ಬೀದರ್: ತೆಲಂಗಾಣದಲ್ಲಿ (Telangana Accident) ಸಂಭವಿಸಿದ ಅಫಘಾತದಲ್ಲಿ ಮೃತರಾದ ಬೀದರ್ (Bidar) ಮೂಲದ ಆರು ಜನರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಕೂಲಿಗೆ ಹೋದವರು ಆರು ಜನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸರ್ಕಾರ ಅವರ ಕುಟುಂಬದ ಜೊತೆ ಇದ್ದು, ಪರಿಹಾರ ನೀಡತ್ತಿದೆ. ಮೃತರಾದ ಎಲ್ಲರ ಆತ್ಮಕ್ಕೆ ಶಾಂತಿ ನೀಡಲಿ. ಈಗಾಗಲೇ ಸಿಎಂ ಜೊತೆ ಮಾತನಾಡಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ನೀಡುತ್ತೇವೆ. ಮೃತ ಆರು ಜನಕ್ಕೆ ತಲಾ 5 ಲಕ್ಷ ಪರಿಹಾರ ನೀಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತೆಲಂಗಾಣದಲ್ಲಿ ಭೀಕರ ಅಪಘಾತ; ಬೀದರ್ ಮೂಲದ 6 ಮಂದಿ ದುರ್ಮರಣ
ನಾನು ವೈಯಕ್ತಿಕ ಪರಿಹಾರ ನೀಡುತ್ತೇನೆ. ಮೃತರ ಮಕ್ಕಳು ಯಾರು ವಿದ್ಯಾಭ್ಯಾಸ ಮಾಡಿದ್ದಾರೋ ಅವರಿಗೆ ಸರ್ಕಾರಿ ಕೆಲಸ ನೀಡುತ್ತೇವೆ. ಒಂದು ಆಟೋದಲ್ಲಿ 15 -20 ಜನ ತುಂಬಿಕೊಂಡು ಹೋಗೋದು ತಪ್ಪು. ಇವರ ಮನೆಗಳಿಗೆ ಭೇಟಿ ನೀಡಿ ಎಲ್ಲಾ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಸಚಿವ ಈಶ್ವರ್ ಖಂಡ್ರೆ ಭರವಸೆ ನೀಡಿದ್ದಾರೆ.
ತೆಲಗಾಂಣದ ಜಹೀರಾಬಾದ್ ಬಳಿಯ ಮೊಗುಡಂಪಳ್ಳಿ (ಎಂ)ಯ ಸತ್ವಾರ್ ಗ್ರಾಮದ ಹೊರವಲಯದಲ್ಲಿ ಟ್ಯಾಂಕರ್ ಲಾರಿ ಮತ್ತು ಆಟೋ ಮುಖಾಮುಖಿ ಡಿಕ್ಕಿಯಾಗಿ ಮಂಗಳವಾರ ಸ್ಥಳದಲ್ಲೇ ಆರು ಮಂದಿ ಸಾವನ್ನಪ್ಪಿದ್ದರು. ಇದನ್ನೂ ಓದಿ: ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಿದ್ದು ಮೈತುಂಬ ಸಾಲ – ಗೃಹಿಣಿ ನೇಣಿಗೆ ಶರಣು
ಬೀದರ್ ತಾಲೂಕಿನ ರಾಜಗೀರಾ ಗ್ರಾಮದ ಆರು ಮಂದಿ ಮೃತಪಟ್ಟಿದ್ದಾರೆ. ಕೂಲಿ ಕೆಲಸಕ್ಕೆಂದು ಆಟೋದಲ್ಲಿ ಜಹೀರಾಬಾದ್‌ಗೆ ಮಹಿಳೆಯರು ಹೋಗಿದ್ದರು. ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದಾಗ ಅವಘಡ ಸಂಭವಿಸಿತ್ತು.

