ನಗೋಯಾ: 2026ರ ಏಷ್ಯನ್ ಗೇಮ್ಸ್ (Asian Games) ಪುರುಷರ ಬ್ಯಾಡ್ಮಿಂಟನ್ ತಂಡ(Badminton Team) ವಿಭಾಗದ ಸೆಮಿಫೈನಲ್‌ನಲ್ಲಿ ಭಾರತ (India) ತಂಡವು ಚೀನಾ(China) ವಿರುದ್ಧ 1-3 ಅಂತರದಿಂದ ಸೋಲನುಭವಿಸಿ ಕಂಚಿನ ಪದಕಕ್ಕೆ (Bronze Medal) ತೃಪ್ತಿಪಟ್ಟಿದೆ.
ಭಾರತದ ತಾರೆ ಲಕ್ಷ್ಯ ಸೇನ್ ಅವರು ಚೀನಾದ ಮಾಜಿ ವಿಶ್ವ ಚಾಂಪಿಯನ್ ಶಿ ಯುಕಿ ವಿರುದ್ಧ 16-21, 18-21 ನೇರ ಗೇಮ್‌ಗಳಿಂದ ಸೋತು ಹಿನ್ನಡೆ ಅನುಭವಿಸಿದರು. ನಂತರ ಕಣಕ್ಕಿಳಿದ ಭಾರತದ ಸ್ಟಾರ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಪ್ರಸ್ತುತ ವಿಶ್ವ ಚಾಂಪಿಯನ್ಸ್ ಜೋಡಿಯಾದ ಲಿಯಾಂಗ್ ವೀ ಕೆಂಗ್ ಮತ್ತು ವಾಂಗ್ ಚಾಂಗ್ ಅವರನ್ನು 21-11, 22-20 ರಿಂದ ಅದ್ಭುತವಾಗಿ ಮಣಿಸಿ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದರು.
ಎರಡನೇ ಸಿಂಗಲ್ಸ್‌ನಲ್ಲಿ ಯುವ ಆಟಗಾರ ಆಯುಷ್ ಶೆಟ್ಟಿ ಅವರು ಏಷ್ಯನ್ ಗೇಮ್ಸ್‌ನ ಹಾಲಿ ಚಾಂಪಿಯನ್ ಲಿ ಶಿಫೆಂಗ್ ವಿರುದ್ಧ 19-21, 13-21 ಗೇಮ್‌ಗಳಿಂದ ಹೋರಾಡಿ ಸೋತರು.
𝐀 𝐜𝐨𝐦𝐞𝐛𝐚𝐜𝐤 𝐭𝐡𝐚𝐭 𝐜𝐡𝐚𝐧𝐠𝐞𝐝 𝐞𝐯𝐞𝐫𝐲𝐭𝐡𝐢𝐧𝐠. ✨
Satvik & Chirag open up on how the quarter-final tie against a strong host team unfolded, and how Lakshya Sen’s turnaround shifted the momentum and gave them the confidence to take India over the line. 🔥… pic.twitter.com/rD2N6HpjgW
— Sony Sports Network (@SonySportsNetwk) September 23, 2026
ನಿರ್ಣಾಯಕವಾಗಿದ್ದ ನಾಲ್ಕನೇ ಪಂದ್ಯದಲ್ಲಿ ಭಾರತದ ಹರಿಹರನ್ ಅಮ್ಸಕರುಣನ್ ಮತ್ತು ಎಂ.ಆರ್. ಅರ್ಜುನ್ ಜೋಡಿಯು ಚೀನಾದ ಹೆ ಜಿ ಟಿಂಗ್ ಮತ್ತು ಲಿಯು ಯಿ ವಿರುದ್ಧ 16-21, 21-17, 9-21 ರಿಂದ ತೀವ್ರ ಹೋರಾಟ ನಡೆಸಿ ಪರಾಭವಗೊಂಡಿತು. ಇದನ್ನೂ ಓದಿ: ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು – ಭಾರತದ ಪರ ಹೊಸ ಮೈಲಿಗಲ್ಲು
ಈ ಕಂಚಿನ ಪದಕದೊಂದಿಗೆ ಭಾರತವು ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಬ್ಯಾಡ್ಮಿಂಟನ್ ತಂಡ ವಿಭಾಗದಲ್ಲಿ ಸತತ ಎರಡನೇ ಬಾರಿ ಪೋಡಿಯಂ ಏರಿದ ಐತಿಹಾಸಿಕ ಸಾಧನೆ ಮಾಡಿದೆ. ಮುಂದಿನ ದಿನಗಳಲ್ಲಿ ಬ್ಯಾಡ್ಮಿಂಟನ್‌ನ ವೈಯಕ್ತಿಕ (Individual) ವಿಭಾಗದ ಪಂದ್ಯಗಳು ಆರಂಭವಾಗಲಿವೆ.

