿಯ ಸ್ಟೋರ್ ಒಂದರಲ್ಲಿ ಕೆಲಸ ಮಾಡ್ತಿದ್ದ. ಅದೇ ಸ್ಟೋರ್ ನಲ್ಲಿ ಕೆಲಸ ಮಾಡ್ತಿದ್ದ ಯುವತಿ ಪ್ರೇಮಾ ಎಂಬಾಕೆ ಪರಿಚಯ ಆಗಿದ್ಲು. ಇಬ್ಬರ ಪರಿಚಯ ಸ್ನೇಹವಾದ ನಂತರ ಪ್ರೀತಿಗೆ ತಿರುಗಿತ್ತು.
ಕೆಲ ತಿಂಗಳಿಂದ ಇಬ್ಬರೂ ಕೂಡ ಚೆನ್ನಾಗಿಯೇ ಇದ್ರು. ಆದ್ರೆ ಕೆಲ ದಿನಗಳಿಂದ ಕಿರಣ್ ಕೆಲಸದ ಒತ್ತಡವೋ ಏನ್ ಟೆನ್ಷನ್ನೋ ಯುವತಿಗೆ ಅಷ್ಟು ಟೈಮ್ ಕೊಡ್ತಿರಲಿಲ್ಲ. ಸರಿಯಾಗಿ ಟೈಮ್ ಕೊಡ್ತಿಲ್ಲ ಅವಾಯ್ಡ್ ಮಾಡ್ತಿದ್ದಾನೆ ಅಂತ ಕೋಪಗೊಂಡಿದ್ದ ಯುವತಿ ಕಿರಣ್ ನ ಕೊಲೆ ಮಾಡ್ಲೇ ಬೇಕು ಅಂತಾ ಡಿಸೈಡ್ ಆಗಿದ್ಲು ಅನ್ಸುತ್ತೆ. ಮನೇಲಿ ಯಾರಿಲ್ಲಾ ಬಾ ಅಂತಾ ಕಿರಣನನ್ನ ಮನೆಗೆ ಕರೆಸಿಕೊಂಡಿದ್ದಾಳೆ.

ವೆಸ್ಟರ್ನ್ ಸ್ಟೈಲ್‌ನಲ್ಲಿ ಪ್ರಪೋಸ್ ಮಾಡ್ತೀನಿ ಬಟ್ಟೆ ಬಿಚ್ಚು ಅಂದಿದ್ಲು. ಆಯ್ತು ಅಂತಾ ಕಿರಣ ಬಟ್ಟೆ ಬಿಚ್ಚಿದ್ದಾನೆ. ನಂತರ ಕೈಕಾಲುಗಳಿಗೆ ಹಗ್ಗ ಕಟ್ಟಿದ್ದಾಳೆ. ಕೊಂಚ ಬಿಗಿಯಾಗಿಯೇ ಬಿಗಿದಿದ್ದಕ್ಕೆ ಯಾಕಿಷ್ಟು ಟೈಟ್ ಕಟ್ತೀಯ ಅಂತಾ ಕೇಳಿದ್ದಾನೆ. ಏನಿಲ್ಲ ಸುಮ್ನಿರು ಇದು ಫಾರಿನ್ ಸ್ಟೈಲ್ ನಿಂಗೆ ಗೊತ್ತಾಗಲ್ಲ ಅಂತ ಆ ಮಾಯಗಾತಿ ಹೇಳಿದ್ದಾಳೆ. ನಂತರ ಸೀಮೆ ಎಣ್ಣೆ ತೆಗೆದವಳೇ ನನ್ನ ಅವಾಯ್ಡ್ ಮಾಡ್ತೀಯಾ ಅಂತಾ ಸುರಿದು ಬೆಂಕಿ ಹಚ್ಚಿಬಿಟ್ಟಿದ್ದಾಳೆ.

ಕಿರಣ್‌ನ ಚೀರಾಟ ಕೇಳಿ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬರೋಷ್ಟರಲ್ಲಿ ಕಿರಣ್ ಸಜೀವ ದಹನ ಆಗಿದ್ದ. ಕಣ್ಣೆದುರೇ ಗೆಳೆಯನ ಜೀವ ಹೋಗ್ತಿದ್ರು ಯುವತಿ ಮಾತ್ರ ಏನೂ ಗೊತ್ತಿಲ್ಲದಂತೆ ನಿಂತಿದ್ಲು. ನಂತರ ಬೆಂಕಿ ನಂದಿಸಲಾಗಿತ್ತು. ಕ್ರೈಂ ಸೀನ್ ನೋಡಿದಾಗ ಯುವಕನ ಜೀವವೇ ಹೋಗಿದ್ರು ಯುವತಿಗೆ ಮಾತ್ರ ಒಂಚೂರು ಬೆಂಕಿ ಹತ್ತಿರಲಿಲ್ಲ. ಗಾಯವೂ ಆಗಿರಲಿಲ್ಲ. ಹೀಗಾಗಿ ಡೌಟ್ ಬಂದು ಆಕೆಯನ್ನ ಪೊಲೀಸ್ರು ವಶಪಡೆದು ವಿಚಾರಣೆ ಮಾಡಿದಾಗ ಅಸಲಿ ಸತ್ಯ ಬಯಲಾಗಿದೆ. ಸದ್ಯ ಆರೋಪಿತೆಯನ್ನ ಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗ್ತಿದೆ.



