ನವದೆಹಲಿ: ನಟ ಸುಶಾಂತ್ ಸಿಂಗ್ ರಾಜಪೂತ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ (Disha Salian) ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್ಐಆರ್ ದಾಖಲಿಸಿದೆ. ಬಾಂಬೆ ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ CBI ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ. ಎಫ್ಐಆರ್ನಲ್ಲಿ ಆದಿತ್ಯ ಠಾಕ್ರೆ ಉಲ್ಲೇಖವಾಗಿದ್ದು, ಹೊಸ ಸಂಚಲನ ಸೃಷ್ಠಿಯಾಗಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ (Sushant Singh Rajput) ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್ಐಆರ್ ದಾಖಲಿಸಿದೆ. ಬಾಂಬೆ ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಎಫ್ಐಆರ್ನಲ್ಲಿ ಆದಿತ್ಯ ಠಾಕ್ರೆ (Aaditya Thackeray) ಉಲ್ಲೇಖವಾಗಿದೆ.
ಎರಡು ದಿನಗಳ ಹಿಂದೆ ದಿಶಾ ಸಾಲಿಯಾನ್ ಅವರ ತಂದೆ ಸತೀಶ್ ಸಾಲಿಯಾನ್ ಅವರು ಸಿಬಿಐ ಮುಂದೆ ಹೇಳಿಕೆ ದಾಖಲಿಸಿದ್ದರು. ತಮ್ಮ ಹೇಳಿಕೆಯಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಸೇರಿದಂತೆ ಹಲವು ಮಂದಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಆರೋಪಿಸಿದ್ದರು. ಇದನ್ನೂ ಓದಿ: ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವು ಕೇಸ್ ಸಿಬಿಐ ತನಿಖೆಗೆ: ಬಾಂಬೆ ಹೈಕೋರ್ಟ್ ಆದೇಶ
ಅಲ್ಲದೇ ಅಪರಾಧ ಸಂಚು, ಆತ್ಮಹತ್ಯೆ ಎಂಬ ತಪ್ಪು ನಿರೂಪಣೆಯನ್ನು ಸೃಷ್ಟಿಸಿ ಪ್ರಚಾರ ಮಾಡುವುದು ಹಾಗೂ ಸಾಕ್ಷ್ಯಗಳನ್ನು ನಾಶಪಡಿಸುವುದು ಅಥವಾ ತಿರುಚಿರುವ ಆರೋಪಗಳ ಕುರಿತು ಹಲವರ ಪಾತ್ರವನ್ನು ತನಿಖೆ ಮಾಡಬೇಕಿದೆ ಎಂದು ಸತೀಶ್ ಸಾಲಿಯಾನ್ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದರು.
ಸತೀಶ್ ಸಾಲಿಯಾನ್ ಅವರ ಹೇಳಿಕೆಯಲ್ಲಿ ಆದಿತ್ಯ ಠಾಕ್ರೆ, ರೋಹನ್ ರಾಯ್, ಡಿನೋ ಮೊರಿಯಾ, ಸೂರಜ್ ಪಂಚೋಲಿ, ಆದಿತ್ಯ ಠಾಕ್ರೆ ಅವರ ಭದ್ರತಾ ಸಿಬ್ಬಂದಿ, ರಿಯಾ ಚಕ್ರವರ್ತಿ, ಶೋವಿಕ್ ಚಕ್ರವರ್ತಿ, ಸಚಿನ್ ವಾಜೆ, ಪರಮ್ ಬೀರ್ ಸಿಂಗ್, ಡಿಸಿಪಿ ವಿಶಾಲ್ ಠಾಕೂರ್, ಉದ್ಧವ್ ಠಾಕ್ರೆ, ಅನಿಲ್ ದೇಶಮುಖ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಉಲ್ಲೇಖಿಸಲಾಗಿತ್ತು. ಮಾಲ್ವಾಣಿ ಪೊಲೀಸ್ ಠಾಣೆಯ ಅಧಿಕಾರಿಗಳು, ಮರಣೋತ್ತರ ಪರೀಕ್ಷೆಯಲ್ಲಿ ವಿಳಂಬ ಮಾಡಿದ್ದಾರೆ ಎನ್ನಲಾದ ವೈದ್ಯರು ಮತ್ತು ಸಿಬ್ಬಂದಿ, ಕಲಿನಾದ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ, ರೀಜೆಂಟ್ ಗ್ಯಾಲಕ್ಸಿ ಕಟ್ಟಡದ ಭದ್ರತಾ ಸಿಬ್ಬಂದಿ ಸೇರಿದಂತೆ ಇತರರ ಬಗ್ಗೆಯೂ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಹೊಡೆದೇ ಬಿಟ್ರು ಸೌಂದರ್ಯ… ಮಂಜನ ಮಿತಿಮೀರಿದ ಆಕ್ರೋಶ – ಬಿಗ್ಬಾಸ್ ರೂಲ್ಸ್ ಬ್ರೇಕ್
ಈ ಹೇಳಿಕೆಯನ್ನು ಆಧರಿಸಿ ಇಂದು ಎಫ್ಐಆರ್ ದಾಖಲಿಸಿರುವ ಸಿಬಿಐ ಆದಿತ್ಯ ಠಾಕ್ರೆ, ರೋಹನ್ ರಾಯ್, ಡಿನೋ ಮೊರಿಯಾ, ಸೂರಜ್ ಪಂಚೋಲಿ, ಆದಿತ್ಯ ಠಾಕ್ರೆ ಅವರ ಭದ್ರತಾ ಸಿಬ್ಬಂದಿ, ರಿಯಾ ಚಕ್ರವರ್ತಿ, ಶೋವಿಕ್ ಚಕ್ರವರ್ತಿ, ಸಚಿನ್ ವಾಜೆ, ಪರಮ್ ಬೀರ್ ಸಿಂಗ್, ಡಿಸಿಪಿ ವಿಶಾಲ್ ಠಾಕೂರ್, ಉದ್ಧವ್ ಠಾಕ್ರೆ, ಅನಿಲ್ ದೇಶಮುಖ್ ಸೇರಿದಂತೆ ಹಲವರ ಹೆಸರು ಉಲ್ಲೇಖಿಸಿದ್ದು, ತನಿಖೆಯನ್ನು ಹೊಸದಾಗಿ ಅಧಿಕಾರಿಗಳು ಆರಂಭಿಸಲಿದ್ದಾರೆ.

