ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Silicon City) ಪಾದಚಾರಿಗಳು ಸಾವನ್ನಪ್ಪಿರುವ ಅಂಕಿಅಂಶಗಳನ್ನು ಗಮನಿಸಿದಾಗ ತೀವ್ರ ಆತಂಕ ಹುಟ್ಟಿಸುವಂತಿದೆ. ಕೇವಲ ಆರೇ ತಿಂಗಳಲ್ಲಿ 136 ಪಾದಚಾರಿಗಳು ಬಲಿಯಾಗಿದ್ದು, 664 ಮಂದಿ ಗಾಯಗೊಂಡಿದ್ದಾರೆ.
ರಸ್ತೆ ದಾಟಲು ಹೋಗಿ ಅಥವಾ ಸುಗಮ ಮಾರ್ಗಗಳಿಲ್ಲದೇ ಪ್ರಾಣ ಕಳೆದುಕೊಳ್ಳುತ್ತಿರುವ ಪಾದಚಾರಿಗಳ (Pedestrian) ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ಬೆಳಕಿಗೆ ಬಂದಿದೆ. ಕಳೆದ ಕೇವಲ ಆರು ತಿಂಗಳಲ್ಲೇ ಅಂದರೆ ಜೂನ್ ಅಂತ್ಯದವರೆಗೆ ಬರೋಬ್ಬರಿ 136 ಜನ ಪಾದಚಾರಿಗಳು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಜೊತೆಗೆ 664 ಜನರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಹಿಟ್ & ರನ್‌ಗೆ 28 ವರ್ಷದ ಯುವಕ ಬಲಿ; ಬೈಕ್‌ಗೆ ಡಿಕ್ಕಿ ಹೊಡೆದು ಚಾಲಕ ಎಸ್ಕೇಪ್
ಇತ್ತೀಚೆಗಷ್ಟೇ ಸರ್ಕಾರವು ನಗರದಲ್ಲಿ ಸುಗಮ ಪಾದಾಚಾರಿ ಮಾರ್ಗ ಯೋಜನೆಯನ್ನು ಹಮ್ಮಿಕೊಂಡ ಬೆನ್ನಲ್ಲೇ ಈ ಅಂಕಿ-ಅಂಶಗಳು ಬಿಡುಗಡೆಯಾಗಿವೆ.
ಕಳೆದ 4 ವರ್ಷಗಳಲ್ಲಿ:
2023: 292 ಸಾವು
2024: 246 ಸಾವು
2025: 257 ಸಾವು
2026 (ಜೂನ್ ಅಂತ್ಯದವರೆಗೆ): 136 ಸಾವು. ಇದನ್ನೂ ಓದಿ: ವಾಟ್ಸಪ್ ಹೊಸ ವೈಶಿಷ್ಟ್ಯದ ಬಗ್ಗೆ ಕೇಂದ್ರ ಕಳವಳ – ಪ್ರತಿಕ್ರಿಯೆ ಸಲ್ಲಿಸಲು ಮೆಟಾಗೆ ಮತ್ತೆ 3 ದಿನ ಕಾಲಾವಕಾಶ
