ನವದೆಹಲಿ: ರಾಘವ್ ಚಡ್ಡಾ (Raghav Chadha) ಸೇರಿ 7 ರಾಜ್ಯಸಭಾ ಸಂಸದರು ಎಎಪಿ (AAP) ತೊರೆದು ಬಿಜೆಪಿ ಸೇರಿದ ಬಗ್ಗೆ ಆಪ್ ಮುಖ್ಯಸ್ಥ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅರವಿಂದ್ ಕೇಜ್ರಿವಾಲ್, ಬಿಜೆಪಿ ಮತ್ತೊಮ್ಮೆ ಪಂಜಾಬಿಗಳಿಗೆ ದ್ರೋಹ ಮಾಡಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಎಎಪಿ ತೊರೆದು ಬಿಜೆಪಿ ಸೇರಿದ 7 ರಾಜ್ಯಸಭಾ ಸಂಸದರು
बीजेपी ने फिर से पंजाबियों के साथ किया धक्का
— Arvind Kejriwal (@ArvindKejriwal) April 24, 2026
ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಶುಕ್ರವಾರ ಎಎಪಿ ಪಕ್ಷ ತೊರೆದಿದ್ದು, ಬಿಜೆಪಿ ಸೇರುವುದಾಗಿ ಘೋಷಿಸಿದ್ದರು. ಅವರ ಜೊತೆ ಇನ್ನೂ ಆರು ಮಂದಿ ಎಎಪಿ ರಾಜ್ಯಸಭಾ ಸಂಸದರು ಎಎಪಿ ತೊರೆಯುವುದಾಗಿ ತಿಳಿಸಿದ್ದರು.
ನಾನು 15 ವರ್ಷಗಳ ಕಾಲ ಎಎಪಿ ಪಕ್ಷಕ್ಕಾಗಿ ಬೆವರು, ರಕ್ತ ಹರಿಸಿ ದುಡಿದಿದ್ದೀನಿ. ಆದರೆ, ಪಕ್ಷವು ತನ್ನ ತತ್ವ, ಮೌಲ್ಯಗಳಿಗೆ ವಿರುದ್ಧವಾಗಿ ಈಗ ನಡೆದುಕೊಳ್ಳುತ್ತಿದೆ ಎಂದು ಚಡ್ಡಾ ಬೇಸರ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಚಡ್ಡಾ ಜೊತೆ ಆಪ್ ರಾಜ್ಯಸಭಾ ಸದಸ್ಯ, ಕ್ರಿಕೆಟಿಗ ಹರ್ಭಜನ್ ಸಿಂಗ್ ಬಿಜೆಪಿಗೆ
ರಾಜ್ಯಸಭೆಯಲ್ಲಿ ಇರುವ ಎಎಪಿಯ 2/3 ಭಾಗದಷ್ಟು ಸಂಸದರು ಬಿಜೆಪಿಯೊಂದಿಗೆ ವಿಲೀನಗೊಳ್ಳಲಿದ್ದಾರೆಂದು ಛಡ್ಡಾ ತಿಳಿಸಿದ್ದರು.



