Connect with us

Latest

ಮುಂಬೈ ಹಿರಿಯರ ತಂಡದ ಪರ ಕಣಕ್ಕಿಳಿದ ಜೂನಿಯರ್ ತೆಂಡೂಲ್ಕರ್

Published

on

ಮುಂಬೈ: ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ನಡೆಯುತ್ತಿರುವ ಪಂದ್ಯಾಟದಲ್ಲಿ ಮುಂಬೈ ಹಿರಿಯರ ತಂಡದಲ್ಲಿ ಬ್ಯಾಟಿಂಗ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಕಣಕ್ಕಿಳಿದಿದ್ದಾರೆ.

21 ವರ್ಷದ ಅರ್ಜುನ್ ತೆಂಡೂಲ್ಕರ್ ಹರಿಯಾಣ ವಿರುದ್ಧದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿ 3 ಓವರ್ ಎಸೆದು 1 ವಿಕೆಟ್ ಕಿತ್ತಿದ್ದಾರೆ.

ಅಲ್‍ರೌಂಡರ್ ಆಗಿರುವ ಅರ್ಜುನ್ ತೆಂಡೂಲ್ಕರ್ ತಮ್ಮ ಚೊಚ್ಚಲ ಪಂದ್ಯದಲ್ಲಿ ಒಂದು ವಿಕೆಟ್ ಕಿತ್ತು ಭರವಸೆ ಮೂಡಿಸಿದ್ದಾರೆ. ಆದರೂ ಈ ಪಂದ್ಯದಲ್ಲಿ ಮುಂಬೈ ಸೋಲನ್ನು ಅನುಭವಿಸಿದೆ.

ಮುಂಬೈನ ಬಾಂದ್ರ ಕುರ್ಲಾ ಕಾಂಪ್ಲೆಕ್ಸ್ ಶರದ್ ಪವಾರ್ ಕ್ರಿಕೆಟ್ ಮೈದಾನದಲ್ಲಿ ನಡದ ಪಂದ್ಯಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 143 ರನ್ ಗಳಿಸಿತು. ಈ ಸಾಧಾರಣ ಮೊತ್ತವನ್ನು ಚೇಸ್ ಮಾಡಲು ಹೊರಟ ಹರಿಯಾಣ ತಂಡದ ಪರ ಹಿಮಾಂಶು ರಾಣಾ 75 ರನ್(53 ಎಸೆತ)ರನ್ ಹೊಡೆದು 17.4 ಓವರ್ ಗಳಲ್ಲಿ ಪಂದ್ಯ ಗೆಲ್ಲಿಸಿಕೊಟ್ಟರು.

 

ಅರ್ಜುನ್ ತೆಂಡೂಲ್ಕರ್ ಹಿರಿಯರ ತಂಡಕ್ಕೆ ಪಾದಾರ್ಪಣೆ ಮಾಡಿದ ಪಂದ್ಯದಲ್ಲಿ 3 ಓವರ್ ಮಾಡಿ 34ರನ್ ಬಿಟ್ಟುಕೊಟ್ಟರು. ಇವರ ಮೊದಲ ವಿಕೆಟ್ ಸಂಭ್ರಮಕ್ಕೆ ವಿಕೆಟ್ ಒಪ್ಪಿಸಿದವರು ಹರಿಯಾಣ ತಂಡದ ಆರಂಭಿಕ ಆಟಗಾರ ಚೈತ್ಯ ಬಿಷ್ಣೋಯ್. ಇವರ ವಿಕೆಟ್ ಪಡೆಯುವ ಮೂಲಕ ಮೊದಲ ವಿಕೆಟ್ ಪಡೆದು ಆರಂಭಿಕ ಯಶಸ್ಸು ತಂದು ಕೊಟ್ಟಿದ್ದರು. ಈ ಮೂಲಕ ಮುಂಬೈ ತಂಡಕ್ಕೆ ಮುಂದಿನ ಪಂದ್ಯಗಳಲ್ಲಿ ಭರವಸೆ ಮೂಡಿಸಿದ್ದಾರೆ.

 

Click to comment

Leave a Reply

Your email address will not be published. Required fields are marked *