ಬೆಳಗಾವಿ: ಮನೆ ಹಾಗೂ ಕಚೇರಿಯಲ್ಲಿ ಗಣೇಶನ ಕೂರಿಸಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಗಣೇಶನಿಗೆ ಪೂಜೆ ಸಲ್ಲಿಸಿ ಡಿಸಿ ಸೌಹಾರ್ದ ಸಂದೇಶ ಸಾರಿದ್ದಾರೆ. ಬೆಳಗಾವಿ ಚೆನ್ನಮ್ಮ ವೃತ್ತದ ಗಣೇಶ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.
ಬಳಿಕ ಗಣೇಶ ಮೂರ್ತಿ ಹೊತ್ತು ಮೆರವಣಿಗೆಯಲ್ಲಿ ಡಿಸಿ ಮೊಹಮ್ಮದ್ ರೋಷನ್ ಭಾಗಿಯಾದರು. ಪರಿಸರ ಸ್ನೇಹಿ ಗಣೇಶನಿಗೆ ಸಿಬ್ಬಂದಿಯಿಂದ ಭಕ್ತಿ ನಮನ ಸಲ್ಲಿಸಿದರು.
ಆರತಿ ಬೆಳಗಿ ವಿಘ್ನ ವಿನಾಶಕನನ್ನು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಬರಮಾಡಿಕೊಂಡರು. ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿವರೆಗೆ ಗಣೇಶನನ್ನು ಹೊತ್ತು ಮೆರವಣಿಗೆಯಲ್ಲಿ ಡಿಸಿ ಕೂಡ ಸಾಗಿದರು.

