ಬೆಂಗಳೂರು: ಖಾಸಗಿ ಕಾಲೇಜಿನಲ್ಲಿ ಸಿಇಟಿ (CET) ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ (Janivara Row) ತೆಗೆಸಿದ ಘಟನೆ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಪರಿ ವೀಕ್ಷಕರಾದ ಸರಿತಾ, ಗಿರಿಜಮ್ಮ, ಪರೀಕ್ಷಾ ಕೇಂದ್ರದ ಉಸ್ತುವಾರಿ ಸುಧಾಕರ್ ಬಂಧಿತ ಆರೋಪಿಗಳು. ವಿದ್ಯಾರ್ಥಿ ನೀಡಿದ ದೂರಿನ ಅನ್ವಯ ಬಿಎನ್‌ಎಸ್ 299, 302 ರೆಡ್ ವಿತ್ 3 and 5 ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸುವ ಘಟನೆ ಕೊನೆಯಾಗಲಿ, ಇದು ಕಾಂಗ್ರೆಸ್‌ನ ಕುಮ್ಮಕ್ಕಿನಿಂದ ನಡೆದ ಘಟನೆ: ಆರ್.ಅಶೋಕ್
ನಿನ್ನೆ ಸಿಇಟಿ ಪರೀಕ್ಷೆ ವೇಳೆ ಮಡಿವಾಳದ ಕೃಪನಿಧಿ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿಗಳಿಗೆ ಜನಿವಾರ ಧರಿಸಲು ಅವಕಾಶ ಇಲ್ಲ.. ತೆಗೆದು ಪರೀಕ್ಷೆ ಬರೆಯಬೇಕು.. ಇಲ್ಲವೇ ಮನೆಗೆ ಹೋಗಿ ಅಂತಾ ಬೆದರಿಸಿದ್ರು. ಈ ವೇಳೆ ವಿದ್ಯಾರ್ಥಿಗಳು ಜನಿವಾರ ತೆಗೆದು ಪರೀಕ್ಷೆಗೆ ಹಾಜರಾಗಿದ್ರು.



