ರಾಯಚೂರು: ಚುನಾವಣಾ ರಾಯಭಾರಿಯಾಗಿ (Election icon) ರಾಯಚೂರು (Raichuru) ಜಿಲ್ಲೆಗೆ ಚಲನಚಿತ್ರ ನಿರ್ದೇಶಕ ಬಾಹುಬಲಿ (Bahubali) ಸಿನೆಮಾ ಖ್ಯಾತಿಯ ಎಸ್.ಎಸ್.ರಾಜಮೌಳಿ (S.S.Rajamouli)ನೇಮಕವಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ತಿಳಿಸಿದ್ದಾರೆ.
ಮತದಾನ ಜಾಗೃತಿ ಕುರಿತು ರಾಜಮೌಳಿ ಚುನಾವಣಾ ಸ್ವೀಪ್ (Election SVEEP) ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ವೀಡಿಯೋ ಕ್ಲಿಪ್‍ಗಳ ಮೂಲಕ ಜಾಗೃತಿ ಮೂಡಿಸುತ್ತಾರೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಇದನ್ನೂ ಓದಿ: Ind Vs Aus: ಆಸ್ಟ್ರೇಲಿಯಾದ ಪ್ರಧಾನಿ ಜೊತೆ ಮೋದಿ ಮ್ಯಾಚ್ ವೀಕ್ಷಣೆ
ರಾಜಮೌಳಿ ಮೂಲತಃ ರಾಯಚೂರಿನ ಮಾನ್ವಿ ತಾಲೂಕಿನ ಅಮರೇಶ್ವರ ಕ್ಯಾಂಪ್‍ನವರು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಕಳುಹಿಸಿದ ರಾಯಭಾರಿಗಳ ಪ್ರಸ್ತಾವನೆಗೆ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಸಮ್ಮತಿಸಿದ್ದಾರೆ.
ಈಗಾಗಲೇ ರಾಯಭಾರಿಗಳ ಆಯ್ಕೆ ಪಟ್ಟಿ ಬಿಡುಗಡೆಯಾಗಿದೆ. ಚುನಾವಣಾ ಸ್ವೀಪ್ ಚಟುವಟಿಕೆಗಳಲ್ಲಿ ನಿರ್ದೇಶಕ ರಾಜಮೌಳಿ ಭಾಗವಹಿಸಲು ಸಂಪರ್ಕಿಸಿರುವುದಾಗಿ ಜಿಲ್ಲಾಡಳಿತ ತಿಳಿಸಿದೆ. ಇದನ್ನೂ ಓದಿ: ಪೋಷಕರೇ ಎಚ್ಚರ- ಮಕ್ಕಳಲ್ಲಿ ಹೆಚ್ಚಾಗ್ತಿದೆ ಆಡಿನೋ ವೈರಸ್..!