ಬೆಂಗಳೂರು: ಸ್ಯಾಂಡಲ್ವುಡ್ನ ಕ್ಯೂಟ್ ಬೇಬಿ ಅಮೂಲ್ಯ ಮದುವೆಗೆ ಡೇಟ್ ಫಿಕ್ಸ್ ಆಗಿದೆ. ಮುಂಬರುವ ಮೇ 12ರಂದು ಅಮೂಲ್ಯ ಆದಿಚುಂಚನಗಿರಿಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಹಸೆಮಣೆ ಏರಲಿದ್ದಾರೆ.
ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ, ಕುಟುಂಬ ವರ್ಗದವರ ಜೊತೆಗೆ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಅಮೂಲ್ಯ ಹಾಗೂ ಜಗದೀಶ್ ವಿವಾಹ ನಡೆಯಲಿದೆ.
Advertisement
ಮದುವೆ ಮುಗಿದು ನಾಲ್ಕು ದಿನಗಳ ಬಳಿಕ ಮೇ 16ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಸಮಾರಂಭ ನಡೆಯಲಿದೆ. ಆದ್ರೆ ಸದ್ಯಕ್ಕೆ ರಿಸೆಪ್ಷನ್ ನಡೆಯುವ ಸ್ಥಳ ಇನ್ನೂ ಫಿಕ್ಸ್ ಆಗಿಲ್ಲ. ಇದೇ ಮಾರ್ಚ್ 6ರಂದು ಅಮೂಲ್ಯ ಹಾಗೂ ಜಗದೀಶ್ ವಿವಾಹ ನಿಶ್ಚಿತಾರ್ಥ ನಡೆದಿತ್ತು. ಅಮೂಲ್ಯ ಹಾಗೂ ಜಗದೀಶ್ ಮದುವೆ ಮಾತುಕತೆಗೆ ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ ಮುನ್ನುಡಿ ಬರೆದಿದ್ದರು.
Advertisement
ಇದನ್ನೂ ಓದಿ: ನಟಿ ಅಮೂಲ್ಯ, ಜಗದೀಶ್ ಪ್ರಪೋಸಲ್ ಹೇಗಾಯ್ತು: ನಟ ಗಣೇಶ್ ದಂಪತಿ ಹೇಳ್ತಾರೆ