ದಕ್ಷಿಣ ಭಾರತದ ನಟಿ ಸಮಂತಾ (Actress Samantha) ಅನಾರೋಗ್ಯದಿಂದ ಕೊಂಚ ಚೇತರಿಸಿಕೊಂಡಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ನಟಿಸುವತ್ತ ಬ್ಯುಸಿಯಾಗಿದ್ದಾರೆ. ಸದ್ಯ ಬಾಲಿವುಡ್‌ನಿಂದ ಬಂಪರ್ ಆಫರ್ ಬರುತ್ತಿರುವ ಬೆನ್ನಲ್ಲೇ ಸಮಂತಾ ಮುಂಬೈನಲ್ಲಿ 3 ಬೆಡ್‌ರೂಮ್ ಮನೆ ಖರೀದಿಸಿದ್ದಾರೆ. ಇದನ್ನೂ ಓದಿ: ಅಕ್ಷಯ್ ಕುಮಾರ್ ಜೊತೆಗಿನ ನಿಶ್ಚಿತಾರ್ಥ ಮುರಿದ ಬಗ್ಗೆ ಅಸಲಿ ಕಾರಣ ತಿಳಿಸಿದ `ಕೆಜಿಎಫ್ 2′ ನಟಿ


ಸದ್ಯ ಬಾಲಿವುಡ್‌ನ (Bollywood) ವರುಣ್ ಧವನ್ ಜೊತೆಗಿನ ʻಸಿಟಾಡೆಲ್ʼ (Citadel) ವೆಬ್ ಸರಣಿಯಲ್ಲಿ ಸಮಂತಾ ಕಾಣಿಸಿಕೊಳ್ತಿದ್ದಾರೆ. ಹಿಂದಿ ಸಿನಿಮಾಗಳಿಗೆ ನಟಿಸಲು ಬೇಡಿಕೆ ಹೆಚ್ಚಾಗಿರುವ ಕಾರಣ ವಾಸಿಸಲು ಸ್ವಂತ ಮನೆ ಖರೀದಿಸಿದ್ದಾರೆ. 3 ಬೆಡ್‌ರೂಮ್ ಇರುವ ಐಷಾರಾಮಿ ಮನೆಯನ್ನ ನಟಿ ಖರೀದಿಸಿದ್ದಾರೆ. 15 ಕೋಟಿ ರೂಪಾಯಿ ಬೆಲೆ ಬಾಳುವ ಮನೆಯನ್ನ ಕೊಂಡುಕೊಂಡಿದ್ದಾರೆ. ಈ ಬಗ್ಗೆ ಹಿಂದಿ ಮಾಧ್ಯಮಗಳಲ್ಲಿ ವರದಿ ಆಗಿದೆ.
ಸಮಂತಾ ನಟನೆಯ `ಶಾಕುಂತಲಂ’ ಸಿನಿಮಾ ಫೆ.17ರಂದು ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಇನ್ನೂ 10 ದಿನ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಈ ಬಗ್ಗೆ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k

