ಬೆಂಗಳೂರು: ಕರ್ನಾಟಕದಲ್ಲಿ ಬಾಹುಬಲಿ-2 ಚಿತ್ರ ಪ್ರದರ್ಶನದಿಂದ ಕೋಟ್ಯಾಂತರ ರೂಪಾಯಿ ಮನರಂಜನಾ ತೆರಿಗೆ ಸಂಗ್ರಹವಾಗಿದ್ದು, ವಾಣಿಜ್ಯ ತೆರಿಗೆ ಇಲಾಖೆ ಫುಲ್ ಖುಷ್ ಆಗಿದೆ.
Advertisement
ರಾಜ್ಯದಲ್ಲಿ ಬಾಹುಬಲಿ-2 ಪ್ರದರ್ಶನದಿಂದ 17 ಕೋಟಿ ರೂಪಾಯಿ ತೆರಿಗೆ ಬಂದಿದೆ. ಬೆಂಗಳೂರು ಒಂದರಲ್ಲೇ 13 ಕೋಟಿ 50 ಲಕ್ಷ ರೂಪಾಯಿ ತೆರಿಗೆ ಸಂಗ್ರಹವಾದ್ರೆ, ಬೆಂಗಳೂರೇತರ 3.50 ಕೋಟಿ ರೂಪಾಯಿ ತೆರಿಗೆ ಕಲೆಕ್ಷನ್ ಆಗಿದೆ. ಅಚ್ಚರಿ ಅಂದ್ರೆ ಬೆಂಗಳೂರಲ್ಲಿ ಚಿತ್ರ ಬಿಡುಗುಡೆಯಾದ ನಾಲ್ಕೇ ದಿನಕ್ಕೆ 7 ಕೋಟಿ 72 ಲಕ್ಷ ರೂಪಾಯಿ ಟ್ಯಾಕ್ಸ್ ಬಂದಿದೆ.
Advertisement
ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲಿ ಒಂದೇ ದಿನ 10 ದಾಖಲೆಗಳನ್ನು ಬರೆದ ಬಾಹುಬಲಿ-2: ಇಲ್ಲಿದೆ ಪೂರ್ಣ ಪಟ್ಟಿ
Advertisement
ಮಲ್ಟಿಪ್ಲೆಕ್ಸ್ ಶೋಗಳಿಂದ 5 ಕೋಟಿ 63 ಲಕ್ಷ ರೂ. ತೆರಿಗೆ ಸಂಗ್ರಹವಾದರೆ, ಥಿಯೇಟರ್‍ಗಳಿಂದ 2 ಕೋಟಿ 8 ಲಕ್ಷ ರೂಪಾಯಿ ಸಂಗ್ರವಾಗಿದೆ. `ಬಾಹುಬಲಿ-ದಿ ಬಿಗಿನಿಂಗ್’ ನಿಂದ 8 ಕೋಟಿ 94 ಲಕ್ಷ ರೂಪಾಯಿ ಸಂಗ್ರವಾಗಿದ್ರೆ, `ಬಾಹುಬಲಿ – ದಿ ಕನ್‍ಕ್ಲೂಷನ್’ ನಿಂದ ಬರೋಬ್ಬರಿ 17 ಕೋಟಿ ರೂಪಾಯಿ ತೆರಿಗೆ ಕಲೆಕ್ಟ್ ಆಗಿದೆ.
Advertisement
ಇದನ್ನೂ ಓದಿ: ಬಾಹುಬಲಿ ಪ್ರಭಾಸ್‍ಗೆ ವಧುಬೇಕಾಗಿದೆ!- ಈ ಅರ್ಹತೆ ನಿಮಗಿದ್ರೆ ನೀವು ಟ್ರೈ ಮಾಡಬಹುದು!