`ಸೀತಾ ರಾಮಂ’ (Seetha Ramam) ಖ್ಯಾತಿಯ ನಟಿ ಮೃಣಾಲ್ ಠಾಕೂರ್ ಸೌತ್ ಮತ್ತು ಬಾಲಿವುಡ್ (Bollywood) ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ನಟಿ ಮೃಣಾಲ್‌ಗೆ ಮದುವೆ ಪ್ರಪೋಸಲ್‌ವೊಂದು ಅರಸಿ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ನಟಿಗೆ ಮದುವೆಯಾಗುವಂತೆ ಅಭಿಮಾನಿಯೊಬ್ಬ ಮನವಿ ಮಾಡಿದ್ದಾರೆ. ಈ ವೀಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ದುಲ್ಕರ್ ಸಲ್ಮಾನ್‌ಗೆ (Dulquer Salman) ನಾಯಕಿಯಾಗುವ ಮೂಲಕ ಸೌಂಡ್ ಮಾಡಿದ್ದ ನಟಿ ಮೃಣಾಲ್‌ಗೆ ಚಿತ್ರರಂಗದಲ್ಲಿ ಬಂಪರ್ ಅವಕಾಶಗಳು ಅರಸಿ ಬರುತ್ತಿದೆ. ತೆಲುಗಿನಲ್ಲಿ ನಾನಿಗೆ ಮತ್ತು ಬಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್‌ಗೆ (Akshay Kumar) ನಾಯಕಿಯಾಗುವ ಮೂಲಕ ಮೃಣಾಲ್ ಗಮನ ಸೆಳೆಯುತ್ತಿದ್ದಾರೆ. ಇದನ್ನೂ ಓದಿ: ಪವನ್ ಕಲ್ಯಾಣ್ ಚಿತ್ರದಲ್ಲಿ ಸೊಂಟ ಬಳುಕಿಸಲು ಸಜ್ಜಾದ ನಟಿ ಶ್ರೀಲೀಲಾ
ಇದೀಗ ಸೋಷಿಯಲ್ ಮೀಡಿಯಾದಲ್ಲಿ ನಟಿ ಮೃಣಾಲ್‌ಗೆ ಅಭಿಮಾನಿ ಕಡೆಯಿಂದ ಮದುವೆ ಪ್ರಪೋಸಲ್ ಬಂದಿದೆ. ಅದಕ್ಕೆ ಪ್ರತಿಯಾಗಿ ನಟಿ ಖಡಕ್ ಉತ್ತರ ನೀಡಿದ್ದಾರೆ.
View this post on Instagram
ಇತ್ತೀಚಿಗೆ ನಟಿ ಮೃಣಾಲ್ ಚೆಂದದ ವೀಡಿಯೋವೊಂದು ಶೇರ್ ಮಾಡಿದ್ದರು. ಈ ವೀಡಿಯೋ ಕ್ಯೂಟ್ ಎನಿಸಿತು. ಆಮೇಲೆ ಡಿಲೀಟ್ ಮಾಡಬಹುದು ಎಂದು ಅಡಿಬರಹ ನೀಡಿದ್ದರು. ಈ ವೀಡಿಯೋಗೆ ಅಭಿಮಾನಿಯೊಬ್ಬ, ನನ್ನ ಕಡೆಯಿಂದ ಸಂಬಂಧ ಪಕ್ಕಾ ಎಂದು ಕಾಮೆಂಟ್ ಮಾಡಿದ್ದರು. ಇದಕ್ಕೆ ಉತ್ತರಿಸಿದ ನಟಿ, ನನ್ನ ಕಡೆಯಿಂದ ನೋ ಎಂದು ಹೇಳಿದ್ದಾರೆ. ಅಭಿಮಾನಿಯ ಮದುವೆ ಪ್ರಪೋಸಲ್‌ಗೆ ಮೃಣಾಲ್, ನೋ ಎಂದು ಖಡಕ್ ಉತ್ತರ ಕೊಟ್ಟಿದ್ದಾರೆ.