ಬಾಗಲಕೋಟೆ: ಅಲ್ಪಸಂಖ್ಯಾತರ ಹೆಸರಿನಲ್ಲಿ ಹಿಂದೂಗಳ ಮೇಲೆ ವ್ಯವಸ್ಥಿತವಾಗಿ ಅಟ್ಯಾಕ್ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಪೊಲೀಸ್ ಇಲಾಖೆ ಬರೀ ಹಿಂದುಗಳನ್ನಷ್ಟೇ ಹಿಡಿಯೋದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.
ಬಾಗಲಕೋಟೆಯ ಕೆರೂರು ಘರ್ಷಣೆ ಗಾಯಾಳುಗಳ ಆರೋಗ್ಯ ವಿಚಾರಿಸಿದ ಅವರು, ಅಲ್ಪಸಂಖ್ಯಾತರು ಇಂತಹ ಕೃತ್ಯ ಮಾಡುತ್ತಿರುವುದು ಬಹಳ ಆತಂಕಕಾರಿಯಾಗಿದ್ದಾರೆ. ಅವರನ್ನು ಹೀಗೆ ಬಿಟ್ಟರೆ ದೇಶದಲ್ಲಿ ಹಿಂದೂಗಳು ನೆಮ್ಮದಿಯಿಂದ ಜೀವನ ಮಾಡಲು ಆಗುವುದಿಲ್ಲ. ಉತ್ತರಪ್ರದೇಶದಲ್ಲಿ ಹೇಗೆ ಆರೋಪಿತರ ಎನ್‌ಕೌಂಟರ್ ಮಾಡುತ್ತಿದ್ದಾರೋ, ಹೇಗೆ ಮನೆಗಳಿಗೆ ಬುಲ್ಡೋಜರ್ ಹಚ್ಚುತ್ತಿದ್ದಾರೊ ಹಾಗೆ ಕರ್ನಾಟಕದಲ್ಲೂ ಪ್ರಾರಂಭ ಮಾಡಬೇಕು. ನಾನು ಕರ್ನಾಟಕ ಗೃಹ ಮಂತ್ರಿಗೆ ಆಗ್ರಹ ಮಾಡುತ್ತೇನೆ. ನಿಮ್ಮ ಕಠಿಣ ಕ್ರಮ ಅನ್ನುವ ಶಬ್ದ ಬಿಟ್ಟು ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
Advertisement
Advertisement
ಈ ಘಟನೆಯಲ್ಲಿ ಹಿಂದೂಗಳ ಅಪರಾಧಿಗಳೇ ಅಲ್ಲ. ಹೊಡೆದಿರುವವರು ಮುಸ್ಲಿಮರು. ಇದರಿಂದ ಅವರನ್ನು ಅರೆಸ್ಟ್ ಮಾಡಬೇಕು. ಆದರೆ 11 ಜನ ಹಿಂದೂಗಳನ್ನು ಅರೆಸ್ಟ್ ಮಾಡಿದ್ದಾರೆ ಎಂದು ಗುಡುಗಿದ ಅವರು, ಪೊಲೀಸ್ ಇಲಾಖೆ ಕಾರ್ಯವೈಖರಿ ಬದಲಾವಣೆ ಮಾಡಬೇಕು. ಘಟನೆ ನೋಡಿಕೊಂಡು ಮೂಕಪ್ರೇಕ್ಷಕರಾಗಿ ನಿಂತರೆ ಏನು? ಪೊಲೀಸರ ಕೈಯಲ್ಲಿ ಲಾಠಿ ಬಂದೂಕು ಯಾಕೆ ಕೊಟ್ಟಿದ್ದಾರೆ. ಆದರೂ ಹಲ್ಲೆಕೋರರಿಗೆ ಭಯ ಇಲ್ಲದಂಗಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
ಶಿವಮೊಗ್ಗ ಹರ್ಷ ಕೊಲೆ ಆರೋಪಿಗಳು ಜೈಲಲ್ಲಿದ್ದು ವೀಡಿಯೋ ಕಾಲ್ ಮಾಡಿ ಮಾತಾಡ್ತಾರೆ. ಕಠಿಣ ಕ್ರಮಕೈಗೊಳ್ಳಬೇಕು ಅನಿವಾರ್ಯವಾದರೆ ಉತ್ತರಪ್ರದೇಶ ಮಾದರಿ ಕೆಲಸ ಮಾಡಬೇಕು ಎಂದರು. ಇದನ್ನೂ ಓದಿ: BBMP ಯಮ ಸ್ವರೂಪಿ ಕಸದ ಲಾರಿಗೆ ಮತ್ತೊಂದು ಬಲಿ – ಅಪಘಾತದಲ್ಲಿ ಮಹಿಳೆ ಸಾವು
Advertisement
ಬಿಜೆಪಿಗೆ ವಲಸೆ ಹೋದವರನ್ನು ಸಿದ್ದರಾಮಯ್ಯ ವಾಪಸ್ ಕರೆಯುತ್ತಿದ್ದಾರೆ ಎಂಬದಕ್ಕೆ ಪ್ರತಿಕ್ರಿಯಿಸಿದ ಅವರು, ಯಾರು ಬಂದರು ಯಾರು ಹೋದರು ಮುಂದಿನ ಬಾರಿ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ. ನಮ್ಮ ಮುಂದಿನ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ನಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಶ್ರೀಲಂಕಾ ಪ್ರಧಾನಿ ಮನೆಗೆ ಬೆಂಕಿ ಇಟ್ಟ ಪ್ರತಿಭಟನಾಕಾರರು
ಸಂಪುಟ ಬದಲಾವಣೆ, ವಿಸ್ತರಣೆ ಏನು ಆಗೋದಿಲ್ಲ ಅಂತ ಹೇಳ್ತಿದ್ದೇವೆ. ದಯವಿಟ್ಟು ಇದ್ದವರು ಚೆನ್ನಾಗಿ ಮಾಡಿಕೊಂಡು ಹೋಗಿ ಎಂದು ಹೇಳಿದ್ದೇವೆ. ಇನ್ನು 8 ತಿಂಗಳು ಇದೆ. ಸಚಿವರಾಗಿ ಏನು ಮಾಡೋದು. ನನಗೆ ವಕ್ಫ್ ಮತ್ತು ಧಾರ್ಮಿಕ ದತ್ತಿ ಇಲಾಖೆ ಕೊಟ್ಟರೆ ಏನು ಮಾಡಲಿ, ಹೋಮ್ ಇಲಾಖೆ ಕೊಟ್ಟರೆ ಎನ್‌ಕೌಂಟರ್ ಮಾಡಿ ಬರೋಬ್ಬರಿ ಇಡುತ್ತೇನೆ ಎಂದು ಹೇಳಿದರು.