ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಕೇಸ್‌ – ಅಮಾನತು ಆದೇಶ ವಾಪಸ್ ಪಡೆದ ಸರ್ಕಾರ

1 Min Read

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಡಾ. ಕೆ.ರಾಮಚಂದ್ರ ರಾವ್ (K.Ramachandra Rao) ಅಮಾನತು ಆದೇಶವನ್ನ ರಾಜ್ಯ ಸರ್ಕಾರ ಹಿಂಪಡೆದಿದೆ.

ಐಜಿಪಿಯಾಗಿದ್ದಾಗ ಕಚೇರಿಯಲ್ಲೇ ಪೊಲೀಸ್ ಸಮವಸ್ತ್ರದಲ್ಲಿರುವಾಗಲೇ ಮಹಿಳೆಯರ ಜೊತೆ ರಾಸಲೀಲೆ ನಡೆಸಿದ ವಿಡಿಯೋ ವೈರಲ್ ಆಗಿ ರಾಜ್ಯ ಸರ್ಕಾರ ರಾಮಚಂದ್ರ ರಾವ್‌ರನ್ನ ಅಮಾನತು ಮಾಡಿತ್ತು. ಇದೀಗ ಅಮಾನತು ಆದೇಶವನ್ನ ವಾಪಸ್‌ ಪಡೆದಿದೆ. ಇದನ್ನೂ ಓದಿ: ಬಾಲಗರ್ಭಿಣಿಯರ ಸ್ಕ್ಯಾನಿಂಗ್ ಪ್ರಕರಣ – ಬಂಧಿತ ವೈದ್ಯರ ಪರ ಜೆಡಿಎಸ್ ಶಾಸಕ ಬ್ಯಾಟಿಂಗ್

ಡಿಜಿಪಿ ಪೊಲೀಸ್ ಮ್ಯಾನ್ಯುವಲ್ ಅಂತಾ ಹೊಸ ಹುದ್ದೆ ಸೃಷ್ಟಿಸಿ ನಿಯೋಜನೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇದೇ ತಿಂಗಳು 31 ರಂದು ಡಿಜಿಪಿ ರಾಮಚಂದ್ರ ರಾವ್ ಸೇವಾ ನಿವೃತ್ತಿ ಹೊಂದಲಿದ್ದಾರೆ. ಹೀಗಾಗಿ, ಅಮಾನತು ಆದೇಶವನ್ನ ವಾಪಸ್‌ ಪಡೆಯಲಾಗಿದೆ. ಈಗಾಗಲೇ ರಾಸಲೀಲೆ ಪ್ರಕರಣದಲ್ಲಿ ಸರ್ಕಾರಕ್ಕೆ ಪೊಲೀಸರು ತನಿಖಾ ವರದಿ ಸಲ್ಲಿಸಿದ್ದಾರೆ.

Share This Article