ಬೆಂಗಳೂರು: ನಗರದಲ್ಲಿ ಐಎಎಸ್ ಅಧಿಕಾರಿಯೊಬ್ಬರು (IAS Officer) ನಾಪತ್ತೆಯಾಗಿರುವ ಘಟನೆ ನಡೆದಿದೆ. ಅಧಿಕಾರಿ ಪತ್ತೆಗೆ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಐಎಎಸ್ ಅಧಿಕಾರಿ ಇದ್ದಕ್ಕಿದ್ದಂತೆ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಆ ಅಧಿಕಾರಿ ಯಾಕಾಗಿ ನಾಪತ್ತೆ ಆಗಿದ್ದಾರೆ? ನಾಪತ್ತೆ ಆಗಲು ಕಾರಣ ಏನು ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ – ಸಾವಿನ ಸುತ್ತ ಅನುಮಾನದ ಹುತ್ತ
ಬೆಂಗಳೂರಿನ ಏರ್‌ಪೋರ್ಟ್ನಲ್ಲಿ ಅಧಿಕಾರಿಯ ಮೊಬೈಲ್ ಸ್ವಿಚ್‌ಆಫ್ ಆಗಿದೆ. ಅಧಿಕಾರಿಯ ಹುಡುಕಾಟಕ್ಕೆ ಹಿರಿಯ ಐಎಎಸ್ ಅಧಿಕಾರಿ ಮನವಿ ಸಲ್ಲಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್‌ಗೆ ಮನವಿ ಮಾಡಲಾಗಿದೆ.
ಮನವಿ ಮೇರೆಗೆ ಪೊಲೀಸರು ನಾಪತ್ತೆಯಾದ ಅಧಿಕಾರಿ ಬೆನ್ನತ್ತಿದ್ದಾರೆ. ಏರ್‌ಪೋರ್ಟ್ ತನಕ ಟ್ರ‍್ಯಾಕ್ ಮಾಡಿದ್ದಾರೆ. ಏರ್‌ಪೋರ್ಟ್ನಲ್ಲಿ ಮೊಬೈಲ್ ಸ್ವಿಚ್‌ಆಫ್ ಮಾಡಿರುವ ಅಧಿಕಾರಿ ದೆಹಲಿ ಕಡೆ ಸಂಚಾರ ಬೆಳೆಸಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ತಿರುಪತಿಗೆ ಬರುವ ಭಕ್ತರ ರಕ್ಷಣೆಗೆ ರೋಬೋಟಿಕ್ ನಾಯಿ
ಕುಟುಂಬದ ಸಂಪರ್ಕಕ್ಕೂ ಅಧಿಕಾರಿ ಸಿಕ್ಕಿಲ್ಲ. ಈ ಹಿಂದೆ ಕೆಪಿಎಸ್‌ಸಿಯಲ್ಲಿ ಕೆಲಸ ಮಾಡಿದ್ದರು. ಇಡಿ ದಾಳಿಯ ಬಳಿಕ ಅಧಿಕಾರಿ ನಾಪತ್ತೆ ಹಿನ್ನೆಲೆಯಲ್ಲಿ ಅನುಮಾನ ವ್ಯಕ್ತವಾಗಿದೆ.

