
ನವದೆಹಲಿ: ಆಲ್ ಇಂಡಿಯಾ ಫುಟ್‍ಬಾಲ್ ಫೆಡರೇಷನ್ (AIFF) ಎಎಸ್‍ಸಿ ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಫುಟ್‍ಬಾಲ್ ತಂಡ ಉತ್ತಮ ಪ್ರದರ್ಶನ ನೀಡಬೇಕೆಂಬ ಕಾರಣಕ್ಕೆ ತಂಡಕ್ಕೆ ಸ್ಫೂರ್ತಿ ತುಂಬಲು ಓರ್ವ ಜ್ಯೋತಿಷಿಯನ್ನು ನೇಮಕ ಮಾಡಿಕೊಂಡ ಬಗ್ಗೆ ವರದಿಯಾಗಿದೆ.
ಭಾರತ ಫುಟ್‍ಬಾಲ್ ತಂಡ ಎಎಫ್‍ಸಿ ಏಷ್ಯಾ ಕಪ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿ ಭಾಗವಹಿಸಲು ಅರ್ಹರಾದ 24 ತಂಡಗಳ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಯಶಸ್ಸಿನ ಹಿಂದೆ ಜ್ಯೋತಿಷಿಯ ಚಮತ್ಕಾರವಿದೆ ಎಂಬ ಕುರಿತು ಚರ್ಚೆಯಾಗುತ್ತಿದೆ. ಇದನ್ನೂ ಓದಿ: ಬೀದಿ ಬೀದಿ ಸುತ್ತಾಡಬೇಡಿ ಕೊಹ್ಲಿ, ರೋಹಿತ್ ವಿರುದ್ಧ ಬಿಸಿಸಿಐ ಗರಂ
ಈ ಬಗ್ಗೆ ತಂಡದೊಂದಿಗಿದ್ದ ಆಪ್ತರೊಬ್ಬರು ಮಾಹಿತಿ ಹಂಚಿಕೊಂಡಿದ್ದು, ತಂಡದೊಂದಿಗಿದ್ದ ಜ್ಯೋತಿಷಿಗೆ ಫುಟ್‍ಬಾಲ್ ಫೆಡರೇಷನ್ 16 ಲಕ್ಷ ರೂ. ಸಂಭಾವನೆ ನೀಡಿದೆ. ಲಕ್ಷ, ಲಕ್ಷ ಸುರಿದು ಜ್ಯೋತಿಷಿಯನ್ನು ತಂಡಕ್ಕೆ ಮಾರ್ಗದರ್ಶನ ನೀಡಲು ಕರೆಸಿಕೊಳ್ಳಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಮಾಹಿತಿ ಹೊರಬರುತ್ತಿದ್ದಂತೆ ಫುಟ್‍ಬಾಲ್ ಪ್ರಿಯರು ಎಐಎಫ್‍ಎಫ್ ವಿರುದ್ಧ ಕೆಂಡಾಮಂಡಲವಾಗಿದ್ದು, ಫುಟ್‍ಬಾಲ್ ಭಾರತದಲ್ಲಿ ಜನಮನ್ನಣೆ ಪಡೆದುಕೊಳ್ಳುತ್ತಿರುವಾಗ ಈ ರೀತಿಯ ಕೆಲಸದಿಂದ ಕೆಟ್ಟ ಅಭಿಪ್ರಾಯ ಮೂಡಿಸಬೇಡಿ. ಫುಟ್‍ಬಾಲ್ ಪಂದ್ಯಗಳಲ್ಲಿ ಗೆಲುವು ಎಂಬುದು ಆಟಗಾರರ ಪರಿಶ್ರಮದಿಂದಲೇ ಹೊರತು ಯಾವುದೇ ಜ್ಯೋತಿಷಿಯ ಮಾರ್ಗದರ್ಶನದಿಂದಲ್ಲ ಇಂತಹ ಹುಚ್ಚು ಸಾಹಸ ಬಿಡಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಕೊರೊನಾ ಪಾಸಿಟಿವ್?