ಸಾಮಾನ್ಯವಾಗಿ ಪ್ರತಿ ಹಬ್ಬದಲ್ಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ಜೋಡಿ, ಈ ಬಾರಿ ವರಮಹಾಲಕ್ಷ್ಮಿ ಹಬ್ಬವನ್ನು ತುಸು ಭಿನ್ನವಾಗಿ ಆಚರಿಸಿದೆ.
ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಬ್ಯುಸಿಯಾಗಿರುವುದರಿಂದ, ಹಬ್ಬದ ಸಂಭ್ರಮದಲ್ಲಿ ನೇರವಾಗಿ ಭಾಗವಹಿಸಲು ಸಾಧ್ಯವಾಗಿಲ್ಲ. ಆದರೆ, ಬಿಡುವಿಲ್ಲದ ಸಿನಿಮಾದ ಕೆಲಸಗಳ ನಡುವೆಯೂ ಯಶ್ ಅವರು ಹಬ್ಬದ ಸಂಭ್ರಮವನ್ನು ಮಿಸ್ ಮಾಡಿಕೊಂಡಿಲ್ಲ. ಲಕ್ಷ್ಮಿ ಪೂಜೆಯ ವಿಶೇಷ ಸಮಯದಲ್ಲಿ ವಿಡಿಯೋ ಕಾಲ್ ಮೂಲಕ ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳ ಜೊತೆ ಮಾತನಾಡುವ ಮೂಲಕ ಸಂಭ್ರಮದಲ್ಲಿ ವರ್ಚುವಲ್ ಆಗಿ ಸಾಥ್ ನೀಡಿದ್ದಾರೆ.
ಪತಿ ಯಶ್ ಅವರ ಅನುಪಸ್ಥಿತಿಯಲ್ಲಿ ನಟಿ ರಾಧಿಕಾ ಪಂಡಿತ್ ಅವರು ಮಕ್ಕಳೊಂದಿಗೆ ಹಸನ್ಮುಖಿಯಾಗಿ ವರಮಹಾಲಕ್ಷ್ಮಿ ಪೂಜೆಯನ್ನು ನೆರವೇರಿಸಿದ್ದಾರೆ. ಈ ಸುಂದರ ಕ್ಷಣಗಳ ಹಾಗೂ ವಿಡಿಯೋ ಕಾಲ್ ಸಂಭಾಷಣೆಯ ಅಪರೂಪದ ಫೋಟೋಗಳನ್ನು ರಾಧಿಕಾ ಪಂಡಿತ್ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ವರಮಹಾಲಕ್ಷ್ಮಿ ಹಬ್ಬದ ಶುಭ ಕೋರಿದ್ದಾರೆ. ಸದ್ಯ ಈ ಮುದ್ದಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

