ಮುಂಬೈ: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿ ಮುಕ್ತಾಯಗೊಂಡು ತಿಂಗಳು ಕಳೆಯುವ ಮುನ್ನವೇ 20ನೇ ಆವೃತ್ತಿಯ ವೇಳಾಪಟ್ಟಿಯನ್ನು ಬಿಸಿಸಿಐ ಬಹಿರಂಗಪಡಿಸಿದೆ. 2027ನೇ ಐಪಿಎಲ್ ಟೂರ್ನಿ ಮಾರ್ಚ್ 10 ರಿಂದ ಆರಂಭಗೊಂಡು ಮೇ 15ರ ಒಳಗೆ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ (Devajit Saikia) ಹೇಳಿದ್ದಾರೆ.
VIDEO | BCCI secretary Devajit Saikia says IPL could start as early as March 10 and finish by May 15 from next season to avoid adverse weather during the business end of the tournament. No plans, however, to expand the IPL beyond its current 74 matches due to international… pic.twitter.com/zxjHJoGWE4
— Press Trust of India (@PTI_News) June 18, 2026
ಅಲ್ಲದೇ 74 ಪಂದ್ಯಗಳಿಗೆ (IPL Match) ಮೀರಿ ಹೆಚ್ಚುವರಿ ಪಂದ್ಯಗಳನ್ನ ಆಯೋಜಿಸುವ ಯಾವುದೇ ಯೋಜನೆಗಳೂ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಿಚಾಯಿಸಿದ ಲಂಕಾ ಆಟಗಾರನ ಮೇಲೆ ಮುಗಿಬಿದ್ದ ವೈಭವ್ – ಮೈದಾನದಲ್ಲೇ ತಳ್ಳಾಟ, ಹೈಡ್ರಾಮಾ!
2026 ರ ಐಪಿಎಲ್ (IPL 2026) ಟೂರ್ನಿಯು ಮಾರ್ಚ್ 29 ರಿಂದ ಶುರುವಾಗಿ ಮೇ 31 ಕ್ಕೆ ಕೊನೆಗೊಂಡಿತು. ಸಾಮಾನ್ಯವಾಗಿ ಟೂರ್ನಿ ಅಂತ್ಯಗೊಳ್ಳುವ ಸಮಯದಲ್ಲಿ ಅದ್ರಲ್ಲೂ ಮೇ 15 ರ ನಂತರ ಹವಾಮಾನ ವೈಪರಿತ್ಯ ಸಮಸ್ಯೆಗಳು ಉಂಟಾಗುತ್ತವೆ. ಕೆಲ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವುದರಿಂದ ಪಂದ್ಯಗಳು ಸ್ಥಗಿತಗೊಳ್ಳುತ್ತವೆ. ಮತ್ತೊಂದೆಡೆ ಬಿಸಿಲಿನ ವಾತಾವರಣ ಇರುತ್ತದೆ. ಇದು ಆಟಗಾರರಿಗೆ ಮಾತ್ರವಲ್ಲದೇ ಪ್ರೇಕ್ಷಕರಿಗೂ ಸಮಸ್ಯೆಯಾಗುತ್ತದೆ. ಆದ್ದರಿಂದ ಮುಂದಿನ ಆವೃತ್ತಿಯ ಟೂರ್ನಿಯನ್ನು ಶೀಘ್ರದಲ್ಲೇ ಮುಗಿಸುವ ಚಿಂತನೆ ಇದೆ ಎಂದು ಸೈಕಿಯಾ ಹೇಳಿದ್ದಾರೆ.
🚨 NO PLANS TO EXPAND THE IPL. 🚨
✍️ The BCCI secretary confirms there are no plans to expand the IPL from its current 74 matches structure due to international scheduling.
‼️ The IPL could start by 10th March and finish by 15th May to avoid adverse weather at the end. (PTI). pic.twitter.com/gT35egbsVh
— Mufaddal Vohra (@mufaddal_vohra) June 18, 2026
74 ಪಂದ್ಯಗಳಿಗೆ ಟೂರ್ನಿ ಸೀಮಿತ
ಸದ್ಯ ಬಿಸಿಸಿಐ (BCCI) ಮಾರ್ಚ್ 10 ರಿಂದ ಮೇ 15 ರ ಒಳಗೆ 74 ಪಂದ್ಯಗಳಿಗೆ ಟೂರ್ನಿ ಮುಕ್ತಾಯಗೊಳಿಸಲು ಚಿಂತನೆ ನಡೆಸಿದೆ. ಏಕೆಂದ್ರೆ ಹೆಚ್ಚುವರಿ ಪಂದ್ಯಗಳನ್ನ ಆಯೋಜಿಸುವುದರಿಂದ 2 ತಿಂಗಳ ಸಮಯ ಬೇಕಾಗುತ್ತದೆ. ಇತರ ದೇಶಗಳು ಈ ಅವಧಿಯಲ್ಲಿ ದ್ವಿಪಕ್ಷೀಯ ಪಂದ್ಯಗಳನ್ನ ಆಡಬೇಕಾಗಿರುವುದರಿಂದ ಪಂದ್ಯಗಳನ್ನು ಇದ್ದಷ್ಟಕ್ಕೆ ಸೀಮಿತಗೊಳಿಸಲು ನಿರ್ಣಯಿಸಲಾಗಿದೆ. 94 ಪಂದ್ಯಗಳಿಗೆ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸದ್ಯ ನಮ್ಮ ಮುಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಅಕ್ಟೋಬರ್‌ನಲ್ಲೇ ಏಕದಿನ ವಿಶ್ವಕಪ್ ಟೂರ್ನಿ
2027 ರ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 4 ರಿಂದ ನವೆಂಬರ್ 21 ರ ಅವಧಿಯಲ್ಲಿ ನಡೆಯುವ ಸಾಧ್ಯತೆಯಿದೆ. ಈ ಟೂರ್ನಿಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯ ವಹಿಸಲಿವೆ. ಇದನ್ನೂ ಓದಿ: Photo Viral | ಫುಟ್‌ಬಾಲ್ ಪಂದ್ಯ ನೋಡಲು ಒಟ್ಟಿಗೆ ಬಂದ ಮಾಜಿ ನೀಲಿ ತಾರೆ ಮಿಯಾ ಖಲೀಫಾ – ಲಾನಾ

ಒಟ್ಟು 54 ಪಂದ್ಯಗಳಲ್ಲಿ ಆಫ್ರಿಕಾ 41 ಪಂದ್ಯ, ಜಿಂಬಾಬ್ವೆ 8 ರಿಂದ 10 ಪಂದ್ಯ ಹಾಗೂ ನಮೀಬಿಯಾ 3 ಪಂದ್ಯಗಳಿಗೆ ಆತಿಥ್ಯ ವಹಿಸುವ ಸಾಧ್ಯತೆಗಳಿವೆ. ದಕ್ಷಿಣ ಆಫ್ರಿಕಾದ 8 ಕ್ರೀಡಾಂಗಣಗಳು (ಬ್ಲೋಮ್‌ಫಾಂಟೈನ್, ಕೇಪ್ ಟೌನ್, ಸೆಂಚುರಿಯನ್, ಡರ್ಬನ್, ಪೂರ್ವ ಲಂಡನ್, ಗ್ಕೆಬೆರ್ಹಾ, ಜೋಹಾನ್ಸ್‌ಬರ್ಗ್ ಮತ್ತು ಪಾರ್ಲ್ ಕ್ರೀಡಾಂಗಣಗಳು) ಹೆಚ್ಚಿನ ಪಂದ್ಯಗಳನ್ನ ಆಯೋಜಿಸುವ ನಿರೀಕ್ಷೆಯಿದೆ. ಹೀಗಾಗಿ ಮುಂಬರುವ 20ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಮೇ 15 ರ ಒಳಗೆ ಮುಗಿಸುವ ಚಿಂತನೆ ಬಿಸಿಸಿಐ ಮಾಡಿದೆ.
