CinemaLatestMain PostSouth cinema

`ಪುಷ್ಪ’ -2ಗೆ ಐಕಾನ್ ಸ್ಟಾರ್ ಸಂಭಾವನೆ ಕೇಳಿದ್ರೆ ಶಾಕ್ ಆಗೋದು ಗ್ಯಾರೆಂಟಿ

ಟಾಲಿವುಡ್ ಅಂಗಳದ ಸೂಪರ್ ಸ್ಟಾರ್ ಅಲ್ಲು ಅರ್ಜುನ್ `ಪುಷ್ಪ’ ಚಿತ್ರದ ನಂತರ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರೋ ಸ್ಟಾರ್. ಇನ್ನು `ಪುಷ್ಪ’ ಚಿತ್ರ ಬಾಕ್ಸ್ಆಫೀಸ್ ಭರ್ಜರಿ ಹಿಟ್ ಆದ ಮೇಲೆ ಅಲ್ಲು ಅರ್ಜುನ್ ತಮ್ಮ ಸಂಭಾವನೆಯನ್ನ ಎರಡು ಪಟ್ಟು ಹೆಚ್ಚಿಸಿಕೊಂಡಿದ್ದಾರೆ.

ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಅಭಿನಯದ `ಪುಷ್ಪ ದಿ ರೈಸ್’ ಕಳೆದ ವರ್ಷ ಅಂತ್ಯದಲ್ಲಿ ರಿಲೀಸ್ ಆಗಿ ಭಾರೀ ಸೌಂಡ್ ಮಾಡಿತ್ತು. ಕೋಟಿ ಕೋಟಿ ಕಲೆಕ್ಷನ್ ಕೂಡ ಮಾಡಿತ್ತು. ಇದೀಗ `ಪುಷ್ಪ’ ಚಿತ್ರದ ಮುಂದುವರೆದ ಭಾಗಕ್ಕಾಗಿ ಚಿತ್ರೀಕರಣದ ತಯಾರಿ ನಡೆಯುತ್ತಿದೆ. ಅದರ ಬೆನ್ನೇಲ್ಲೇ ಅಲ್ಲು ಅರ್ಜುನ್ ಡಿಮ್ಯಾಂಡ್ ಮಾಡಿರೋ ಸಂಭಾವನೆ ಕೇಳಿ ಚಿತ್ರತಂಡ ಶಾಕ್ ಆಗಿದ್ದಾರೆ.

ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿರೋ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕೆರಿಯರ್ ಬಿಗ್ ಬ್ರೇಕ್ ಕೊಟ್ಟಿರೋ ಚಿತ್ರ `ಪುಷ್ಪ’ ಈ ಚಿತ್ರಕ್ಕಿಂತ ಅಲ್ಲು ಅರ್ಜುನ್ ಎರಡು ಪಟ್ಟು ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಈಗ ʻಪುಷ್ಪʼ ಸೀಕ್ವೆಲ್‌ಗೆ 100 ಕೋಟಿ ಸಂಭಾವನೆ ಕೇಳಿದ್ದಾರೆ ಎಂಬ ಸುದ್ದಿ ಟಿಟೌನ್ ಅಡ್ಡಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಬೊಂಬಾಟ್ ಭೋಜನದಲ್ಲಿ ವಾರ ಪೂರ್ತಿ ಸಿಲೆಬ್ರಿಟೀಸ್

ತೆಲುಗು ಚಿತ್ರರಂಗದ ಅತೀ ಹೆಚ್ಚು ಸಂಭಾವನೆ ಲಿಸ್ಟ್ನಲ್ಲಿ ಈಗ ಅಲ್ಲು ಅರ್ಜುನ್ ಮುಂಚೂಣಿಯಲ್ಲಿದ್ದಾರೆ. ಇನ್ನು ಅಲ್ಲು ಅರ್ಜುನ್ `ಪುಷ್ಪ 2′ ಜತೆ ಬೇರೇ ಬೇರೆ ಸ್ಕ್ರೀಪ್ಟ್‌ ಕೇಳೋದ್ರರಲ್ಲಿ ಬ್ಯುಸಿಯಾಗಿದ್ದಾರೆ. ನಟಿ ರಶ್ಮಿಕಾ ಮನಾಲಿಯಲ್ಲಿ ರಣ್‌ಬೀರ್ ಕಪೂರ್ ಜತೆ `ಅನಿಮಲ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ `ಪುಷ್ಪ 2′ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಅಲ್ಲು ಮತ್ತು ರಶ್ಮಿಕಾ ಜೋಡಿಯನ್ನ `ಪುಷ್ಪ’ 2ನಲ್ಲಿ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

Leave a Reply

Your email address will not be published.

Back to top button