-ವಿವಾದದಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಎಂಟ್ರಿ
ಕೊಪ್ಪಳ: ಹನುಮ ಜನ್ಮಸ್ಥಳ ಅಂಜನಾದ್ರಿ ದೇವಸ್ಥಾನದ ಆಡಳಿತ ಹಾಗೂ ಪೂಜಾ ಹಕ್ಕಿನ ವಿಚಾರಕ್ಕೆ ರಾಜ್ಯ ಧಾರ್ಮಿಕ ಪರಿಷತ್ ಎಂಟ್ರಿಯಾಗಿದೆ. ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ವಿದ್ಯಾದಾಸ ಬಾಬಾಗೆ ಸೇರಿ ಟ್ರಸ್ಟಿಗಳಿಗೆ ನೋಟಿಸ್ ನೀಡಿ, ನವೆಂಬರ್ 11ರಂದು ಮೂಲ ದಾಖಲೆಗಳೊಂದಿಗೆ ಹಾಜರಾಗುವಂತೆ ಸೂಚಿಸಿದೆ. ಹೈಕೋರ್ಟ್ ಆದೇಶ, ಜಿಲ್ಲಾಡಳಿತದ ಕ್ರಮ ಹಾಗೂ ವಿದ್ಯಾದಾಸ ಬಾಬಾ ಅವರ ನ್ಯಾಯಾಂಗ ನಿಂದನೆ ಅರ್ಜಿ, ಹೀಗೆ ಅಂಜನಾದ್ರಿ ವಿವಾದ ಮತ್ತೆ ಕಾನೂನು ಸಂಘರ್ಷಕ್ಕೆ ಸಾಕ್ಷಿಯಾಗಿದೆ.
ಹನುಮ ಜನ್ಮಸ್ಥಳವೆಂದೇ ಪ್ರಸಿದ್ಧಿ ಪಡೆದಿರುವ ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ (Gangavathi) ತಾಲೂಕಿನ ಅಂಜನಾದ್ರಿ ಬೆಟ್ಟ. ಹನುಮ ಭಕ್ತರ ಪಾಲಿನ ಪವಿತ್ರ ಕ್ಷೇತ್ರವಾಗಿದೆ. ಆದ್ರೆ ಇದೇ ಬೆಟ್ಟದ ಆಡಳಿತ ಮತ್ತು ಪೂಜಾ ಹಕ್ಕಿನ ವಿಚಾರ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಅಂಜನಾದ್ರಿ ದೇವಸ್ಥಾನ ರಾಜ್ಯ ಮುಜರಾಯಿ ಇಲಾಖೆಗೆ ಒಳಪಟ್ಟಿದೆ ಎಂದು 2018ರಲ್ಲಿ ಕೊಪ್ಪಳ ಜಿಲ್ಲಾಡಳಿತ ಹೊರಡಿಸಿದ್ದ ಆದೇಶವನ್ನು, ಧಾರವಾಡ ಹೈಕೋರ್ಟ್ ರದ್ದುಪಡಿಸಿದೆ. ಜೊತೆಗೆ ವಿದ್ಯಾದಾಸ ಬಾಬಾ ಅವರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಆದೇಶಿಸಿತ್ತು. ಇದನ್ನೂ ಓದಿ: ಚುನಾವಣೆಯಲ್ಲಿ ಸೋತರೂ ವೀಟೋ ಬಳಸಿ ಡೆಮಾಕ್ರಟ್ಗಳನ್ನು ಆಟ ಆಡಿಸಲು ಮುಂದಾದ ಟ್ರಂಪ್!
ಹೈಕೋರ್ಟ್ ಆದೇಶದ ಬಳಿಕ ಅಂಜನಾದ್ರಿ ಬೆಟ್ಟದ ಮೇಲೆ ವಿದ್ಯಾದಾಸ್ ಬಾಬಾ ತಮ್ಮ ಹಕ್ಕು ಪ್ರತಿಪಾದಿಸಿದ್ದರು. ಆದರೆ ಬಳಿಕ ಮತ್ತೆ ಜಿಲ್ಲಾಡಳಿತ ದೇವಸ್ಥಾನವನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಯಾವುದೇ ಹೊಸ ನ್ಯಾಯಾಲಯದ ಆದೇಶವಿಲ್ಲದೆ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ ಅನ್ನೋದು ವಿದ್ಯಾದಾಸ ಬಾಬಾ ಅವರ ಆರೋಪ. ಜಿಲ್ಲಾಡಳಿತದ ಈ ಕ್ರಮವನ್ನು ಪ್ರಶ್ನಿಸಿ ವಿದ್ಯಾದಾಸ ಬಾಬಾ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದಾರೆ. ಇದೀಗ ಈ ವಿವಾದಕ್ಕೆ ರಾಜ್ಯ ಧಾರ್ಮಿಕ ಪರಿಷತ್ ಮಧ್ಯಪ್ರವೇಶ ಮಾಡಿದೆ.
ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ, ಟ್ರಸ್ಟಿಗಳು ಹಾಗೂ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ, ರಾಜ್ಯ ಧಾರ್ಮಿಕ ಪರಿಷತ್ ನೋಟಿಸ್ ನೀಡಿದೆ. ಇದೇ ನವಂಬರ್ 11ರಂದು ರಾಜ್ಯ ಧಾರ್ಮಿಕ ಪರಿಷತ್ ಎದುರು, ಮೂಲ ದಾಖಲೆಗಳೊಂದಿಗೆ ಹಾಜರಾಗುವಂತೆ ನೋಟಿಸ್ ನೀಡಿದೆ.ಇದನ್ನೂ ಓದಿ: ಬರದ ಸಂಕಷ್ಟದಲ್ಲಿರುವ ರೈತರಿಗೆ ಕೊನೆಗೂ ಪರಿಹಾರ – ಇಂದು ಡಿಕೆಶಿಯಿಂದ ಬೆಳೆ ಪರಿಹಾರ ಬಿಡುಗಡೆ
ಧಾರ್ಮಿಕ ಪರಿಷತ್ ಎದುರು ನಮ್ಮ ಪರವಾಗಿ ವಕೀಲರು ಹಾಜರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಮತ್ತೊಂದೆಡೆ ಹೈಕೋರ್ಟ್ ಆದೇಶದ ಆಧಾರದಲ್ಲಿ ಪೂಜಾ ಹಕ್ಕು ಪ್ರತಿಪಾದಿಸುತ್ತಿರುವ ವಿದ್ಯಾದಾಸ ಬಾಬಾ, ಜಿಲ್ಲಾಡಳಿತ ಅನಾವಶ್ಯಕವಾಗಿ ಜಿಲ್ಲಾಡಳಿತ ತಮಗೆ ತೊಂದರೆ ಕೊಡುತ್ತಿದೆ. ಜೊತೆಗೆ ನ್ಯಾಯಾಲಯದ ಆದೇಶ ಪಾಲನೆ ಮಾಡದೆ, ನ್ಯಾಯಾಂಗ ನಿಂದನೆ ಮಾಡುತ್ತಿದೆ. ಸದ್ಯ ನಾನು ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳುತ್ತೇನೆ. ಜೊತೆಗೆ ನವಂಬರ್ 11 ರಂದು ರಾಜ್ಯ ಧಾರ್ಮಿಕ ಪರಿಷತ್ ಗೆ ಹಾಜರಾಗ್ತಿನಿ ಮೂಲ ದಾಖಲಾತಿಗಳನ್ನ ಕೊಡ್ತೀವಿ ಎಂದು ಕೇಳಿದ್ದಾರೆ.ಇದನ್ನೂ ಓದಿ:
ಒಟ್ಟಿನಲ್ಲಿ ಹನುಮ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ಪೂಜಾ ಹಕ್ಕು ಮತ್ತು ಆಡಳಿತದ ವಿವಾದಕ್ಕೆ ಧಾರ್ಮಿಕ ಪರಿಷತ್ ವಿಚಾರಣೆ ಹೊಸ ತಿರುವು ನೀಡಿದೆ. ಮುಂದಿನ ಬೆಳವಣಿಗೆಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಹನುಮ ಜನ್ಮ ಸ್ಥಳ ಅಂಜನಾದ್ರಿ ಬೆಟ್ಟ, ಟ್ರಸ್ಟ್ಗೆ ಸೇರುತ್ತಾ, ಇಲ್ಲಾ ಮುಜರಾಯಿ ಇಲಾಖೆಗೆ ಒಳಪಡುತ್ತಾ, ಕಾದು ನೋಡಬೇಕಿದೆ.ಇದನ್ನೂ ಓದಿ: ಬೆಳಗ್ಗೆಯೇ ಮದ್ಯದ ಅಮಲಿನಲ್ಲಿರುವ ಮುಖ್ಯಮಂತ್ರಿಯಿಂದ ಪಂಜಾಬ್ ಅನ್ನು ಡ್ರಗ್ಸ್ಮುಕ್ತ ಮಾಡಲು ಸಾಧ್ಯವೇ? – ರಾಹುಲ್ ವಾಗ್ದಾಳಿ
