ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA) ಮರ್ಯಾದೆ ಮತ್ತೆ ಬೀದಿಗೆ ಬಂದಿದೆ. ಫುಟ್ಪಾತ್ ರಿಪೇರಿ ಮಾಡುವಂತೆ ಜಿಬಿಎಗೆ ಪದೇ ಪದೇ ಮನವಿ ಮಾಡಿ ಸೋತು ಹೋದ ಉದ್ಯಮಿಯೊಬ್ಬರು ತಾವೇ ಸ್ವಂತ ದುಡ್ಡಿನಲ್ಲಿ ರಿಪೇರಿ ಮಾಡಿಸಿದ್ದಾರೆ.
ಭಾರತ್ ಅಗ್ರಿ ಸಂಸ್ಥೆಯ ಸಿಇಓ ಸಿದ್ಧಾರ್ಥ್ ಅವರ ಕೋರಮಂಗಲದ ಮನೆಯ ಮುಂದೆ ಹಲವು ವರ್ಷಗಳಿಂದ ಫುಟ್ಪಾತ್(Footpath) ಕಿತ್ತು ಹೋಗಿತ್ತು. ಈ ಸಮಸ್ಯೆಯನ್ನು ಬಗೆ ಹರಿಸುವಂತೆ ಬಿಬಿಎಂಪಿ, ಜಿಬಿಎ ದೂರು ನೀಡಿದ್ದರು. ಬಳಿಕ ವಾಟ್ಸಪ್ ಸಂದೇಶ, ಹೆಲ್ಪ್ಲೈನ್ಗೆ ಕರೆ ಮಾಡಿದ್ದಾರೆ. ಸಾಕಷ್ಟು ಬಾರಿ ದೂರು ನೀಡಿದರೂ ಜಿಬಿಎ ಕಡೆಯಿಂದ ಯಾವುದೇ ಸ್ಪಂದನೆ ಬರಲಿಲ್ಲ. ಇದನ್ನೂ ಓದಿ: ಅಧಿಕಾರ ಅನ್ನೋದು ವಿಷವಿದ್ದಂತೆ – ಮತ್ತೆ ಸ್ವಪಕ್ಷೀಯರ ವಿರುದ್ಧವೇ ಗುಡುಗಿದ ರಾಜಣ್ಣ
The footpath near my society at Koramangala has been broken since years!
I complained to BBMP, sent email to GBA, raised ticket and chatted with their WA helpline but got no response.
Finally, decided to fix it myself.
It costed me Rs. 2700 including labor charges and the… pic.twitter.com/Hl8RNeUZsu
— Siddharth Dialani (@siddharth_iitm) September 14, 2026
ದೂರು ನೀಡಿ ಸೋತು ಹೋದ ಸಿದ್ಧಾರ್ಥ್ ಅವರು ಕೊನೆಗೆ ತಮ್ಮ ಕೈಯಿಂದಲೇ 2,700 ರೂ. ಖರ್ಚು ಮಾಡಿ ರಿಪೇರಿ ಮಾಡಿಸಿದ್ದಾರೆ. ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸಿದ್ಧಾರ್ಥ್ ರಿಪೇರಿ ಬಳಿಕ ಬಳಿಕ ವಯಸ್ಸಾದವರಿಗೆ, ವೀಲ್ ಚೇರ್ನಲ್ಲಿ ಸಂಚರಿಸುವವರಿಗೆ ಸಹಾಯವಾಗುತ್ತಿದೆ ಎಂದು ಬರೆದಿದ್ದಾರೆ.
ಸಿದ್ಧಾರ್ಥ್ ಅವರ ಪೋಸ್ಟ್ಗೆ ಬೆಂಗಳೂರಿಗರಿಂದ ಭಾರೀ ಸ್ಪಂದನೆ ವ್ಯಕ್ತವಾಗುತ್ತಿದೆ.

