Connect with us

Karnataka

ಕಿತ್ತಾಡಿ 20 ಅಡಿ ಆಳದ ಬಾವಿಗೆ ಬಿದ್ದ ಕರಡಿ – ಅರಣ್ಯಾಧಿಕಾರಿಗಳಿಂದ ರಕ್ಷಣೆ

Published

on

ರಾಮನಗರ: ಆಹಾರ ಅರಸಿ ಬಂದ ಕರಡಿಯೊಂದು ನೀರಿಲ್ಲದ ಬಾವಿಗೆ ಬಿದ್ದು ಸತತ ಏಳು ಗಂಟೆಗಳ ಕಾಲ ನರಳಾಡಿದ ಘಟನೆ ರಾಮನಗರ ತಾಲೂಕಿನ ಯರೇಹಳ್ಳಿ ಗ್ರಾಮದಲ್ಲಿ ನಡೆದಿದೆ.

ಜಮೀನಿನಲ್ಲಿ ಬೆಳೆದಿದ್ದ ಸಪೋಟ ಹಾಗೂ ಮುಸುಕಿನ ಜೋಳವನ್ನು ತಿನ್ನಲು ಶುಕ್ರವಾರ ಎರಡು ಕರಡಿಗಳು ಬಂದಿದ್ದವು. ಈ ವೇಳೆ ಕರಡಿಗಳು ಕಿತ್ತಾಡಿಕೊಂಡಿದ್ದನ್ನು ಜಮೀನಿನ ಮಾಲೀಕ ಅಂಗಡಿ ಕುಮಾರ್ ನೋಡಿದ್ದಾರೆ.

ಇಂದು ಬೆಳಗ್ಗೆ ಕುಮಾರ್ ತೋಟಕ್ಕೆ ಹೋದಾಗ ನೀರಿಲ್ಲದ 20 ಅಡಿ ಆಳದ ಬಾವಿಯ ಒಳಗಡೆ ಕಿರುಚಾಡುತ್ತಿದ್ದ ಒಂದು ಕರಡಿಯನ್ನು ಗಮನಿಸಿದ್ದಾರೆ. ಈ ಕುರಿತು ತಕ್ಷಣವೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಮಧ್ಯಾಹ್ನ 1 ಗಂಟೆಯ ವೇಳೆಗೆ ಬನ್ನೇರುಘಟ್ಟ ಜೈವಿಕ ಉದ್ಯಾನದ ವೈದ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಕರಡಿಗೆ ಅರವಳಿಕೆ ಚುಚ್ಚುಮದ್ದು ನೀಡಿ ರಕ್ಷಿಸಿದ್ದಾರೆ. ಕರಡಿ 20 ಅಡಿಯಷ್ಟು ಆಳದ ಬಾವಿಗೆ ಬಿದ್ದಿದ್ದರಿಂದ ಗಾಯಗಳಾಗಿವೆ. ಚಿಕಿತ್ಸೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ.

Click to comment

Leave a Reply

Your email address will not be published. Required fields are marked *