ಚೆನ್ನೈ: ತಮಿಳುನಾಡಿನ ಪ್ರಮುಖ ರಾಜಕೀಯ ಪಕ್ಷವಾದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ಪಕ್ಷಕ್ಕೆ ಮತ್ತೊಂದು ಮರ್ಮಾಘಾತವಾಗಿದೆ. ಪಕ್ಷದ ಪ್ರಭಾವಿ ಶಾಸಕರೊಬ್ಬರು ವಿಧಾನಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತಮಿಳುನಾಡಿನ ಕರೂರು ಕ್ಷೇತ್ರದ ಶಾಸಕ ಎಂ.ಆರ್ ವಿಜಯಭಾಸ್ಕರ್ (M.R. Vijayabaskar) ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಇದು ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದನ್ನೂ ಓದಿ: 3 ರಿಂದ 6 ತಿಂಗಳಲ್ಲಿ ವಿಜಯ್ ಸರ್ಕಾರ ಪತನ ಗ್ಯಾರಂಟಿ – ಎಂ.ಕೆ ಸ್ಟಾಲಿನ್ ಭವಿಷ್ಯ
Tamil Nadu | Speaker JCD Prabakaran says, “Under Rule 21 of the Rules of Procedure of the Legislative Assembly, M.R. Vijayabaskar, Member of the Legislative Assembly representing the Karur Assembly Constituency, has personally submitted his handwritten letter of resignation from… pic.twitter.com/g1q4X6eyJo
— ANI (@ANI) June 29, 2026
ವಿಜಯಭಾಸ್ಕರ್ ಅವರು ಇಂದು (ಸೋಮವಾರ) ತಮಿಳುನಾಡು ವಿಧಾನಸಭೆಯ (Tamil Nadu Assembly) ಸ್ಪೀಕರ್ ಜೆ.ಸಿ.ಡಿ ಪ್ರಭಾಕರ್ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ರಾಜೀನಾಮೆಗೆ ಅಧಿಕೃತ ಕಾರಣ ಬಹಿರಂಗಪಡಿಸಿಲ್ಲ.
ಪಕ್ಷ ತೊರೆದ 6ನೇ ಶಾಸಕ
ವಿಜಯ ಭಾಸ್ಕರ್ ಇತ್ತೀಚಿನ ವಿಧಾನಸಭಾ ಚುನಾವಣೆಯ ಬಳಿಕ ಪಕ್ಷ ತೊರೆದ 6ನೇ ಶಾಸಕರಾಗಿದ್ದಾರೆ. ಇದು ಪಕ್ಷದೊಳಗಿನ ಆಂತರಿಕ ಅಸಮಾಧಾನ ಮತ್ತೊಮ್ಮೆ ಬಹಿರಂಗಪಡಿಸಿದೆ. ಇದನ್ನೂ ಓದಿ: ಕರ್ಮಕಾಂಡದ ಬಗ್ಗೆ ಚಂಪತ್ ರಾಯ್‌ಗೆ ಮೊದಲೇ ಗೊತ್ತಿತ್ತು? – ದೂರು ದಾಖಲಾಗೋ ಮೊದಲೇ ತನಿಖೆ ಶುರುವಾಗಿತ್ತು!
ವಿಧಾನಸಭಾ ಚುನಾವಣೆಯ ಬಳಿಕ ಅಣ್ಣಾಡಿಎಂಕೆ ಪಕ್ಷದಿಂದ ಹಲವು ಶಾಸಕರು ರಾಜೀನಾಮೆ ನೀಡಿದ್ದು ಅಥವಾ ಪಕ್ಷ ತೊರೆದಿದ್ದಾರೆ. ಕೆಲವರು ನಟ-ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವನ್ನು ಸೇರಿರುವುದು ತಮಿಳುನಾಡಿನ ರಾಜಕೀಯದಲ್ಲಿ ಹೊಸ ಬೆಳವಣಿಗೆಗಳಿಗೆ ಕಾರಣವಾಗಿದೆ. ಈ ಬೆಳವಣಿಗೆಗಳು ರಾಜ್ಯದಲ್ಲಿ ರಾಜಕೀಯ ಸಮೀಕರಣಗಳು ಬದಲಾಗುತ್ತಿರುವ ಸೂಚನೆಗಳೆಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
