Connect with us

Cinema

ಟಿವಿ ಟಿಆರ್‍ಪಿಯಲ್ಲೂ ಹೊಸ ದಾಖಲೆ ಬರೆದ ಬಾಹುಬಲಿ

Published

on

ಹೈದರಾಬಾದ್: ಭಾರತೀಯ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಬಾಹುಬಲಿ ಈಗ ಟಿವಿ ರೇಟಿಂಗ್‍ನಲ್ಲೂ ದಾಖಲೆ ಬರೆದಿದೆ.

ಭಾರತದ ಟಿವಿ ವಾಹಿನಿಗಳಲ್ಲಿ ರೇಟಿಂಗ್ ನೀಡುವ ಲ್ಲಿ ಬ್ರಾಡ್‍ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) 41 ವಾರದ ಟಿಆರ್‍ಪಿಯನ್ನು ಬಿಡುಗಡೆ ಮಾಡಿ ಈ ವಿಚಾರವನ್ನು ತಿಳಿಸಿದೆ.

ಅಕ್ಟೋಬರ್ 8 ರಂದು ಸೋನಿ ಮ್ಯಾಕ್ಸ್ ವಾಹಿನಿಯಲ್ಲಿ ಬಾಹುಬಲಿ ಹಿಂದಿ ಸಿನಿಮಾ ಪ್ರಸಾರವಾಗಿತ್ತು. ಈ ಸಿನಿಮಾಗೆ 26054 ಟಿಆರ್‍ಪಿ ಸಿಗುವ ಮೂಲಕ ದೇಶದ ಟಿವಿ ಇತಿಹಾಸದಲ್ಲೇ ಅತಿಹೆಚ್ಚು ರೇಟಿಂಗ್ ಪಡೆದ ಹಿಂದಿ ಸಿನಿಮಾ ಎಂದು ಬಾರ್ಕ್ ಹೇಳಿದೆ. ಈ ಹಿಂದೆ ಸ್ಟಾರ್ ಗೋಲ್ಡ್ ವಾಹಿನಿಯಲ್ಲಿ ಸಲ್ಮಾನ್ ಖಾನ್ ಅಭಿನಯದ ಟ್ಯೂಬ್ ಲೈಟ್ 5195 ಟಿಆರ್‍ಪಿ ಗಳಿಸಿತ್ತು.

ಹೆಚ್ಚು ಟಿಆರ್‍ಪಿ ಪಡೆದುಕೊಂಡು 5 ಹಿಂದಿ ಚಿತ್ರಗಳು: ಬಾಹುಬಲಿ(26054), ಟ್ಯೂಬ್‍ಲೈಟ್(5195), ಮೈ ಹೂನ್ ಸೂರ್ಯ ಸಿಂಗಂ 2(5030), ಸೂರ್ಯವಂಶ(4456), ಸನ್ ಆಫ್ ಸತ್ಯಮೂರ್ತಿ(4351) ಟಿಆರ್‍ಪಿ ಗಳಿಸಿತ್ತು.

ರಾಜಮೌಳಿ ನಿರ್ದೇಶನದ ಬಾಹಬಲಿ 2 2017ರ ಏಪ್ರಿಲ್ 28 ರಂದು ತೆಲುಗು, ತಮಿಳು, ಹಿಂದಿ, ಮಲೆಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿತ್ತು. ಪ್ರಭಾಸ್, ಅನುಷ್ಕಾ ಶೆಟ್ಟಿ, ರಾಣಾ ದಗ್ಗುಬಾಟಿ, ರಮ್ಯಕೃಷ್ಣ, ಸತ್ಯರಾಜ್ ಅಭಿನಯದ ಈ ಚಿತ್ರ 250 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದರೆ ಬಾಕ್ಸ್ ಆಫೀಸ್ ನಲ್ಲಿ 1725 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

ಇದನ್ನೂ ಓದಿ: ಬಾಹುಬಲಿ-2 ಚಿತ್ರದಿಂದ ಕರ್ನಾಟಕಕ್ಕೆ ಕೋಟಿ ಕೋಟಿ ಆದಾಯ

ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲಿ ಒಂದೇ ದಿನ 10 ದಾಖಲೆಗಳನ್ನು ಬರೆದ ಬಾಹುಬಲಿ-2: ಇಲ್ಲಿದೆ ಪೂರ್ಣ ಪಟ್ಟಿ

 

Click to comment

Leave a Reply

Your email address will not be published. Required fields are marked *