ಬೆಂಗಳೂರು: ನನಗೆ ಚಿತ್ರಾನ್ನ ಮತ್ತು ಉಪ್ಪಿಟ್ಟು ಬೇಡ. ಚಿಕನ್ ಪಾಪ್ ಕಾರ್ನ್ ಬೇಕು ಎಂದು ಪಾಕ್ ಪ್ರೇಮಿ ಅಮೂಲ್ಯ ಪೊಲೀಸರ ಮುಂದೆ ಬೇಡಿಕೆ ಇಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಇನ್ನು ಪಾಖ್ ಪ್ರೇಮಿ ಅಮೂಲ್ಯಳ ಬೇಡಿಕೆ ಕೇಳಿ ಪೊಲೀಸರು ಒಂದು ಕ್ಷಣ ಶಾಕ್ ಆಗಿದ್ದರಂತೆ.
Advertisement
ಅಮೂಲ್ಯಳನ್ನು ಕಸ್ಟಡಿಗೆ ಪಡೆದಿರುವ ಪೊಲೀಸರು ಬಸವೇಶ್ವರ ನಗರ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ. ಬುಧವಾರ ಮಧ್ಯಾಹ್ನ ಅಮೂಲ್ಯಳಿಗೆ ಊಟಕ್ಕೆ ಚಪಾತಿ, ಅನ್ನ ಸಾಂಬಾರ್ ನೀಡಲಾಗಿತ್ತು. ಆದರೆ ಊಟ ನೋಡಿದ ಅಮೂಲ್ಯ, ನನಗೆ ಇದೆಲ್ಲಾ ಬೇಡ ಚಿಕನ್ ಪಾಪ್ ಕಾರ್ನೇ ಬೇಕು ಹಠ ಹಿಡಿದಿದ್ದಾಳೆ. ನೀವು ತಂದು ಕೊಡ್ತಿರೋ ಇಲ್ಲ ಮಮ್ಮಿಗೆ ಹೇಳಿ ನಾನೇ ತರಿಸಿಕೊಳ್ಳೋಲೊ ಅಂತ ಹೇಳಿದ್ದಾಳೆ. ಕೊನೆಗೆ ಪೊಲೀಸರು ಅನಿವಾರ್ಯವಾಗಿ ಚಿಕನ್ ಪಾಪ್ ಕಾರ್ನ್ ತಂದು ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
Advertisement
Advertisement
ಚಿಕನ್ ಪಾಪ್ ಕಾರ್ನ್ ಕೊಟ್ಟ ಮೇಲೆಯೇ ಅಮೂಲ್ಯ ವಿಚಾರಣೆಗೆ ಸಹಕರಿಸಿದ್ದಾಳೆ. ಇನ್ನು ವಿಚಾರಣೆ ವೇಳೆ ಕೂಡ ಅಪ್ರಬ್ದುಳಂತೆ ವರ್ತಿಸುತ್ತಿದ್ದಾಳೆ ಎನ್ನಲಾಗಿದೆ.
Advertisement