Connect with us

Cinema

ಪಾತ್ರಕ್ಕಾಗಿ ಅನುಷ್ಕಾ ತಯಾರಿ ಕೇಳಿದ್ರೆ ನಿಮಗೆ ನಿಜಕ್ಕೂ ಸಂತೋಷವಾಗುತ್ತೆ!

Published

on

ಮುಂಬೈ: ಟಾಲಿವುಡ್ ನ ಬಹುಬೇಡಿಕೆಯ ನಟಿ, 36 ವರ್ಷವಾದರೂ ಇನ್ನೂ ಯಂಗ್ ಅಂಡ್ ಎನರ್ಜಿಟಿಕ್ ಆಗಿರುವ ಅನುಷ್ಕಾ ಶೆಟ್ಟಿ ತಮ್ಮ ಹುಟ್ಟುಹಬ್ಬವನ್ನು ಮಂಗಳವಾರ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. `ಬಾಹುಬಲಿ 2′ ಸಿನಿಮಾದಲ್ಲಿ ರಾಣಿ ದೇವಸೇನಾ ಪಾತ್ರವನ್ನು ಮಾಡಿ ಭಾರತದಲ್ಲಿಯೇ ಪ್ರಸಿದ್ಧಿಯನ್ನು ಪಡೆದುಕೊಳ್ಳುವ ಮೂಲಕ ತಮ್ಮ ಅಭಿನಯದಲ್ಲಿಯೇ ಪ್ರೇಕ್ಷಕರನ್ನು ಮನಸೂರೆಗೊಳಿಸಿದ್ದಾರೆ.

ಪೂರಿ ಜಗನ್ನಾಥ್ ಅವರ ತೆಲುಗಿನ `ಸೂಪರ್’ ಸಿನಿಮಾ ಅನುಷ್ಕಾ ಶೆಟ್ಟಿಯ ಮೊದಲ ಸಿನಿಮಾ. ಚಿತ್ರದಲ್ಲಿ ಅಕ್ಕಿನೇನಿ ನಾಗರ್ಜುನ ಮತ್ತು ಆಯೇಶಾ ಟಾಕಿಯ ಅವರ ಜೊತೆ ಅಭಿನಯಿಸುವ ಮೂಲಕ ಸಿನಿರಂಗಕ್ಕೆ ಎಂಟ್ರಿ ನೀಡಿದರು. ರುದ್ರಮ್ಮಾ ದೇವಿ, ಮಿರ್ಚಿ, ಬಿಲ್ಲಾ, ಅರುಂಧತಿ, ವೇದಂ, ಸಿಂಗಂ, ವಾನಂ ಮತ್ತು ಸೈಜ್ ಝೀರೋ ಹೀಗೆ ಪ್ರತಿ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸುವ ಮೂಲಕ ಪ್ರೇಕ್ಷಕರ ಹಾಗೂ ವಿಮರ್ಶಕರ ಮೆಚ್ಚುಗೆಗೆ ಪಾತ್ರರಾದರು.

ಪ್ರಕಾಶ್ ಕೋವೆಲಾಮುಡಿ ಅವರ `ಸೈಜ್ ಝೀರೋ’ ಸಿನಿಮಾಕ್ಕಾಗಿ ಅನುಷ್ಕಾ ದಪ್ಪ ಯುವತಿಯ ಪಾತ್ರ ನೀಡಲಾಗಿತ್ತು. ಆದರೆ ಈ ಪಾತ್ರಕ್ಕೆ ಫ್ಯಾಟ್ ಸೂಟ್ ಧರಿಸಲು ಇಷ್ಟಪಡದೇ ನೈಜವಾಗಿ ನಾನು ಅಭಿನಯಿಸುತ್ತೇನೆ ಎಂದು ಹೇಳಿ ಬರೋಬ್ಬರಿ 20 ಕೆ.ಜಿ ತೂಕವನ್ನು ಹೆಚ್ಚಿಸಿಕೊಂಡಿದ್ದರು.

ಬಹುತೇಕ ನಟಿಯರು ಸ್ಲಿಮ್ ಆಗಲು ಇಚ್ಚೆ ಪಡುತ್ತಾರೆ ಆದರೆ ತೂಕ ಹೆಚ್ಚಿಸಿಕೊಳ್ಳುವ ನಿರ್ಧಾರ ವನ್ನು ಅನುಷ್ಕಾ ಶೆಟ್ಟಿ ತೆಗೆದುಕೊಂಡಿದ್ದು ಸಿನಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಸಂದರ್ಶನವೊಂದರಲ್ಲಿ ಮಾತನಾಡುವಾಗ, ಜನರು ಅವರ ದೇಹದ ತೂಕದ ಬಗ್ಗೆ ಯಾವಾಗಲು ಕಾಳಜಿ ವಹಿಸುತ್ತಾರೆ. ನಮ್ಮ ನೋಟ ಅಥವಾ ತೂಕ ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ ಎಂದು ಹೇಳಿದ್ದರು.

ಈ ಸಿನಿಮಾಕ್ಕಾಗಿ ಆರೋಗ್ಯಕರವಾದ ಸಿಹಿತಿಂಡಿಗಳು, ಜ್ಯೂಸ್ ಮತ್ತು ಕೊಬ್ಬಿನಂತಹ ಆಹಾರ ಪದಾರ್ಥಗಳನ್ನು ಸೇವಿಸಲು ಪ್ರಾರಂಭಿಸಿದರು. ಜೊತೆಗೆ ಮನೆಯಲ್ಲಿಯೇ ಸಿದ್ಧಪಡಿಸಿದ್ದ ರುಚಿಕರ ಆಹಾರ ಸೇವನೆ ಅನುಷ್ಕಾಗೆ ಅಚ್ಚುಮೆಚ್ಚು. ಅನುಷ್ಕಾ ಅವರು ಸಿನಿಮಾರಂಗಕ್ಕೆ ಬರುವ ಮೊದಲು ಯೋಗ ಶಿಕ್ಷಕಿಯಾಗಿ ತರಬೇತಿ ಪಡೆದು ಸರ್ಟಿಫಿಕೇಟ್ ಕೂಡ ಪಡೆದುಕೊಂಡಿದ್ದರು. ಅಂದಿನಿಂದಲೂ ಪ್ರತಿದಿನ ಸುಮಾರು 30 ನಿಮಿಷಗಳ ಸಮಯವನ್ನು ಯೋಗಕ್ಕೆ ಮೀಸಲಿಡುತ್ತಾರೆ.

ವಿವಿಧ ಪಾತ್ರಗಳಲ್ಲಿ ಅಭಿನಯಿಸುವುದು ಅಂದರೆ ಅನುಷ್ಕಾ ಅವರಿಗೆ ತುಂಬಾ ಇಷ್ಟ. ಸೈಜ್ ಝೀರೋ ಸಿನಿಮಾದ ನಂತರ ರುದ್ರಮ್ಮದೇವಿ ಮತ್ತು ಬಾಹುಬಲಿ ದಿ ಕನ್‍ಕ್ಲೂಸನ್ ಸಿನಿಮಾಕ್ಕಾಗಿ ಮತ್ತೆ ಕಠಿಣವಾದ ಡಯಟ್ ಪ್ರಾರಂಭಿಸಿದರು. ಆದರೂ ಕುದುರೆ ಸವಾರಿ, ಬಿಲ್ಲುಗಾರಿಕೆ, ಕತ್ತಿ ಹೋರಾಟ ಮತ್ತು ಇತರೆ ಕೌಶಲ್ಯಗಳನ್ನು ಕಲಿಯುವುದರಿಂದ ದೂರವಿರಲಿಲ್ಲ. ಅನುಷ್ಕಾ ಸಂಪ್ರದಾಯಿಕ ದಕ್ಷಿಣ ಭಾರತೀಯ ಆಹಾರ ಪ್ರಿಯರಾಗಿದ್ದು, ಯೋಗ ನನ್ನ ಜೀವನ ಶೈಲಿಯನ್ನು ಸಂಪೂರ್ಣ ಬದಲಾಯಿಸಿದೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ: ತನ್ನ ಹುಟ್ಟುಹಬ್ಬದಂದು ಡ್ರೈವರ್ ಗೆ 12 ಲಕ್ಷದ ಕಾರನ್ನು ಉಡುಗೊರೆಯಾಗಿ ಕೊಟ್ಟ ಅನುಷ್ಕಾ ಶೆಟ್ಟಿ!

ಇದನ್ನು ಓದಿ: ಹುಟ್ಟು ಹಬ್ಬದ ಸಂಭ್ರಮದಲ್ಲಿರೋ ಪ್ರಭಾಸ್‍ಗೆ ಅನುಷ್ಕಾ ಗಿಫ್ಟ್ ಕೊಟ್ಟಿದ್ದು ಏನು ಗೊತ್ತಾ?

View this post on Instagram

#Sizezero ????

A post shared by AnushkaShetty (@anushkashettyofficial) on

View this post on Instagram

Here's the first look poster of #SizeZero Movie ????

A post shared by AnushkaShetty (@anushkashettyofficial) on

View this post on Instagram

????????????????????????

A post shared by AnushkaShetty (@anushkashettyofficial) on

View this post on Instagram

#Baahubali2tamilaudiolaunch

A post shared by AnushkaShetty (@anushkashettyofficial) on

View this post on Instagram

Breakfast is getting on time ????????????????????????

A post shared by AnushkaShetty (@anushkashettyofficial) on

https://www.instagram.com/p/BA1DRXxDj27/?hl=en&taken-by=anushkashettyofficial

https://www.instagram.com/p/8yhLYwjj5a/?hl=en&taken-by=anushkashettyofficial

https://www.instagram.com/p/8dHWuPDjwg/?hl=en&taken-by=anushkashettyofficialClick to comment

Leave a Reply

Your email address will not be published. Required fields are marked *