ಜೈಪುರ: ರಾಜಸ್ಥಾನದ (Rajasthan) ಬಿಕಾನೆರ್ ಮತ್ತು ಚುರು ಸೇರಿದಂತೆ ಹಲವು ಭಾಗಗಳಲ್ಲಿ ಭಾರೀ ಧೂಳಿನಿಂದ ಕೂಡಿದ ಬಿರುಗಾಳಿ (Apocalyptic sandstorm) ಬೀಸಿದೆ. ಬಿರುಗಾಳಿಯ ಪರಿಣಾಮ ದಟ್ಟವಾದ ಮರಳು ಹಲವು ನಗರಗಳು ಆವರಿಸಿದ್ದು, ಮಧ್ಯಾಹ್ನದ ವೇಳೆಯೇ ರಾತ್ರಿಯಂತೆ ಬಾಸವಾಗುತ್ತಿತ್ತು.
ತೀವ್ರ ಉಷ್ಣತೆ ಮತ್ತು ಥಾರ್ ಮರುಭೂಮಿಯಲ್ಲಿ ಸಡಿಲವಾದ ಮರುಭೂಮಿ ಮಣ್ಣಿನಿಂದ ಈ ಬಿರುಗಾಳಿ ಉಂಟಾಗಿದೆ. ಈ ಬಿರುಗಾಳಿ ದೆಹಲಿಯೆಡೆಗೆ ಬೀಸುತ್ತಿದೆ ಎಂದು ವರದಿಯಾಗಿದೆ. ಬಿರುಗಾಳಿ ಬೀಸುವ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಇನ್ನೆರಡು ದಿನ 19 ರಾಜ್ಯಗಳಲ್ಲಿ ಭಾರೀ ಮಳೆಯ ಅಲರ್ಟ್ – ಗುಡುಗು ಸಿಡಿಲಿನ ಆರ್ಭಟವೂ ಜೋರು
Delhi NCR storm update ⚡️
What and when to expect:
• Moderate Duststorm (40-80km/h) in entire #Delhi #Gurgaon #Noida #Ghaziabad #Faridabad b/w 3:30 to 5pm.
• Followed by Duststorm, a spell of moderate rains / thundershowers will occur at most parts (60-80% coverage) for a… pic.twitter.com/a1IMOREpf2— Weatherman Navdeep Dahiya (@navdeepdahiya55) May 30, 2026
ಮಧ್ಯಾಹ್ನ 2:45ರ ಸುಮಾರಿಗೆ ಬಿಕಾನೆರ್, ಚುರು, ಶ್ರೀ ಗಂಗಾನಗರ ಜಿಲ್ಲೆಗಳು ಮತ್ತು ಹತ್ತಿರದ ಪ್ರದೇಶಗಳಲ್ಲಿ ಮರಳು ಮತ್ತು ಧೂಳು ಆವರಿಸಿತ್ತು. ಹವಾಮಾನದಲ್ಲಿನ ಹಠಾತ್ ಬದಲಾವಣೆ ಹಗಲಿನ ವಾತಾವರಣವನ್ನು ರಾತ್ರಿಯ ಕತ್ತಲೆಯಾಗಿ ಮಾರ್ಪಡಿಸಿತ್ತು. ಇದರಿಂದಾಗಿ ವಾಹನ ಚಾಲಕರು ಮಧ್ಯಾಹ್ನದ ಸಮಯದಲ್ಲಿಯೂ ಹೆಡ್‌ಲೈಟ್‌ಗಳನ್ನು ಆನ್ ಮಾಡಿಕೊಂಡು ವಾಹನ ಚಲಾಯಿಸಿದರು. ಈ ವೇಳೆ ರಸ್ತೆಯಲ್ಲಿ ಓಡಾಡುವ ಜನ ಭಾರೀ ತೊಂದರೆ ಅನುಭವಿಸಿದರು.
Massive dust storm hits Lunkaransar, Rajasthan, India 🇮🇳 (30.05.2026) pic.twitter.com/DpY1spjK77
— Disaster News (@Top_Disaster) May 30, 2026
ಬಿರುಗಾಳಿಯ ಬಳಿಕ ಹಲವಡೆ ಮಳೆಯಾಗಿದೆ. ಇದರಿಂದ ಗಾಳಿ ಹಾಗೂ ಧೂಳಿನ ತೀವ್ರತೆ ಕಡಿಮೆಯಾಗಿದೆ. ಇನ್ನೂ, ಮಳೆಯಿಂದಾಗಿ ಈ ಭಾಗದಲ್ಲಿ ವಾತಾವರಣ ತಂಪಾಗಿದ್ದು, ಜನ ಸಂತಸ ವ್ಯಕ್ತಪಡಿಸಿದ್ದಾರೆ. ಗಾಳಿ ಮಳೆಯಿಂದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಹಠಾತ್ ಬಿರುಗಾಳಿಯ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾತಾಡಿದ್ದು, ಕಳಪೆ ಗೋಚರತೆಯಿಂದ ವಾಹನ ಸವಾರರು ಪರದಾಡಿದ್ದಾರೆ. ಬಲವಾದ ಗಾಳಿ ಬೀಸಿದ್ದರಿಂದ ಅನೇಕ ಜನರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದರು. ಹಲವಾರು ಸ್ಥಳಗಳಲ್ಲಿ ಮರದ ಕೊಂಬೆಗಳು ಮುರಿದಿವೆ. ಹೋರ್ಡಿಂಗ್‌ಗಳು ಮತ್ತು ಟಿನ್ ಶೆಡ್‌ಗಳಿಗೆ ಹಾನಿಯಾಗಿವೆ ಎಂದು ಹೇಳಿದ್ದಾರೆ.
ಬಿರುಗಾಳಿ ಮಳೆಯಿಂದ ಯಾವುದೇ ಸಾವುನೋವುಗಳು ಅಥವಾ ಗಂಭೀರ ಘಟನೆಗಳು ವರದಿಯಾಗಿಲ್ಲ. ವಿವಿಧ ಸ್ಥಳಗಳಲ್ಲಿ ಆಸ್ತಿಪಾಸ್ತಿ ಹಾನಿಯಾದ ವರದಿಯಾಗಿದೆ.
ದೆಹಲಿ-ಎನ್‌ಸಿಆರ್‌ಗೆ ಧೂಳಿನ ಬಿರುಗಾಳಿ ಎಚ್ಚರಿಕೆ
ಮುಂದಿನ ಎರಡು ಗಂಟೆಗಳಲ್ಲಿ ದೆಹಲಿ ಮತ್ತು ಎನ್‌ಸಿಆರ್ ಪ್ರದೇಶದಲ್ಲಿ ಧೂಳಿನ ಬಿರುಗಾಳಿ ಬೀಸುವ ನಿರೀಕ್ಷೆಯಿದೆ. ನಂತರ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಗಂಟೆಗೆ 50-70 ಕಿ.ಮೀ ವೇಗದಲ್ಲಿ ಬೀಸುವ ಗಾಳಿಯೊಂದಿಗೆ ಧೂಳಿನ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ (IMD) ತಿಳಿಸಿದೆ. ಇದನ್ನೂ ಓದಿ: ಕೆರೆಗೆ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು
