ಬೆಂಗಳೂರು: ಶೃತಿ ಹರಿಹರನ್ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಜೊತೆ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರಿಕರಣದಲ್ಲಿ ಭಾಗಿಯಾಗಿರುವ ಶೃತಿ ಸುದೀಪ್ ಜೊತೆ ನಟಿಸುತ್ತಿರುವುದರ ಬಗ್ಗೆ ತಮ್ಮ ಸಂತಸವನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ.
‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದಲ್ಲಿ ಜೂ. ಅಂಬರೀಶ್ ಪಾತ್ರದಲ್ಲಿ ಸುದೀಪ್ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಸುದೀಪ್ ಅವರಿಗೆ ಜೋಡಿಯಾಗಿ ಶೃತಿ ಹರಿಹರನ್ ಕಾಣಿಸಿಕೊಳ್ಳುತ್ತಿದ್ದಾರೆ.
Advertisement
Advertisement
ನಿಮ್ಮ ಜೊತೆ ಕೆಲಸ ಮಾಡುವುದು ತುಂಬಾ ಖುಷಿ ಕೊಡುತ್ತದೆ. ನಿಮ್ಮಿಂದ ಕಲಿಯಲು ಸಾಕಷ್ಟು ಇದೆ. ನಿಮಗೆ ಸಂಗೀತ, ಆಹಾರ ಹಾಗೂ ಸಿನಿಮಾ ಮೇಲೆ ತುಂಬಾ ಕಾಳಜಿ ಇದೆ. ನಿಮ್ಮಲ್ಲಿರುವ ಮಗುವಿನ ಸ್ವಭಾವ ಆಗಾಗ ಹೊರಬರುವುದು ನನಗೆ ಇಷ್ಟವಾಗುತ್ತದೆ. ಚಿತ್ರೀಕರಣದ ವೇಳೆ ನಿಮ್ಮ ಜೊತೆ ಕಾಲ ಕಳೆಯೋಕೆ ಕಾಯುತ್ತಿದ್ದೇನೆ ಎಂದು ಶೃತಿ ಹರಿಹರನ್ ಟ್ವೀಟ್ ಮಾಡಿದ್ದಾರೆ.
Advertisement
Advertisement
ಶೃತಿ ಟ್ವೀಟ್ಗೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್, “ನನ್ನಲ್ಲಿ ಮಗುವಿದೆಯಾ! ಶ್. ನೀನು ನನ್ನ ಸಿರಿಯಸ್ ಇಮೇಜ್ ಹಾಳು ಮಾಡುತ್ತಿರುವೆ ಎಂದು ತಮಾಷೆ ಮಾಡಿದ್ದಾರೆ. ನಿನ್ನ ಜೊತೆ ಕೆಲಸ ಮಾಡುತ್ತಿರುವುದು ನನಗೆ ಖುಷಿಯಾಗುತ್ತಿದೆ. ನಿಮ್ಮ ಮುಂದೆ ಜೀವನದಲ್ಲಿ ಮಾಡುವ ಎಲ್ಲ ಕೆಲಸಗಳಿಗೆ ನಾನು ಶುಭಕೋರುತ್ತೇನೆ. ಚಿಯರ್ಸ್ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.
@KicchaSudeep such a pleasure working with you Sir…. So much to learn from you. Ur passion for music,food and cinema is infectious. And I love how the child in you comes alive now nd then ???? Looking forward to the last few days of #Aambiningvayasaayitho ???? pic.twitter.com/iJtZlahl2M
— sruthihariharan (@sruthihariharan) April 20, 2018
Child in me !!! ,,,,,,Shhssss ????
U r spoiling my serious person image ,,,,
????????
It’s been wonderful working wth u too @sruthihariharan ..
Wshn u all th very best for everythn u do.
Cheers. https://t.co/YzpOielHEU
— Kichcha Sudeepa (@KicchaSudeep) April 21, 2018