ನವದೆಹಲಿ: ಮಧ್ಯಪ್ರಾಚ್ಯ ಯುದ್ಧದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತೀಯರು ಪೆಟ್ರೋಲ್, ಡೀಸೆಲ್ ಮಿತವಾಗಿ ಬಳಸಿ. ಒಂದು ವರ್ಷ ಚಿನ್ನ ಖರೀದಿಸಬೇಡಿ. ಮನೆಯಲ್ಲೇ ಕೆಲಸ ಮಾಡಿ ಎಂದು ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಮೋದಿ ಮಾತಿನ ಉದ್ದೇಶವೇನು?
* ಪಶ್ಚಿಮ ಏಷ್ಯಾ ಯುದ್ಧದಿಂದಾಗುವ ಭಾರತದ ಮೇಲಿನ ಪರಿಣಾಮ ಕಡಿಮೆ ಮಾಡುವುದು.
* ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಉಂಟಾದ ಸಂಘರ್ಷದಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಾಗಿದೆ.
* ಭಾರತ ತನ್ನ ಅಗತ್ಯದ ಬಹುಪಾಲು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ.
* ಯುದ್ಧದಿಂದ ತೈಲ ಬೆಲೆ ಏರಿದರೆ ಭಾರತಕ್ಕೆ ದೊಡ್ಡ ಹೊರೆ ಬರುತ್ತದೆ.
* ವಿದೇಶಿ ವಿನಿಮಯ ಸಂಗ್ರಹ ಉಳಿಸುವುದು.
* ಭಾರತ ಪೆಟ್ರೋಲಿಯಂ ಉತ್ಪನ್ನಗಳು, ಚಿನ್ನ, ಅಡುಗೆ ಎಣ್ಣೆ ಮುಂತಾದವುಗಳನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡುತ್ತದೆ. ಇವುಗಳಿಗೆ ಡಾಲರ್‌ನಲ್ಲಿ ಹಣ ಪಾವತಿಸಬೇಕಾಗುತ್ತದೆ.
* ಜನರು ಕಡಿಮೆ ಇಂಧನ ಬಳಸಿದರೆ, ತೈಲ ಆಮದು ಕಡಿಮೆಯಾಗಬಹುದು.
* ಚಿನ್ನ ಖರೀದಿ ಕಡಿಮೆಯಾದರೆ ಡಾಲರ್ ಹೊರಹೋಗುವುದು ಕಡಿಮೆಯಾಗಬಹುದು.
* ಇದರಿಂದ ಭಾರತದ ವಿದೇಶಿ ವಿನಿಮಯದ ಮೇಲೆ ಒತ್ತಡ ಕಡಿಮೆಯಾಗುತ್ತದೆ.
* ಅನಗತ್ಯ ಬಳಕೆಯಿಂದ ತೈಲ ಒತ್ತಡ ಸೃಷ್ಟಿಯಾಗಿ, ಪೆಟ್ರೋಲಿಯಂ ಬೆಲೆ ಹೆಚ್ಚಲಿದೆ. ಇದರಿಂದ ಇತರೆ ಬೆಲೆ ಹೆಚ್ಚಲಿದೆ. ಸಾರಿಗೆ ವೆಚ್ಚ, ಆಹಾರ, ವಸ್ತುಗಳು, ಸೇವೆಗಳ ಬೆಲೆಗಳೂ ಏರಬಹುದು. ಇದರಿಂದ ದೇಶದಲ್ಲಿ ಬೆಲೆ ಏರಿಕೆ ಹೆಚ್ಚಲಿದೆ.
* ಕೋವಿಡ್ ಸಮಯದಲ್ಲಿ ವರ್ಕ್ ಫ್ರಮ್ ಹೋಮ್‌ನಿಂದ ಇಂಧನ ಬಳಕೆ ಗಣನೀಯವಾಗಿ ಕಡಿಮೆಯಾಗಿತ್ತು.
* ಈಗಲೂ ವರ್ಕ್ ಫ್ರಮ್ ಹೋಮ್‌ಗೆ ಆದ್ಯತೆ ನೀಡದರೆ ಪೆಟ್ರೋಲ್/ಡೀಸೆಲ್ ಬಳಕೆ ಕಡಿಮೆ ಆಗಬಹುದು.

